ಮಡಿಕೇರಿ, ಜು. ೧೮: ಕಳೆದ ಒಂದು ವಾರದಿಂದಲೂ ನಿರಂತರವಾಗಿ ಕೊಡಗು ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಇದು ಮತ್ತೂ ಮುಂದುವರಿದಿದೆ. ಸತತ ಮಳೆಯಿಂದಾಗಿ ಜಿಲ್ಲೆಯ ಹಲವೆಡೆಗಳಲ್ಲಿ ಜಲದಿಗ್ಭಂಧನದ ಭೀತಿ ಎದುರಾಗಿದೆ.
ಅಲ್ಲಲ್ಲಿ ಭಾರೀ ಪ್ರಮಾಣದಲ್ಲಿ ಕಷ್ಟ - ನಷ್ಟಗಳು ಉಂಟಾಗುತ್ತಿದೆಯಲ್ಲದೆ ಜನರ ಆತಂಕ ಮತ್ತಷ್ಟು ಹೆಚ್ಚಾಗುತ್ತಿದೆ. ಕಾವೇರಿ, ಲಕ್ಷö್ಮಣ ತೀರ್ಥ ಸೇರಿದಂತೆ ವಿವಿಧ ನದಿ - ತೊರೆಗಳಲ್ಲಿ ನೀರಿನ ಮಟ್ಟ ತೀರಾ ಅಪಾಯಕಾರಿ ಹಂತ ತಲುಪಿದೆ ಮಾತ್ರವಲ್ಲ ಹಲವು ಪ್ರದೇಶಗಳು ಜಲಾವೃತಗೊಂಡಿವೆ.
ಇದೀಗ ಕೆಲವಾರು ಆಯಕಟ್ಟಿನ ಪ್ರದೇಶಗಳಲ್ಲಿ ಜನತೆಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಈಗಾಗಲೇ ಹಲವು ಕುಟುಂಬಗಳು ಸ್ಥಳಾಂತರಗೊAಡಿದ್ದರೆ, ಇತರ ಜನತೆಗೂ ಸ್ಥಳಾಂತರ ಮಾಡುವಂತೆ ಸೂಚನೆಗಳನ್ನು ನೀಡಲಾಗುತ್ತಿದೆ. ಮಳೆಗಾಲದ ಸಂದರ್ಭದಲ್ಲಿ ಭಾರೀ ಅಪಾಯಕ್ಕೆ ತುತ್ತಾಗುವ ಕುಶಾಲನಗರ ವಿವಿಧ ಬಡಾವಣೆಗಳು, ಸಿದ್ದಾಪುರ, ನೆಲ್ಲಿಹುದಿಕೇರಿ, ಕರಡಿಗೋಡು, ಕೂಡುಮಂಗಳೂರು ವಿಭಾಗದಲ್ಲಿ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ವಾಹನಗಳ ಮೂಲಕ ಸಂದೇಶ ನೀಡಿ ಸೂಚನೆ ನೀಡಲಾಗುತ್ತಿರುವ ಸನ್ನಿವೇಶವೂ ಕಂಡು ಬಂದಿದೆ. ಚೇಲಾವರ, ಕಗ್ಗೋಡ್ಲು, ಅಂಬಟ್ಟಿ, ಕುಶಾಲನಗರ, ನೆಲ್ಲಿಹುದಿಕೇರಿ ವ್ಯಾಪ್ತಿಯಲ್ಲಿ ಕೆಲವರು ಸ್ಥಳಾಂತರಗೊAಡಿದ್ದಾರೆ.
ಭಾಗಮAಡಲದಲ್ಲಿ ನೀರಿನಮಟ್ಟ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಸಂಗಮ, ಉದ್ಯಾನವನ ಜಲಾವೃತಗೊಂಡಿದೆಯಲ್ಲದೆ ಇಂದು ದೇವಸ್ಥಾನದ, ಮೆಟ್ಟಿಲಿನ ತನಕವೂ ನೀರು ಏರಿಕೆಯಾಗಿದೆ.
ಬೇತ್ರಿ, ಕೊಟ್ಟಮುಡಿ, ಸಿದ್ದಾಪುರ, ಕುಶಾಲನಗರ, ಕಣಿವೆ ವ್ಯಾಪ್ತಿಯಲ್ಲಿ ಕಾವೇರಿಯ ರಭಸ ಜನಾತಂಕ ಹೆಚ್ಚಾಗುವಂತಾಗಿದೆ. ಲಕ್ಷö್ಮಣ ತೀರ್ಥ ನದಿಯಲ್ಲೂ ನೀರಿನ ಮಟ್ಟ ಅಪಾಯಕಾರಿ ಹಂತದತ್ತ ತಲುಪಿದೆ.
ಹಲವೆಡೆಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮಡಿಕೇರಿ - ಸಂಪಾಜೆ ಮಾರ್ಗದಲ್ಲಿ ಕರ್ತೋಜಿ ಬಳಿ ಗುಡ್ಡಕುಸಿತದ ಅಪಾಯದ ಹಿನ್ನೆಲೆಯಲ್ಲಿ ರಾತ್ರಿ ಸಂಚಾರ ನಿರ್ಬಂಧಿಸಲಾಗಿದೆ. ಒಟ್ಟಾರೆಯಾಗಿ ಇಡೀ ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನೂ ಕೆಲ ದಿನಗಳ ಕಾಲ ಮಳೆಯ ತೀವ್ರತೆ ಮುಂದುವರಿಯುವ ಮುನ್ಸೂಚನೆಯಿದ್ದು, ಜನರ ಆತಂಕ ಹೆಚ್ಚಾಗುತ್ತಿದೆ. ಸೋಮವಾರದಿಂದಲೇ ಶಾಲಾ - ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ತಾ. ೧೯ ರಂದು (ಇಂದು) ಕೂಟ ರಜೆ ನೀಡಲಾಗಿದೆ.
ಮನೆಗಳು ಜಖಂಗೊಳ್ಳುತ್ತಿರುವುದು, ಬರೆಕುಸಿತ, ಮರಗಳು ಬಿದ್ದು ರಸ್ತೆ ಸಂಪರ್ಕ ಕಡಿತವಾಗುತ್ತಿರುವಂತಹ ಪ್ರಕರಣಗಳು ಮುಂದುವರಿದಿವೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸತತ ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಗ್ರಾಮೀಣ ಪ್ರದೇಶಗಳು ಕಾರ್ಗತ್ತಲಿನಿಂದ ಕೂಡಿವೆ. ಮಳೆ - ಗಾಳಿಯ ನಡುವೆ ಕೆಲವೆಡೆಗಳಲ್ಲಿ ಕಾಡಾನೆಗಳ ಹಾವಳಿಯೂ ಹೆಚ್ಚಾಗುತ್ತಿರುವುದು ಜನತೆ ಭಯದ ನೆರಳಿನಲ್ಲಿ ರಾತ್ರಿ ಕಳೆಯುವಂತಾಗಿದೆ. ಮಳೆ ಗಾಳಿಯ ಪರಿಣಾಮವನ್ನು ಎದುರಿಸಲು ಸಂಬAಧಪಟ್ಟ ಇಲಾಖೆಗಳ ಸಿಬ್ಬಂದಿಗಳು ಹರಸಾಹಸ ಪಡುವಂತಾಗಿದೆ.
(ಮೊದಲ ಪುಟದಿಂದ)
ಮಡಿಕೇರಿ ತಾಲೂಕಿಗೆ ಸರಾಸರಿ ೪ ಇಂಚು
ಗುರುವಾರ ಬೆಳಿಗ್ಗೆ ೮.೩೦ಕ್ಕೆ ಕೊನೆಗೊಂಡAತೆ ಜಿಲ್ಲೆಯಲ್ಲಿ ಸರಾಸರಿ ೩ ಇಂಚು ಮಳೆಯಾಗಿದ್ದರೆ ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೪ ಇಂಚು ಮಳೆ ದಾಖಲಾಗಿದೆ. ವೀರಾಜಪೇಟೆ ತಾಲೂಕಿನಲ್ಲಿಯೂ ೨.೫೭ ಇಂಚು, ಪೊನ್ನಂಪೇಟೆ ೩.೧೦, ಸೋಮವಾರಪೇಟೆ ೪, ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೧.೩೪ ಇಂಚು ಮಳೆಯಾಗಿದೆ.
ಶಾಂತಳ್ಳಿ - ಭಾಗಮಂಡಲ ಅಧಿಕ
ಕಳೆದ ೨೪ ಗಂಟೆಗಳಲ್ಲಿ ಶಾಂತಳ್ಳಿ, ಭಾಗಮಂಡಲ ಹೋಬಳಿಯೊಂದಿಗೆ ಮಡಿಕೇರಿ ಹೋಬಳಿಯಲ್ಲಿಯೂ ಅಧಿಕ ಮಳೆಯಾಗಿದೆ. ಶಾಂತಳ್ಳಿ ೬.೯೬ ಇಂಚು, ಭಾಗಮಂಡಲ ೫.೦೧, ಮಡಿಕೇರಿ ಹೋಬಳಿಯಲ್ಲಿ ೫.೩೧ ಇಂಚು ಮಳೆಯಾಗಿದೆ. ಉಳಿದಂತೆ ನಾಪೋಕ್ಲು ೨.೩೧, ಸಂಪಾಜೆ ೩.೩೮, ವೀರಾಜಪೇಟೆ ೨.೫೯, ಅಮ್ಮತ್ತಿ ಹೋಬಳಿಯಲ್ಲಿ ೨.೫೬ ಇಂಚು ಮಳೆಯಾಗಿದೆ.
ಶ್ರೀಮಂಗಲ ೩.೯೧, ಹುದಿಕೇರಿ ೩.೫೦, ಪೊನ್ನಂಪೇಟೆ ೨.೬೮, ಬಾಳೆಲೆ ೨.೧೦, ಸೋಮವಾರಪೇಟೆ ೨.೩೭, ಶನಿವಾರಸಂತೆ ೩, ಕೊಡ್ಲಿಪೇಟೆ ೩.೫೪, ಸುಂಟಿಕೊಪ್ಪ ೧.೮೦, ಕುಶಾಲನಗರ ಹೋಬಳಿಯಲ್ಲಿ ೦.೮೮ ಇಂಚು ಮಳೆ ದಾಖಲಾಗಿದೆ.
ಚೆಯ್ಯಂಡಾಣೆ: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಟ್ಟ ತಟ್ಟಾಮಕ್ಕಿ ಪೈಸಾರಿಗೆ ತೆರಳುವ ರಸ್ತೆಗೆ ಅಡ್ಡಲಾಗಿ ಬೃಹತ್ ಮರ ಉರುಳಿ ಬಿದ್ದಿದೆ. ಗ್ರಾಮಸ್ಥರು ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಚೆಯ್ಯಂಡಾಣೆ: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಟ್ಟ ತಟ್ಟಾಮಕ್ಕಿ ಪೈಸಾರಿಗೆ ತೆರಳುವ ರಸ್ತೆಗೆ ಅಡ್ಡಲಾಗಿ ಬೃಹತ್ ಮರ ಉರುಳಿ ಬಿದ್ದಿದೆ. ಗ್ರಾಮಸ್ಥರು ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಹಲವಾರು ಕಡೆಗಳಲ್ಲಿ ನೀರು ಆವರಿಸುತ್ತಿದೆ. ನದಿ ಪಾತ್ರಗಳು ತೋಡು - ತೊರೆಗಳು, ಕೆರೆಗಳು ತುಂಬಿದ್ದು, ಜಲಾವೃತಗೊಳ್ಳುತ್ತಿದೆ. ತಗ್ಗಿನ ಪ್ರದೇಶಗಳಲ್ಲಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಗದ್ದೆಗಳು ಮುಳುಗಡೆಯಾಗಿವೆ. ಸತತ ಎಂಟು ದಿನಗಳಿಂದಲೂ ಧಾರಾಕಾರವಾಗಿ ಮಳೆ ಬೀಳುತ್ತಿರುವುದರಿಂದ ಇದೀಗ ಜಿಲ್ಲೆ ಜಲದಿಗ್ಭಂಧನದ ಭೀತಿಯನ್ನು ಎದುರಿಸುವಂತಾಗಿದೆ.
ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವತ್ತೂರು ಗ್ರಾಮದ ಲಕ್ಷಿö್ಮ ಎಂಬುವರ ಮನೆ ಮಳೆಯಿಂದಾಗಿ ಸಂಪೂರ್ಣ ಹಾನಿಯಾಗಿದ್ದ ಹಿನ್ನೆಲೆಯಲ್ಲಿ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಆಹಾರ ಕಿಟ್ ವಿತರಣೆ ಮಾಡಿದರು.
ಈ ಸಂದರ್ಭ ಕಂದಾಯ ನಿರೀಕ್ಷಕ ಸಂತೋಷ್, ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್, ಗ್ರಾಮ ಪಂಚಾಯಿತಿ ಸದಸ್ಯೆ ಫಿಲೋಮೀನಾ ಹಾಜರಿದ್ದರು.
ಸಿದ್ದಾಪುರ : ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರ ಗುಂಡಿ ಹಾಗೂ ಬೆಟ್ಟದಕಾಡು ಭಾಗದಲ್ಲಿ ಪ್ರವಾಹದ ಭೀತಿ ಎದುರಾಗಿದ್ದು ಕುಶಾಲನಗರ ತಹಶೀಲ್ದಾರ್ ಕಿರಣ್ ಗೌರಯ್ಯ ನೇತೃತ್ವದಲ್ಲಿ ಬರಡಿ ಭಾಗದ ನದಿ ತೀರದ ಮೂರು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಈ ಭಾಗದಲ್ಲಿ ಕಾವೇರಿ ನದಿಯ ನೀರಿನ ಮಟ್ಟ ಆಗಿಂದಾಗೆ ಏರಿಕೆಯಾಗುತ್ತಿದ್ದು ತಗ್ಗು ಪ್ರದೇಶದಲ್ಲಿರುವ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಅಲ್ಲದೆ, ಮತ್ತಷ್ಟು ಕುಟುಂಬಗಳನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಂಡಿದ್ದಾರೆ. ಈಗಾಗಲೇ ಪ್ರವಾಹ ಪೀಡಿತ ಪ್ರದೇಶದ ನಿವಾಸಿಗಳಿಗೆ ತುರ್ತು ಸಂದರ್ಭದಲ್ಲಿ ಆಶ್ರಯ ಸಿದ್ದಾಪುರ : ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರ ಗುಂಡಿ ಹಾಗೂ ಬೆಟ್ಟದಕಾಡು ಭಾಗದಲ್ಲಿ ಪ್ರವಾಹದ ಭೀತಿ ಎದುರಾಗಿದ್ದು ಕುಶಾಲನಗರ ತಹಶೀಲ್ದಾರ್ ಕಿರಣ್ ಗೌರಯ್ಯ ನೇತೃತ್ವದಲ್ಲಿ ಬರಡಿ ಭಾಗದ ನದಿ ತೀರದ ಮೂರು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಈ ಭಾಗದಲ್ಲಿ ಕಾವೇರಿ ನದಿಯ ನೀರಿನ ಮಟ್ಟ ಆಗಿಂದಾಗೆ ಏರಿಕೆಯಾಗುತ್ತಿದ್ದು ತಗ್ಗು ಪ್ರದೇಶದಲ್ಲಿರುವ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಅಲ್ಲದೆ, ಮತ್ತಷ್ಟು ಕುಟುಂಬಗಳನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಂಡಿದ್ದಾರೆ. ಈಗಾಗಲೇ ಪ್ರವಾಹ ಪೀಡಿತ ಪ್ರದೇಶದ ನಿವಾಸಿಗಳಿಗೆ ತುರ್ತು ಸಂದರ್ಭದಲ್ಲಿ ಆಶ್ರಯ ಪಡೆಯಲು ಸ್ಥಳೀಯ ಸರಕಾರಿ ಶಾಲೆ ಹಾಗೂ ಸಮುದಾಯ ಭವನವನ್ನು ಗುರುತಿಸಲಾಗಿದೆ ಎಂದು ತಹಶೀಲ್ದಾರ್ ಕಿರಣ್ ಗೌರಯ್ಯ ಮಾಹಿತಿ ನೀಡಿದ್ದಾರೆ.
ಸ್ಥಳದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮೊಕ್ಕಾಂ ಹೂಡಿ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದಾರೆ. ೨೦೧೯ರಲ್ಲಿ ನೆಲ್ಯಹುದಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನದಿ ತೀರದಲ್ಲಿ ಪ್ರವಾಹಕ್ಕೆ ಸಿಲುಕಿ ನೂರಾರು ಮನೆಗಳು ನೆಲಸಮಗೊಂಡಿದ್ದವು. ಈ ಪೈಕಿ ಹಲವಾರು ನಿವಾಸಿಗಳು ಇದೀಗ ಈ ಹಿಂದೆ ವಾಸ ಮಾಡುತ್ತಿದ್ದ ಸ್ಥಳದಲ್ಲಿ ಶೆಡ್ ನಿರ್ಮಿಸಿಕೊಂಡು ಪ್ರಸ್ತುತ ವಾಸವಿದ್ದರು. ಇದೀಗ ಮತ್ತೆ ಪ್ರವಾಹ ಭೀತಿ ಎದುರಾಗಿದ್ದು ಮುಂದೇನು ಮಾಡಬೇಕೆಂದು ದಿಕ್ಕು ತೋಚುತ್ತಿಲ್ಲವೆಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
ಸಿದ್ದಾಪುರ ಕಾವೇರಿ ಸೇತುವೆ ಬಳಿ ಸಿ.ಕೆ. ಪೂವಯ್ಯ ಎಂಬವರಿಗೆ ಸೇರಿದ ಗದ್ದೆಗಳು ಜಲಾವೃತಗೊಂಡಿವೆ. ಅಲ್ಲದೆ ಕೂಡುಗದ್ದೆಯ ನಿವಾಸಿಗಳ ಗದ್ದೆಗಳಿಗೂ ಕೂಡ ನೀರು ತುಂಬಿದೆ. ನೆಲ್ಯಹುದಿಕೇರಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಕಂದಾಯ ಪರಿವೀಕ್ಷಕ ಸಂತೋಷ್, ಗ್ರಾಮ ಆಡಳಿತ ಅಧಿಕಾರಿ ಸಚಿನ್ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ನೆಲ್ಯಹುದಿಕೇರಿ ಗ್ರಾಮದ ಬರಡಿಯ ನದಿ ತೀರದ ಮೂರು ಸಂತ್ರಸ್ತ ಕುಟುಂಬಗಳಿಗೆ ಆಹಾರದ ಕಿಟ್ಗಳನ್ನು ವಿತರಿಸಲಾಯಿತು.
ಚೆಯ್ಯಂಡಾಣೆ: ಚೇಲಾವರದ ಪುದಿಯೋದಿ ದೇವಸ್ಥಾನಕ್ಕೆ ತೆರಳುವ ಸೇತುವೆಯ ಸಮೀಪದ ರಸ್ತೆಯ ಮೇಲೆ ಇಂದಿನ ಧಾರಾಕಾರ ಮಳೆಗೆ ತುಂಬಿ ಹರಿದ ನೀರು.ಮಡಿಕೇರಿ: ಮೂರ್ನಾಡು ಮುಖ್ಯರಸ್ತೆಯ ಕಗ್ಗೊಡ್ಲು ಗ್ರಾಮದ ಮುತ್ತಪ್ಪ ಎಂಬವರ ಅಂಗಡಿ ಮತ್ತು ಮನೆಗೆ ಮಳೆಯಿಂದ ಹೊಳೆ ತುಂಬಿ ನೀರು ಹರಿದು ಜಲಾವೃತವಾಗಿದೆ. ಈ ಕುಟುಂಬದವರನ್ನು ಸ್ಥಳಾಂತರಿಸಲು ಕ್ರಮವಹಿಸಲಾಗಿದೆ.ಕುಶಾಲನಗರ: ತಾಲೂಕಿನ ವಾಲ್ನೂರು ಗ್ರಾಮದಲ್ಲಿ ಸುರಿದ ಭಾರಿ ಮಳೆಗೆ ಗ್ರಾಮದ ಶ್ರೀಕಾಂತ್ ಎಂಬವರ ಮನೆಯ ಗೋಡೆ ಕುಸಿದು ತೀವ್ರ ಹಾನಿ ಸಂಭವಿಸಿದೆ. ಕೂಡಿಗೆ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ನದಿಯ ನೀರಿನ ಮಟ್ಟ ಏರಿಕೆ ಆಗುತ್ತಿದ್ದು, ಕಾವೇರಿ ನದಿ ದಂಡೆಯ ವ್ಯಾಪ್ತಿಯ ೧೫ ಎಕರೆಗಳಷ್ಟು ಪ್ರದೇಶದ ಬೆಳೆಯು ಜಲಾವೃತಗೊಂಡಿದೆ. ಕೃಷ್ಣಗೌಡ, ಸಂತೋಷ್, ದಿವಾಕರ್ ಎಂಬವರಿಗೆ ಸೇರಿದ ಜಮೀನಿನಲ್ಲಿ ಬೆಳೆದ ಸಿಹಿಗೆಣಸು, ಜೋಳ, ಶುಂಠಿ ಜಲಾವೃತಗೊಂಡಿದೆ. ಅಲ್ಲದೆ ಹೆಬ್ಬಾಲೆ ಸಮೀಪದಲ್ಲಿ ಕರಾಳಹಳ್ಳ ಎಂಬ ಜಾಗದಲ್ಲಿ ನಾಗಣ್ಣ, ಕುಮಾರ್ ಸಹದೇವ ಎಂಬವರಿಗೆ ಸೇರಿದ ಜಮೀನಿಗೂ ನೀರು ನುಗ್ಗಿದೆ. ಪಾಲಿಬೆಟ್ಟ: ಪಾಲಿಬೆಟ್ಟ ಸಮೀಪದ ಚೆನ್ಯಯ್ಯನಕೋಟೆ ಹೊಲಮಾಳದಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದ ಮನೆಯೊಂದು ಕುಸಿದು ಬಿದ್ದಿದೆ. ಚೆನ್ನಯ್ಯನಕೋಟೆಯ ರಾಜೇಶ್ ಎಂಬವರಿಗೆ ಸೇರಿದ ಮನೆ ಕುಸಿದು ಬಿದ್ದಿದ್ದು, ಮನೆಯಲ್ಲಿದ್ದ ಐದು ಮಂದಿ ಪ್ರಾಣಾಪಾಯದಿಂದ ಪಾರಾಗಿರುತ್ತಾರೆ. ವಿಷಯ ತಿಳಿದು ಬೆಳಿಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇಕೇರಿರ ಅರುಣ್, ಗ್ರಾಮ ಪಂಚಾಯಿತಿ ಸದಸ್ಯ ಠವಿ, ಕಂದಾಯ ಇಲಾಖೆಯ ಪ್ರವೀಣ್ ಹಾಗೂ ಲೋಕೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಸುಂಟಿಕೊಪ್ಪ: ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕಳೆದ ೧ ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ತೋಟ ಕಾರ್ಮಿಕರು ಹಾಗೂ ಸಾರ್ವಜನಿಕರು ಹೈರಾಣಾಗಿದ್ದಾರೆ.
ಸುತ್ತಮುತ್ತಲಿನ ತೋಟಗಳಲ್ಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ತೀವ್ರ ಆತಂಕಕ್ಕೊಳಗಾಗಿದ್ದಾರೆ. ಕಾಫಿ ತೋಟಗಳಲ್ಲಿ ಮರಗಳು ಧರೆಗುರುಳಿ ಅಪಾರ ಹಾನಿಯಾಗಿದ್ದು ತೋಟದೊಳಗೆ ಹಾದು ಹೋಗಿರುವ ವಿದ್ಯುತ್ ಕಂಬ ತಂತಿಗಳು ನೆಲಕ್ಕುರುಳಿ ಬಹುತೇಕ ಗ್ರಾಮಗಳು ಕತ್ತಲೆಯಲ್ಲಿವೆ. ಅದೇ ರೀತಿ ಸುಂಟಿಕೊಪ್ಪ ನಗರದಲ್ಲಿ ವ್ಯಾಪಾರಸ್ಥರಿಗೆ ವ್ಯಾಪಾರವಿಲ್ಲದೆ ಆಕಾಶ ನೋಡುವಂತಾಗಿದೆ. ಈಗಾಗಲೇ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಸುಮಾರು ೪೦ ಇಂಚಿನಷ್ಟು ಮಳೆಯಾಗಿದ್ದು, ಕಳೆದ ವರ್ಷಕ್ಕಿಂತ ಅಧಿಕ ಮಳೆಯಾಗಿದೆ.
ಸುಂಟಿಕೊಪ್ಪದಿAದ ಮಾದಾಪುರಕ್ಕೆ ತೆರಳುವ ರಾಜ್ಯ ಹೆದ್ದಾರಿಯ ಇಲ್ಲಿನ ಲಾಯರ್ ತೋಟದ ಬಳಿ ಮೋರಿ ನಿರ್ಮಿಸಿದ್ದು, ಇದಕ್ಕೆ ತಡೆಗೋಡೆ ನಿರ್ಮಿಸದೆ ಇರುವುದರಿಂದ ಜರಿಯುತ್ತಿದೆ. ರಾತ್ರಿ ವೇಳೆ ಸಂಚರಿಸುವ ವಾಹನಗಳು ಎದುರುಗಡೆ ವಾಹನಕ್ಕೆ ರಸ್ತೆ ಬಿಡುವ ಸಂದರ್ಭ ಬದಿಯಲ್ಲಿ ಭಾರಿ ಹೊಂಡವಿದ್ದು, ಅದರೊಳಗೆ ಬೀಳುವ ಸಾಧ್ಯತೆ ಅಧಿಕವಾಗಿದೆ. ಸಂಬAಧಿಸಿದ ಇಲಾಖೆಯವರು ಇತ್ತ ಗಮನ ಹರಿಸಿ ರಸ್ತೆ ಬದಿಪೊನ್ನಂಪೇಟೆ: ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಲಕ್ಷ್ಮಣತೀರ್ಥ ನದಿ ತುಂಬಿ ಹರಿಯುತ್ತಿದ್ದು, ಕಾನೂರು ಸೇತುವೆ ಬಳಿ ನೀರಿನ ಹರಿವು ಹೆಚ್ಚಾಗಿ ಗದ್ದೆಗಳು ಜಲಾವೃತಗೊಂಡಿವೆ. ತಡೆಗೋಡೆ ನಿರ್ಮಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.ಕಣಿವೆ: ಭಾರೀ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ನದಿಯಾದ ಕಾವೇರಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳ ದುಬಾರೆಯ ಸಾಕಾನೆಯ ಶಿಬಿರಕ್ಕೆ ಧಾವಿಸುವ ಪ್ರವಾಸಿಗರ ವಾಹನ ನಿಲುಗಡೆ ಪ್ರದೇಶ ಜಲಾವೃತವಾಗಿವೆ. ಪ್ರವಾಸಿಗರನ್ನು ಆಕರ್ಷಿಸಲು ನದಿ ತೀರದ ಅಲ್ಲಲ್ಲಿ ನಿರ್ಮಿಸಿರುವ ಶೆಡ್ಗಳು, ಮಕ್ಕಳ ಆಟೋಟದ ಪರಿಕರಗಳು ಜಲಾವೃತಗೊಂಡಿವೆ. ಕಳೆದ ಎರಡು ತಿಂಗಳ ಹಿಂದಷ್ಟೇ ನೀರೇ ಇಲ್ಲದೇ ಸಂಪೂರ್ಣ ಒಣಗಿದ್ದ ದುಬಾರೆಯ ಕಾವೇರಿ ತೀರ ಇದೀಗ ಸಂಪೂರ್ಣವಾಗಿ ಜಲಮಯವಾಗಿದೆ. ಗೋಣಿಕೊಪ್ಪಲು: ಬಿಡುವು ನೀಡದೇ ಸುರಿಯುತ್ತಿರುವ ಮಳೆಯಿಂದಾಗಿ ಗೋಣಿಕೊಪ್ಪ ನಗರದ ಕೀರೆಹೊಳೆಯು ಅಪಾಯದ ಮಟ್ಟ ತಲುಪಲು ಇನ್ನೂ ಕೆಲವು ಅಡಿಗಳಷ್ಟೆ ಬಾಕಿ ಇದೆ. ಕೀರೆಹೊಳೆಯ ನೀರು ಪ್ರತಿಷ್ಠಿತ ಎಂ.ಎA.ಲೇಔಟ್ನ ಮನೆಗೆ ನುಗ್ಗಿದ್ದು ಮನೆಯವರು ಮುಂಜಾಗ್ರತಾ ಕ್ರಮವಾಗಿ ಮನೆಯ ಸಾಮಗ್ರಿಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಕೀರೆಹೊಳೆಗೆ ಹೆಚ್ಚಾಗಿ ಕಸ ಕಡ್ಡಿ ಹರಿದು ಬಂದು ಸೇತುವೆ ಅಡಿಯಲ್ಲಿ ಸಿಲುಕಿಕೊಂಡಿರುವುದನ್ನು ಗಮನಿಸಿದ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಕೂಡಲೇ ಜೆಸಿಬಿ ಮೂಲಕ ಕಸ ಕಡ್ಡಿಯನ್ನು ತೆರವುಗೊಳಿಸಿ, ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡಿತು.
ಮಡಿಕೇರಿ: ಯವಕಪಾಡಿ ಬಳಿಯ ಕಾಲೋನಿಯಲ್ಲಿರುವ ಕಾವೇರಿ ಎಂಬವರಿಗೆ ಸೇರಿದ ಮನೆ ಗಾಳಿ ಮಳೆಗೆ ಹಾನಿಯಾಗಿದೆ. ಮನೆ ಮುಂಭಾಗದ ಹೆಂಚು ಧರಾಶಾಹಿಯಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಮಡಿಕೇರಿ: ಚೇಲಾವರ ಗ್ರಾಮದ ನಿವಾಸಿ ಚೆಟ್ಟಿಯಪ್ಪ ಎಂಬವರ ವಾಸದ ಮನೆಯ ಹಿಂಭಾಗದಲ್ಲಿ ಗೋಡೆ ಕುಸಿದಿದೆ. ಮನೆಯು ಸಂಪೂರ್ಣವಾಗಿ ಕುಸಿದು ಬೀಳುವ ಸಾಧ್ಯತೆಯಿದ್ದು, ಮನೆಯಲ್ಲಿ ನೆಲೆಸಿದ್ದವರನ್ನು ಸ್ಥಳಾಂತರಕ್ಕೆ ತಾಲೂಕು ಆಡಳಿತದಿಂದ ಕ್ರಮಕೈಗೊಂಡಿದೆ.ಪೊನ್ನAಪೇಟೆ: ಲಕ್ಷö್ಮಣತೀರ್ಥ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ನಿಟ್ಟೂರು-ಕಾರ್ಮಾಡು ಹಳೆ ಸೇತುವೆ ಮುಳುಗಡೆಯಾಗಿದೆ. ನಿಟ್ಟೂರು-ಕಾರ್ಮಾಡು ರಸ್ತೆಯ ಎರಡು ಕಡೆ ಗದ್ದೆಗಳು ಜಲಾವೃತವಾಗಿದ್ದು ಸಾಗರದಂತೆ ಗೋಚರಿಸುತ್ತಿವೆ. ಮಳೆ ಇದೇ ರೀತಿ ಮುಂದುವರೆದಲ್ಲಿ ಹಲವು ಕಡೆ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.