ಚೆಯ್ಯಂಡಾಣೆ, ಜು. ೨೧: ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇತು ಗ್ರಾಮದಿಂದ ಬಲಮುರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಕ್ಕಿಕಡವು ಎಂಬಲ್ಲಿ ಮೋರಿ ಕುಸಿದು ವಾಹನಗಳ ಸಂಚಾರಕ್ಕೆ ತೊಡಕುಂಟಾಗಿದೆ.

ಕಳೆದ ಕೆಲವು ದಿನಗಳಿಂದ ನಾಪೋಕ್ಲು ವಿಭಾಗದದಲ್ಲಿ ಸುರಿದ ಧಾರಾಕಾರ ಮಳೆಗೆ ಗದ್ದೆಗಳ ಮಧ್ಯಭಾಗಕ್ಕಾಗಿ ಸಾಗುವ ರಸ್ತೆಗೆ ಅಳವಡಿಸಿದ್ದ ಮೋರಿಯ ಮಧ್ಯಭಾಗ ಕುಸಿದು ಅಪಾಯದ ಗುಂಡಿ ಗೋಚರಿಸಿದೆ.ಇದರಿಂದ ವಾಹನಗಳ ಸಂಚಾರಕ್ಕೆ ತೊಡಕುಂಟಾಗುತ್ತಿದೆ.ಬಲಮುರಿ ಪಾರಾಣೆ ಗ್ರಾಮದಿಂದ ನಾಪೋಕ್ಲು ಪಟ್ಟಣಕ್ಕೆ ಸಮೀಪದ ರಸ್ತೆ ಇದಾಗಿದ್ದು ಈ ಮಾರ್ಗವಾಗಿ ಹಲವಾರು ವಾಹನಗಳು ಪ್ರತಿನಿತ್ಯ ಸಂಚರಿಸುತ್ತಿವೆ.ಆದ್ದರಿAದ ಸಂಬAಧಪಟ್ಟವರು ಈ ರಸ್ತೆಯಲ್ಲಿ ಕುಸಿದಿರುವ ಭಾಗವನ್ನು ಶೀಘ್ರದಲ್ಲಿ ದುರಸ್ತಿಪಡಿಸಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.