ಮಡಿಕೇರಿ, ಜು. ೧೯: ಭಾಗಮಂಡಲ ಭಗಂಡೇಶ್ವರ ದೇವಾಲಯದ ಮುಂಭಾಗ ತ್ರಿವೇಣಿ ಸಂಗಮದಲ್ಲಿ ನಿರ್ಮಿಸಲಾದ ಉದ್ಯಾನವನ ಮತ್ತು ಸುತ್ತಲು ಅಳವಡಿಸಿದ್ದ ಗ್ರಿಲ್ಸ್ ತುಂಡಾಗಿ ನಿನ್ನೆಯ ಮಳೆಗೆ ನೀರಿನಲ್ಲಿ ಮುಳುಗಿದೆ.

ಕಾವೇರಿಯ ತುಲಾ ಸಂಕ್ರಮಣಕ್ಕೆAದು ಕಾವೇರಿ ನೀರಾವರಿ ನಿಗಮದಿಂದ ಎರಡು ಕೋಟಿ ವಿಶೇಷ ಅನುದಾನವನ್ನು ನೀಡಲಾಗಿತ್ತು. ಕಾವೇರಿ ಜಾತ್ರೆಗೆ ಬಳಸಿ ಉಳಿಕೆಯಾದ ಅನುದಾನದಲ್ಲಿ ತ್ರಿವೇಣಿ ಸಂಗಮಕ್ಕೆ ತೆರಳುವ ಮುನ್ನವೇ ಉದ್ಯಾನವನ ನೆಲದ ಮಟ್ಟದಲ್ಲಿ ಲೈಟಿಂಗ್ಸ್ ಕಾರಂಜಿಗಳನ್ನು ನಿರ್ಮಿಸಲಾಗಿತ್ತು. ಸುಮಾರು ೬೦ ರಿಂದ ೭೦ ಅಡಿಗಳಷ್ಟು ಉದ್ದ ಅಳವಡಿಸಿರುವಂತಹ ಗ್ರಿಲ್ಸ್ ತುಂಡಾಗಿರುವುದು ನೀರಿನೊಳಗಡೆ ಕಾಣುತ್ತಿದೆ.