ಮಡಿಕೇರಿ, ಜು. ೨೧: ಹಳ್ಳಿಗಟ್ಟು ಮಾರಮ್ಮ ದೇವರ ವಾರ್ಷಿಕ ಉತ್ಸವದ ಎರಡನೇ ಮಾರಿಗುಡಿ ನಮ್ಮೆ ತಾ. ೨೨ ರಂದು (ಇಂದು) ನಡೆಯಲಿದೆ ಎಂದು ಶ್ರೀ ಗುಂಡಿಯತ್ ಅಯ್ಯಪ್ಪ, ಭದ್ರಕಾಳಿ ಹಾಗೂ ಮಾರಮ್ಮ ದೇವರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೆಳಿಗ್ಗೆ ೯ ಗಂಟೆಯಿAದ ಮಧ್ಯಾಹ್ನ ೨ ಗಂಟೆಯವರೆಗೆ ಧಾರ್ಮಿಕ ಕಾರ್ಯ ನಡೆಯಲಿದ್ದು, ಮಾರಮ್ಮ ದೇವರಿಗೆ ಹರಕೆ ಕಾಣಿಕೆ ಸಲ್ಲಿಸುವ ಭಕ್ತಾದಿಗಳು ಮಧ್ಯಾಹ್ನ ೨-೦೦ ಗಂಟೆಯ ಒಳಗೆ ಸಲ್ಲಿಸಬಹುದುದಾಗಿದೆ. ಜೋಡುಬೀಟಿಯಿಂದ ಮೂಕಳೇರ ಹಾಗೂ ಮಚ್ಚಿಯಂಡ ಐನ್ಮನೆಗೆ ಹೋಗುವ ರಸ್ತೆಯಲ್ಲಿರುವ ಈ ದೇವಸ್ಥಾನಕ್ಕೆ ಪುರಾತನ ಕಾಲದ ಇತಿಹಾಸವಿದ್ದು ವರ್ಷಕ್ಕೆ ಎರಡು ಬಾರಿ ಮಾತ್ರ ಇಲ್ಲಿ ವಿಶೇಷವಾಗಿ ಪೂಜೆ ಹಾಗೂ ಹಬ್ಬ ನಡೆಯುತ್ತದೆ.
ಕೊಡವ ಕುಟುಂಬದವರೇ ಇಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದು, ಮಚ್ಚಿಯಂಡ ಕುಟುಂಬ ಪೂಜಾ ಕಾರ್ಯವನ್ನು ನಿರ್ವಹಿಸುತ್ತದೆ ಎಂದು ತಿಳಿಸಿದ್ದಾರೆ.