ಕುಶಾಲನಗರ, ಜು. ೨೦: ಕಾವೇರಿ ನದಿಗೆ ಹುಣ್ಣಿಮೆ ಅಂಗವಾಗಿ ಕುಶಾಲನಗರದಲ್ಲಿ ತಾ. ೨೧ ರಂದು (ಇಂದು) ೧೬೧ನೇ ಮಹಾ ಆರತಿ ಕಾರ್ಯಕ್ರಮ ನಡೆಯಲಿದೆ. ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ಆರತಿ ಕ್ಷೇತ್ರದಲ್ಲಿ ಸಂಜೆ ೫.೩೦ಕ್ಕೆ ನಡೆಯಲಿದೆ.
ಹುಣ್ಣಿಮೆ ಅಂಗವಾಗಿ ಭಾಗಮಂಡಲ, ಚೆಟ್ಟಿಮಾನಿ, ನಾಪೋಕ್ಲು, ಚೆರಿಯಪರಂಬು ಸಿದ್ದಾಪುರ, ನೆಲ್ಲಿಹುದಿಕೇರಿ ಕರಡಿಗೋಡು, ಗುಹ್ಯ, ಮಾದಾಪಟ್ಟಣ, ಬೈಚನಹಳ್ಳಿ ಕೂಡುಮಂಗಳೂರು, ಕೊಪ್ಪ ಗ್ರಾಮ ವ್ಯಾಪ್ತಿಯ ನದಿ ತಟಗಳು ಸೇರಿದಂತೆ ಸುಮಾರು ೨೦ಕ್ಕೂ ಅಧಿಕ ಸ್ಥಳಗಳಲ್ಲಿ ನಮಾಮಿ ಕಾವೇರಿ ಬಳಗ ಮೂಲಕ ಏಕಕಾಲದಲ್ಲಿ ಮಹಾ ಆರತಿ ಕಾರ್ಯಕ್ರಮ ನಡೆಯಲಿದೆ ಎಂದು ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್ ತಿಳಿಸಿದ್ದಾರೆ.