ಸೋಮವಾರಪೇಟೆ, ಜು. ೨೨: ರಾತ್ರಿ ವೇಳೆಯ ಕರ್ತವ್ಯ ಮುಗಿಸಿ ಠಾಣೆಯಿಂದ ಮನೆಗೆ ತೆರಳುತ್ತಿದ್ದ ಪೊಲೀಸ್ ಸಿಬ್ಬಂದಿಯ ಬೈಕ್ ಮೇಲೆ ಸಿಲ್ವರ್ ಮರಬಿದ್ದು, ಬೈಕ್ ಜಖಂಗೊAಡು, ಪೊಲೀಸ್ ಪೇದೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಳಗುಂದ ಗ್ರಾಮದ ಶಶಿಕುಮಾರ್ ಎಂಬವರೇ ಪ್ರಾಣಾಪಾಯದಿಂದ ಪಾರಾದವರು. ನಿನ್ನೆ ರಾತ್ರಿ ಪಾಳಿಯ ಕರ್ತವ್ಯ ಮುಗಿಸಿ ಇಂದು ಬೆಳಿಗ್ಗೆ ತಮ್ಮ ಬೈಕ್ನಲ್ಲಿ ಮನೆಗೆ ತೆರುತ್ತಿದ್ದ ಸಂದರ್ಭ, ಸೋಮವಾರಪೇಟೆ-ಕೊಣನೂರು ರಾಜ್ಯ ಹೆದ್ದಾರಿಯ ತಣ್ಣೀರುಹಳ್ಳ ಗ್ರಾಮದ ಬಳಿಯಿರುವ ಕಾಫಿ ತೋಟದಲ್ಲಿದ್ದ ಸಿಲ್ವರ್ ಮರ ಭಾರೀ ಗಾಳಿಗೆ ಬೈಕ್ ಮೇಲೆ ಬಿದ್ದಿದೆ.
ಬೈಕ್ನ ಮುಂಭಾಗಕ್ಕೆ ಮರ ಬಿದ್ದ ಹಿನ್ನೆಲೆ ಪೊಲೀಸ್ ಸಿಬ್ಬಂದಿ ರಸ್ತೆಗೆ ಬಿದ್ದಿದ್ದು, ಎರಡೂ ಕಾಲಿಗೆ ಪೆಟ್ಟಾಗಿದೆ. ಹೆಲ್ಮೆಟ್ ಧರಿಸಿದ್ದರಿಂದ ತಲೆ ಭಾಗಕ್ಕೆ ಪೆಟ್ಟಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಅಧಿಕಾರಿ ಸುರೇಶ್, ಸಿಬ್ಬಂದಿಗಳಾದ ಲಕ್ಷಿö್ಮÃಕುಮಾರ್, ಈಶ್ವರ್, ಚೇತನ್, ಮಂಜು ನಾಯಕ್, ಪ್ರವೀಣ್, ಪ್ರಶಾಂತ್ ಅವರುಗಳು ಗಾಯಾಳು ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆಗೆ ಒಳಪಡಿಸಿದ್ದಾರೆ.