ಮಡಿಕೇರಿ, ಜು. ೬: ಪೊಂಬಳ್ಚ ಕೊಡವ ಕೂಟ ಕೊಡವ ಭಾಷೆಯಲ್ಲಿ ಇದುವರೆಗೆ ಹಲವಾರು ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದೆ. ಪೈಪೋಟಿ ಎಂಬ ಹೆಸರಿನಲ್ಲಿ, ಎಲೆ ಮರೆಯಲ್ಲಿರುವ ಕೊಡವ ಜನಾಂಗದ ಬರಹಗಾರರಿಗೆ ವೇದಿಕೆ ಕಲ್ಪಿಸಲು ಇದುವರೆಗೆ ನಲವತೈದಕ್ಕೂ ಮಿಗಿಲಾಗಿ ಕಥೆ, ಕವನ, ಪ್ರಬಂಧ, ಹಾಡು, ಚಿತ್ರಕಲೆ ಹೀಗೆ ಹಲವಾರು ಕಾರ್ಯಕ್ರಮವನ್ನು ನಡೆಸುತ್ತಾ ಬರುತ್ತಿದ್ದು, ಈ ತಿಂಗಳು ಕಕ್ಕಡತ್ತೋರ್ ಚೋದ್ ಎಂಬ ಹೆಸರಿನಲ್ಲಿ ಹಾಸ್ಯ ಬರಹವನ್ನು ಆಯೋಜಿಸಿದೆ.
ಕೊಡವ ಜನಾಂಗದವರಿಗೆ ಭಾಗವಹಿಸಲು ಅವಕಾಶ ಇರುತ್ತದೆ. ಯಾವುದೇ ವಿಷಯಕ್ಕೆ ಸಂಬAಧಪಟ್ಟAತೆ ಹಾಸ್ಯಲೇಖನವನ್ನು ತಾ. ೨೭ ರೊಳಗೆ ೭೨೫೯೪೭೩೭೧೬ ಮೊಬೈಲ್ ಸಂಖ್ಯೆಗೆ ಕಳುಹಿಸಿ ಕೊಡಬೇಕಾಗಿ ಪೊಂಬಳ್ಚ ಕೂಟದ ಸಂಚಾಲಕ ಚೇನಂಡ ತೇಜ ಬೋಪಣ್ಣ ಅವರು ತಿಳಿಸಿದ್ದಾರೆ.