ಮಡಿಕೇರಿ, ಆ. ೫: ಜಮ್ಮಾ ಜಾಗದ ವಿಚಾರಕ್ಕೆ ಸಂಬAಧಿಸಿದAತೆ ರಾಜ್ಯ ಉಚ್ಚ ನ್ಯಾಯಾಲಯದ ಮೂಲಕ ಇದೀಗ ಬಂದಿರುವ ತೀರ್ಪು ಸ್ವಾಗತಾರ್ಹವಾಗಿದೆ. ಆದರೆ ಜಮ್ಮಾ ಆಸ್ತಿ ಪರಬಾರೆಯಾಗದಂತೆ ನಡೆಸಿಕೊಂಡು ಹೋಗುವ ಜವಾಬ್ದಾರಿ ಆಯಾ ಕೊಡವ ಕುಟುಂಬದವರ ಮೇಲಿದೆ ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ.
ತೀರ್ಪಿನ ಕುರಿತಾಗಿ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಅವರು, ಈ ತೀರ್ಪಿನ ಹಿನ್ನೆಲೆ ಜಮ್ಮಾ ಬಾಣೆ ಸ್ವತ್ತಿನ ಮಾಲೀಕತ್ವದ ವಿಚಾರದ ಗೊಂದಲಕ್ಕೆ ತೆರೆಬಿದ್ದಂತಾಗಿದೆ. ಮಾಲೀಕತ್ವ ಸರಕಾರದ್ದು ಆಗಿರದೆ ಕೊಡವ ಸಾಗುವಳಿ ದಾರರದ್ದಾಗಿ ರುತ್ತದೆ. ಇದರಿಂದ ವಿವಿಧ ಸೌಲಭ್ಯಗಳು, ಸಾಲ ಮತ್ತು ಸರಕಾರದ ಯೋಜನೆಗಳನ್ನು ಸದ್ವಿನಿಯೋಗ ಪಡಿಸಿಕೊಳ್ಳಲು ಸಾಗುವಳಿದಾರರಿಗೆ ಯಾವುದೇ ಅಡೆತಡೆ ಇಲ್ಲದೆ ಅವಕಾಶವಾಗಲಿದ್ದು, ಇದು ಮಹತ್ವದ ತೀರ್ಪಾಗಿದೆ ಎಂದಿದ್ದಾರೆ. ಆದರೆ ಜಮ್ಮಾ ಆಸ್ತಿ ಪರಬಾರೆಯಾಗದಂತೆ ನಡೆಸಿಕೊಂಡು ಹೋಗುವ ಜವಾಬ್ದಾರಿ ಕುಟುಂಬದವರ ಹೆಗಲ ಮೇಲಿರುವದು ಸ್ಪಷ್ಟ ಎಂದು ಸುಬ್ರಮಣಿ ಹೇಳಿದ್ದಾರೆ.