ಸೋಮವಾರಪೇಟೆ, ಜು.೧೨: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಲೋಕೋಪಯೋಗಿ ಇಲಾಖೆ ಮೂಲಕ ರಾಜ್ಯದಲ್ಲಿಯೇ ಪ್ರಥಮ ವಾಗಿ ಅನುದಾನ ಬಿಡುಗಡೆಯಾಗಿ, ಶೀಘ್ರಗತಿಯ ಕಾಮಗಾರಿಯ ಮೂಲಕ ಮುಕ್ತಾಯಗೊಂಡ ಕಕ್ಕೆಹೊಳೆ ಸೇತುವೆಯನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು.
ಮಡಿಕೇರಿ ರಸ್ತೆ ಮೂಲಕ ಪಟ್ಟಣಕ್ಕೆ ಪ್ರವೇಶ ಕಲ್ಪಿಸುವ ಬಸವೇಶ್ವರ ಪ್ರತಿಮೆ ಬಳಿಯಿದ್ದ ಕಕ್ಕೆಹೊಳೆ ಸೇತುವೆ ಶಿಥಿಲಾವಸ್ಥೆಗೆ ತಲುಪಿ, ಕುಸಿಯುವ ಹಂತದಲ್ಲಿದ್ದ ಸಂದರ್ಭ ಲೋಕೋಪ ಯೋಗಿ ಇಲಾಖೆ ವತಿಯಿಂದ ಸೇತುವೆ ಮೇಲಿನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ನೂತನ ಸೇತುವೆಗೆ ಕ್ರಿಯಾಯೋಜನೆ ತಯಾರಿಸಿ ಇಲಾಖೆಯ ಮೇಲಧಿಕಾರಿ ಗಳಿಗೆ ಸಲ್ಲಿಸಲಾಗಿತ್ತು.
ಶಾಸಕ ಮಂತರ್ ಗೌಡ ಅವರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಚರ್ಚೆ ನಡೆಸಿ, ಪ್ರಥಮ ಹಂತದಲ್ಲಿಯೇ ರೂ. ೧.೬೫ ಕೋಟಿ ಅನುದಾನ ಬಿಡುಗಡೆ ಗೊಳಿಸಿದ್ದರು. ಕಾಮಗಾರಿ ಆರಂಭ ಗೊಂಡು ನಿರೀಕ್ಷಿತ ಅವಧಿಯಲ್ಲಿ ಪೂರ್ಣಗೊಂಡ ಹಿನ್ನೆಲೆ ಇಂದು ಸೇತುವೆಯನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಮಂತರ್ ಗೌಡ, ಲೋಕೋಪ ಯೋಗಿ ಇಲಾಖೆ ಮೂಲಕ ಪ್ರಥಮ ಅನುದಾನದಲ್ಲಿ ಸೇತುವೆ ಪೂರ್ಣ ಗೊಂಡು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಿದೆ. ತ್ವರಿತವಾಗಿ ಅನುದಾನ ಬಿಡುಗಡೆ ಗೊಳಿಸಿದ ಸಚಿವರಿಗೆ ಕೃತಜ್ಞತೆ ಸಲ್ಲಿಸ ಲೇಬೇಕಿದೆ. ಇದರೊಂದಿಗೆ ಇಲಾಖಾ ಅಭಿಯಂತರರು ಕೂಡ ಶೀಘ್ರವಾಗಿ ಕೆಲಸ ಮುಗಿಸಿದ್ದು, ಶ್ಲಾಘನೆಗೆ ಅರ್ಹರಾಗಿದ್ದಾರೆ ಎಂದರು.
ಅಭಿವೃದ್ಧಿ ಕಾಮಗಾರಿಗಳಲ್ಲಿ ರಾಜಕೀಯ ಬೆರೆಸಬಾರದು. ಸಾರ್ವಜನಿಕರಿಗೆ ಉಪಯೋU Àವಾಗುವ ಎಲ್ಲಾ ರೀತಿಯ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸರ್ಕಾರ ಸಿದ್ದವಿದೆ. ಕಕ್ಕೆಹೊಳೆ ಸೇತುವೆ ನಿರ್ಮಾಣ ಮಾಡಿದರಷ್ಟೇ ಸಾಲದು, ಇದರ ನಿರ್ವಹಣೆಯೂ ಆಗಬೇಕಿದೆ. ಈ ನಿಟ್ಟಿನಲ್ಲಿ ಅಭಿಯಂತರರು ಗಮನ ಹರಿಸಬೇಕು. ಮುಂದಿನ ದಿನಗಳಲ್ಲಿ ಕಕ್ಕೆಹೊಳೆಯನ್ನು ಶುಚಿತ್ವಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾ ಗುವುದು ಎಂದರು.
ಕಕ್ಕೆಹೊಳೆ ಜಂಕ್ಷನ್ನಲ್ಲಿ ದಿನನಿತ್ಯ ಸಾವಿರಾರು ವಾಹನಗಳು, ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸಂಚರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸ್ಕೆöÊ ವಾಕರ್ ನಿರ್ಮಿಸುವ ಚಿಂತನೆಯಿದೆ.
(ಮೊದಲ ಪುಟದಿಂದ) ಈ ಬಗ್ಗೆ ಅಭಿಯಂತರರು ಕ್ರಿಯಾಯೋಜನೆ ತಯಾರಿಸಬೇಕೆಂದು ಸೂಚಿಸಿದರು. ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಜನ ಸಾಮಾನ್ಯರಿಗೆ ಅನುಕೂಲ ಕಲ್ಪಿಸುವಂತಹ ಅಭಿವೃದ್ಧಿ ಕಾರ್ಯಗಳು ನಡೆಯಬೇಕು. ಅಂತೆಯೇ ಮನಸ್ಸುಗಳನ್ನು ಕಟ್ಟುವ ಕೆಲಸ ಆಗಬೇಕು. ಹಾಗಾದಾಗ ಮಾತ್ರ ಸಮೃದ್ಧ ಸಮಾಜ ನಿರ್ಮಾಣವಾಗುತ್ತದೆ. ಈ ಸ್ಥಳದಲ್ಲಿ ಬಸವೇಶ್ವರ ಪ್ರತಿಮೆ ಇರುವುದರಿಂದ ಸೇತುವೆಗೆ ಬಸವೇಶ್ವರ ಸೇತುವೆ ಎಂದು ನಾಮಕರಣ ಮಾಡಲು ಶಾಸಕರು ಮನಸ್ಸು ಮಾಡಬೇಕು. ಬಸವೇಶ್ವರರ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸಬೇಕೆಂದರು.
ಕಾರ್ಯಕ್ರಮದಲ್ಲಿ ಮನೆಹಳ್ಳಿ ಮಠಾಧೀಶರಾದ ಮಹಾಂತ ಶಿವಲಿಂಗ ಸ್ವಾಮೀಜಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ವೈ.ಎಸ್. ಸಿದ್ದೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ವೆಂಕಟೇಶ್ ನಾಯಕ್, ಅಭಿಯಂತರರುಗಳಾದ ವಿಜಯಕುಮಾರ್, ಅರ್ಬಾಜ್, ತಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್, ಕೆಡಿಪಿ ಸದಸ್ಯ ಹೆಚ್.ಆರ್. ಸುರೇಶ್, ಆರ್ಎಂಸಿ ಮಾಜಿ ಅಧ್ಯಕ್ಷ ಬಿ.ಬಿ. ಸತೀಶ್, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಕೆ.ಎ. ಯಾಕೂಬ್, ಗ್ರಾ.ಪಂ. ಸದಸ್ಯ ಎಸ್.ಐ. ಚೇತನ್, ಪ್ರಮುಖರಾದ ಈಶ್ವರಚಂದ್ರ ಸಾಗರ್, ಹೆಚ್.ಸಿ. ನಾಗೇಶ್, ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎ. ಆದಂ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಂತರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭ ಕಾಮಗಾರಿಯನ್ನು ನಿರೀಕ್ಷಿತ ಸಮಯದಲ್ಲಿ ಪೂರ್ಣಗೊಳಿಸಿದ ಗುತ್ತಿಗೆದಾರ ಆರ್.ಸಿ. ಗಣೇಶ್ ಅವರನ್ನು ಸನ್ಮಾನಿಸಲಾಯಿತು.