ಚೆಯ್ಯಂಡಾಣೆ, ಜು. ೨೧: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಚೆಯ್ಯಂಡಾಣೆಯಿAದ ಪಾರಾಣೆ ರಸ್ತೆಯ ಮೂಲಕ ಸಂಚರಿಸುವಾಗ ಚರ್ಮೆಕಾಡು ಪೈಸಾರಿಗೆ ತೆರಳುವ ಪ್ರಯಾಣಿಕರ ತಂಗುದಾಣದ ಸಮೀಪ ವಿದ್ಯುತ್ ಕಂಬವೊAದು ರಸ್ತೆಗೆ ವಾಲಿ ನಿಂತಿದೆ. ವಿದ್ಯುತ್ ಕಂಬದ ಕೆಳಭಾಗ ಶಿಥಿಲಗೊಂಡು, ಮುರಿದು ಬೀಳುವ ಹಂತದಲ್ಲಿದ್ದು, ಅಪಾಯಕ್ಕೆ ಅಹ್ವಾನ ನೀಡುವಂತಿದೆ. ಕೂಡಲೇ ಸಂಬAಧಪಟ್ಟ ಚೆಸ್ಕಾಂ ವಿದ್ಯುತ್ ಕಂಬ ಸರಿಪಡಿಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.