ಮಡಿಕೇರಿ, ಆ. ೪: ಏಷ್ಯನ್ ಗೇಮ್ಸ್ ಹಾಗೂ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ವಿಜೇತರಾಗಿರುವ ಕ್ರೀಡಾಪಟುಗಳಿಗೆ ರಾಜ್ಯ ಸರಕಾರ, ಇದೇ ಪ್ರಥಮ ಬಾರಿಗೆ ವಿವಿಧ ಹುದ್ದೆಗಳನ್ನು ಗೌರವಯುತವಾಗ ನೀಡಿದೆ. ಇವರ ಪೈಕಿ ಕೊಡಗಿನ ಹಾಕಿಪಟುಗಳಾದ ಎಸ್.ವಿ. ಸುನಿಲ್ ಹಾಗೂ ಚೇಂದAಡ ನಿಕಿನ್ ತಿಮ್ಮಯ್ಯ ಅವರುಗಳಿಗೆ ಅಬಕಾರಿ ಇಲಾಖೆಯಲ್ಲಿ ಅಬಕಾರಿ ಉಪ ಅಧೀಕ್ಷಕರ (ಡಿವೈಎಸ್ಪಿ) ಸ್ಥಾನವನ್ನು ನೀಡಲಾಗಿದೆ.
ಏಷ್ಯನ್ ಗೇಮ್ಸ್ ಹಾಗೂ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ವಿಜೇತರಾಗುವ ಮೂಲಕ ರಾಜ್ಯಕ್ಕೆ ಹಾಗೂ ದೇಶಕ್ಕೆ ಕೀರ್ತಿ ತಂದಿರುವುದನ್ನು ಪರಿಗಣಿಸಿ ಈ ಹುದ್ದೆಯನ್ನು ರಾಜ್ಯ ಸರಕಾರ ಗೌರವಯುತವಾಗಿ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ನೀಡಿರುವುದು ವಿಶೇಷವಾಗಿದೆ. ಈ ಬಗ್ಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಅವರು ಆದೇಶ ಹೊರಡಿಸಿದ್ದಾರೆ. ಹಲವು ವರ್ಷಗಳ ಹಿಂದಿನ ಈ ಸಾಧನೆಗೆ ಇದೀಗ ಸರಕಾರ ಮನ್ನಣೆ ನೀಡಿದ್ದು, ಸರಕಾರದ ಪತ್ರ ಸ್ವೀಕರಿಸಿದ್ದಾರೆ.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಸಂತಸ ವ್ಯಕ್ತಪಡಿಸಿರುವ ಸುನಿಲ್ ಹಾಗೂ ನಿಕಿನ್ ತಿಮ್ಮಯ್ಯ ಅವರುಗಳು ರಾಜ್ಯ ಸರಕಾರ ಇಂತಹ ಗೌರವ ನೀಡಿರುವುದು ಸಂತಸ ತಂದಿದೆ. ಇದು ಭವಿಷ್ಯದಲ್ಲೂ ಉತ್ತಮ ಕ್ರೀಡಾಪಟುಗಳು ರೂಪುಗೊಳ್ಳಲು ಪ್ರೇರಣೆಯಂತಾಗಿದೆ.
ಕ್ರೀಡಾ ಸಾಧಕರಿಗೆ ಹಲವು ಕಂಪೆನಿಗಳಲ್ಲಿ ಉದ್ಯೋಗ ದೊರೆತರೂ ಭದ್ರತೆ ಇರುವುದಿಲ್ಲ. ಇದೀಗ ರಾಜ್ಯ ಸರಕಾರವೇ ಇಂತಹ ನಿರ್ಣಯ ಕೈಗೊಂಡಿರುವುದು ಕ್ರೀಡಾಪಟುಗಳ ಹಿತದೃಷ್ಟಿಯಿಂದ ಸ್ವಾಗತಾರ್ಹವಾಗಿದೆ. ಈ ಹಿಂದೆ ಕರ್ನಾಟಕ ಒಲಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜ್, ಹಾಕಿ ಕರ್ನಾಟಕದ ಪ್ರಮುಖರಾದ ಡಾ.ಎ.ಬಿ. ಸುಬ್ಬಯ್ಯ ಸೇರಿದಂತೆ ಹಲವರ ಪರಿಶ್ರಮ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಂದಿಸಿದ್ದಾರೆ. ಸರಕಾರ ನೀಡಿರುವ ಈ ಗೌರವವನ್ನು ಸಂತೋಷವಾಗಿ ಸ್ವೀಕರಿಸಲಿರುವುದಾಗಿ ಇಬ್ಬರು ಸಾಧಕರೂ ತಿಳಿಸಿದ್ದಾರೆ. ಎ.ಬಿ. ಸುಬ್ಬಯ್ಯ ಅವರು ಪ್ರತಿಕ್ರಿಯಿಸಿ ಕ್ರೀಡೆಯ ಹಿತದೃಷ್ಟಿಯಿಂದ ಇದು ಸರಕಾರದ ಚರಿತ್ರಾರ್ಹವಾದ ನಿರ್ಧಾರ ಹಾಗೂ ಕೊಡುಗೆಯಾಗಿದೆ ಎಂದಿದ್ದಾರೆ.