ಮಡಿಕೇರಿ, ಆ. ೪: ಮಡಿಕೇರಿ ಕೊಡವ ಸಮಾಜದಲ್ಲಿ ಭಾನುವಾರ ಮಳೆಗಾಲದ ಚಳಿಯ ವಾತಾವರಣದ ನಡುವೆ ಮೈಬಿಸಿಯೇರಿಸುವ ವೈವಿಧ್ಯಮಯ ಖಾದ್ಯಗಳ ಪರಿಮಳ ನೆರೆದಿದ್ದವರ ಬಾಯಲ್ಲಿ ನೀರೂರಿಸಿತ್ತು. ಮದ್ದುಪಾಯಸದ ಘಮ ಘಮ... ಇದರೊಂದಿಗೆ ನಾಡ್ಕೋಳಿ, ಬೈಂಬಳೆಕರಿ ಸೇರಿದಂತೆ ಮಳೆಗಾಲದ ಸಂದರ್ಭದ ವಿವಿಧ ಖಾದ್ಯಗಳು ಜತೆಗೆ ಒಂದಿಷ್ಟು ಮಾಮೂಲಿ ಎನಿಸಿರುವ ಪಂದಿ ಕರಿ ಇತ್ಯಾದಿಗಳ ಸ್ಪರ್ಧೆ.... ಪ್ರದರ್ಶನ... ಭೋಜನ., ಇದರೊಂದಿಗೆ ಸಾಂಸ್ಕೃತಿಕ ಪ್ರದರ್ಶನ, ವಿವಿಧ ಸ್ಪರ್ಧೆಗಳು ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳ ಸಂಭ್ರಮ ಜರುಗಿತು.
ಇವೆಲ್ಲದಕ್ಕೂ ಕಾರಣವಾಗಿದ್ದು, ಕಕ್ಕಡದ ವಿಶೇಷತೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ನೂತನ ಆಡಳಿತ ಮಂಡಳಿಯು ತನ್ನ ಪ್ರಥಮ ಕಾರ್ಯಕ್ರಮವಾಗಿ ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಸಹಯೋಗದಲ್ಲಿ ಕಕ್ಕಡ ೧೮ರ ಅಂಗವಾಗಿ ಕಕ್ಕಡನಮ್ಮೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕೊಡವ ಅಕಾಡೆಮಿಯ ಪದಾಧಿಕಾರಿಗಳು, ಪೊಮ್ಮಕ್ಕಡ ಕೂಟದ ಬಳಗ, ಕೊಡವ ಸಮಾಜದವರು, ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಸಂಭ್ರಮದೊAದಿಗೆ ತೊಡಗಿಸಿ ಕೊಂಡಿದ್ದರು. ಕೇವಲ ತಿಂಡಿ ತಿನಿಸುಗಳಿಗಷ್ಟೆ ಸೀಮಿತವಾಗದೆ, ಸಭಾ ಕಾರ್ಯಕ್ರಮ, ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮದಂತಹ ವೈವಿಧ್ಯತೆ ಕಕ್ಕಡನಮ್ಮೆಯ ಸಂಭ್ರಮವನ್ನು ಹೆಚ್ಚಿಸಿತ್ತು.
ಮಹಿಳೆಯರು ತಯಾರಿಸಿದ ಮಳೆಗಾಲದ ಕಕ್ಕಡ ತಿಂಗಳಲ್ಲಿ ಕಾಡುಮೇಡುಗಳಲ್ಲಿ ಸಿಗುವ ಸೊಪ್ಪಿನ ಪಾಯಸ, ತೋಡುತೊರೆಗಳಲ್ಲಿ ಸಿಗುವ ಏಡಿ(ಞಂಡ್) ಕೊಯಿಲೆಮೀನು, ತಾತೆ ಸೊಪ್ಪಿನ ಪಲ್ಯ, ಕೊವಲೆಪುಟ್ಟ್, ಹಲಸಿನ ಬೀಜದಿಂದ ತಯಾರಿಸಿದ ಚೆಕ್ಕೆಕುರು ಪಜ್ಜಿ, ನಾಟಿಕೋಳಿ ಸಾರು, ಪಂದಿಕರಿ, ಬೈಂಬಳೆ ಕರಿ, ಕಾಡ್ ಮಾಂಗೆ ಕರಿ, ಬಾಳೆ ನುರ್ಕ್.. ಸ್ಪರ್ಧೆಯಲ್ಲಿ ಆಕರ್ಷಣೀಯವಾಯಿತಲ್ಲದೆ ವಿವಿಧ ತಂಡಗಳಿAದ ಮೂಡಿಬಂದ ಕೊಡವ ನೃತ್ಯ ಆಕರ್ಷಣೀಯವಾಗಿತ್ತು. ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಮಂಡುವAಡ ಪಿ. ಮುತ್ತಪ್ಪ ಅವರು ದೀಪಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮೊದಲ ಕಾರ್ಯಕ್ರಮವಾದ ಕಕ್ಕಡ ನಮ್ಮೆಯನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು. ಸಾಹಿತ್ಯದ ಬೆಳವಣಿಗೆಗೆ ಅಕಾಡೆಮಿಯು ಇನ್ನಷ್ಟು ಕಾರ್ಯವನ್ನು ಮಾಡುವಂತಾಗಲಿ ಎಂದು ಆಶಿಸಿದರು. ಕೊಡವ ಭಾಷಿಕ ಜನಾಂಗವನ್ನು ಒಗ್ಗೂಡಿಸುವ ಮೂಲಕ ಕೊಡವ ಸಂಸ್ಕೃತಿಯನ್ನು ಉಳಿಸಿ - ಬೆಳೆಸುವಂತಾಗಬೇಕೆAದರು.
ಕಕ್ಕಡ ತೀನಿ ಪ್ರದರ್ಶನವನ್ನು ಉದ್ಘಾಟಿಸಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಅಂತರರಾಷ್ಟಿçÃಯ ಮಟ್ಟದಲ್ಲಿ ಹೆಸರುಗಳಿಸಿರುವ ಮಹಿಳಾ ಉದ್ಯಮಿ ಕುಪ್ಪಂಡ ಛಾಯಾನಂಜಪ್ಪ ಮಾತನಾಡಿ, ಸಮಾಜದಲ್ಲಿ ಮಹಿಳೆಯರ ಸಾಧನೆಯ ಹಿಂದಿನ ಶ್ರಮದ ಬಗ್ಗೆ ವಿವರಿಸಿದರಲ್ಲದೆ ಮಡಿಕೇರಿಯ ಪೊಮ್ಮಕ್ಕಡ ಕೂಟದ ಸಾಧನೆ ಬಗ್ಗೆ ಪ್ರಶಂಸಿಸಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡವ ಜನಾಂಗದ ಕೃಷಿ ಬದುಕಿನ ವಿಶೇಷತೆಯ ಬಗ್ಗೆ ವಿವರಿಸಿದರು. ಅಂದಿನ ಕೃಷಿ ಬದುಕಿನ ಚಿತ್ರಣವೇ ಬೇರೆ, ಇಂದಿನ ಕೃಷಿ ಬದುಕಿನ ಚಿತ್ರಣವೇ ಬೇರೆ ಎಂದರು. ಕೊಡವರು ವಿವಿಧ ಕ್ಷೇತಗಳಲ್ಲಿ ಸಾಧನೆಗೈಯುತ್ತಿರುವುದು ಪ್ರಶಂಸನೀಯವೆAದರು. ಕೊಡವ ಜನಾಂಗದ ಮೂಲನೆಲೆಯಾದ ಐನ್ ಮನೆ, ಕೈಮಡ, ಗುರು ನೆಲೆಗಳ ರಕ್ಷಣೆಯ ಜವಾಬ್ದಾರಿ ಹೊರಬೇಕಿದೆ. ವಿಶ್ವದಲ್ಲಿ ಅತೀ ಸಣ್ಣದಾದ ಜನಾಂಗವಾದರೂ ಕೊಡವ ಜನಾಂಗದ ಕೀರ್ತಿ ಮುಗಿಲೆತ್ತರಕ್ಕೆ ತಲುಪಿ ಎಂದರು. ಕನ್ನಡದಲ್ಲಿ ಬಳಸುತ್ತಿರುವ ಕೊಡವ ಲಿಪಿ ಬದಲಾಗಬೇಕಿದೆ ಕೊಡವ ಜನಾಂಗದ ಉಳಿವಿಗಾಗಿ ಎಲ್ಲರೂ ಕೈಜೋಡಿಸ ಬೇಕೆಂದರು.
ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷರಾದ ಕನ್ನಂಡ ಕವಿತಬೊಳ್ಳಪ್ಪ ಮಾತನಾಡಿ, ಕೊಡವಾಮೆ ಹಾಗೂ ಜನಾಂಗದ ಉಳಿವಿಗಾಗಿ ಪೊಮ್ಮಕ್ಕಡ ಒಕ್ಕೂಟವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು. ಹಿರಿಯ ಲೇಖಕಿ ಮೊಣ್ಣಂಡ ಶೋಭಾ ಸುಬ್ಬಯ್ಯನವರು ಕಕ್ಕಡ ತಿಂಗತ್ ನೈಪು- ಪೈಪು- ತೀನಿ ಎಂಬ ಬಗ್ಗೆ ವಿಚಾರಮಂಡನೆ ಮಾಡಿದರು.
ಸನ್ಮಾನ: ಮಹಿಳಾ ಉದ್ಯಮಿ ಕುಪ್ಪಂಡ ಛಾಯಾನಂಜಪ್ಪ ಹಾಗೂ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಪತ್ನಿ ಪ್ರಮೀಳಾ ನಾಚಯ್ಯ ಹಾಗೂ ಮಗ ಡಾನ್ ನಾಚಯ್ಯ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಬಾಳೆಯಡ ಸವಿತಾ ಪೂವಯ್ಯ, ಪಾಲೆಯಡ ರೂಪ ಅತಿಥಿಗಳ ಪರಿಚಯಿಸಿದರು.
ಬೊಪ್ಪಂಡ ಸರಳ ಕರುಂಬಯ್ಯ ಪ್ರಾರ್ಥಿಸಿದರೆ, ಅಕಾಡೆಮಿಯ ರಿಜಿಸ್ಟ್ರಾರ್ ಅಜ್ಜಿಕುಟ್ಟೀರ ಗಿರೀಶ್ ಸ್ವಾಗತಿಸಿ, ಉಳ್ಳಿಯಡ ಸಚಿತಾ ಗಂಗಮ್ಮ ವಂದಿಸಿದರು. ಚೋಕೀರ ಅನಿತಾ ದೇವಯ್ಯ ನಿರೂಪಿಸಿದರು. ಕಾರ್ಯಕ್ರಮದ ಸಂಚಾಲಕರಾಗಿ ಕಂಬೆಯAಡ ಡೀನಾ ಬೋಜಣ್ಣ ಹಾಗೂ ಚೊಟ್ಟೆಯಂಡ ಎ.ಸಂಜು ಕಾವೇರಪ್ಪ ಕಾರ್ಯನಿರ್ವಹಿಸಿದರು.
ಅಕಾಡೆಮಿಯ ನಿರ್ದೇಶಕರಾದ ಪುತ್ತರಿರ ಪಪ್ಪುತಿಮ್ಮಯ್ಯ, ಮೊಳ್ಳೆಕುಟ್ಟಂಡ ದಿನು ಬೋಜಪ್ಪ, ಕೊಂಡಿಜಮ್ಮAಡ ಎಂ. ಬಾಲಕೃಷ್ಣ, ಪೊನ್ನಿರ ಯು. ಗಗನ್, ಕುಡಿಯರ ಕಾವೇರಪ್ಪ, ನಾಯಂದಿರ ಆರ್. ಶಿವಾಜಿ, ಚೆಪ್ಪುಡೀರ ಎಸ್ ಉತ್ತಪ್ಪ, ನಾಯಕಂಡ ಬೇಬಿ ಚಿಣ್ಣಪ್ಪ, ನಾಪಂಡ ಗಣೇಶ್ ವೇದಿಕೆಯಲ್ಲಿದ್ದರು. ನಂತರ ಪೊಮ್ಮಕ್ಕಡ ಒಕ್ಕೂಟದಿಂದ ವಿವಿಧ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮ ನೆರವೇರಿತು. -ಪುತ್ತರಿರ ಕರುಣ್ ಕಾಳಯ್ಯ