ಚೆಟ್ಟಳ್ಳಿ, ಜು. ೨೧: ಮಳೆ ಗಾಳಿಯಿಂದ ಚೆಟ್ಟಳ್ಳಿ- ಮಡಿಕೇರಿ ಮುಖ್ಯರಸ್ತೆಯಲ್ಲಿ ಭೂಕುಸಿತ ಉಂಟಾದ ಪ್ರದೇಶಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿ ಪರಿಶೀಲಿಸಿದರು.

ಚೆಟ್ಟಳ್ಳಿ- ಮಡಿಕೇರಿ ಮುಖ್ಯರಸ್ತೆ ಅಪಾಯದಿಂದ ಕೂಡಿದೆ. ಅಪಾಯಕಾರಿಯಾಗಿರುವ ಮರಗಳನ್ನು ತೆರವುಗೊಳಿಸುವ ಬಗ್ಗೆ ಸ್ಥಳೀಯರು ಹಾಗೂ ವಕೀಲರಾದ ಕಾಡೇಮಾಡ ವಿನ್ಸಿ ಅಪ್ಪಯ್ಯ ಅವರು ಶಾಸಕರ ಗಮನ ಸೆಳೆದರು. ಈ ಸಂದರ್ಭ ಕೆಡಿಪಿ ಸದಸ್ಯರಾದ ಸುನಿತ ಮಂಜುನಾಥ್, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿಂಧು, ಗ್ರಾಮ ಪಂಚಾಯಿತಿ ಸದಸ್ಯ ತೀರ್ಥಕುಮಾರ್, ಕಾಂಗ್ರೆಸ್ ವಲಯ ಅಧ್ಯಕ್ಷ ಮೋಹಮದ್ ರಫಿ, ಕಾರ್ಯದರ್ಶಿ ಜುಬೇರ್, ಮತ್ತಿತರರು ಹಾಜರಿದ್ದರು.