x
ಮಡಿಕೇರಿ, ಜು. ೬: ಚೆಟ್ಟಳ್ಳಿ ಪ್ರೌಢಶಾಲೆಯಲ್ಲಿ ೨೦೨೩-೨೪ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಶೇ. ೧೦೦ ಫಲಿತಾಂಶ ಗಳಿಸಿದ್ದಕ್ಕಾಗಿ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಸ್ಥಳೀಯ ಕಾಫಿ ಬೆಳೆಗಾರ ಬಿದ್ದಂಡ ಮಾದಯ್ಯ ಆಗಮಿಸಿದ್ದರು.
ಅಭಿನಂದನಾ ಭಾಷಣವನ್ನು ಮಾಡಿದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ ಅವರು ಶಿಕ್ಷಕರನ್ನು ಅಭಿನಂದಿಸುತ್ತಾ, ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಬದಲಾವಣೆಯಲ್ಲಿ ಶಿಕ್ಷಕರ ಸವಾಲುಗಳು, ಕರ್ತವ್ಯ ನಿಷ್ಠೆಯ ಬಗ್ಗೆ ತಿಳಿಸಿದರು.
ಮುಖ್ಯ ಅತಿಥಿ ಮಾದಯ್ಯ ಅವರು ವಿದ್ಯಾರ್ಥಿಗಳು ಶಿಸ್ತಿನ ಅಭ್ಯಾಸ ದೊಂದಿಗೆ ಚಿಂತನಾ ಸಾಮರ್ಥ್ಯಗಳನ್ನು ಬೆಳೆಸಿಕೊಂಡು ತಮ್ಮ ಕಾರ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದರು.
ಶಾಲಾ ಮುಖ್ಯೋಪಾಧ್ಯಾಯಿನಿ ಕೆ. ತಿಲಕ ಅವರು ಸನ್ಮಾನಿತ ಶಿಕ್ಷಕರ ಪರವಾಗಿ ಮಾತನಾಡಿ, ಎಲ್ಲಾ ಶಿಕ್ಷಕರ ನಿರಂತರ ಪ್ರಯತ್ನ, ಮಕ್ಕಳ ಶ್ರಮ ಮತ್ತು ಆಡಳಿತ ಮಂಡಳಿಯವರ ಸಹಕಾರವನ್ನು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೇರಿಯನ ಪಿ. ಜಯಾನಂದ ಅವರು ಮಾತನಾಡಿ, ಇದು ಗ್ರಾಮೀಣ ಪ್ರದೇಶದ ಉತ್ತಮ ಶಾಲೆಯಾಗಿದೆ. ಮುಂದಿನ ವರ್ಷಗಳಲ್ಲೂ ಉತ್ತಮ ಫಲಿತಾಂಶಕ್ಕೆ ಶ್ರಮ ವಹಿಸಬೇಕೆಂದರು.
ಆಡಳಿತ ಮಂಡಳಿ ಸದಸ್ಯೆ ಗೀತಾ ಸುಬ್ಬಯ್ಯ ಸ್ವಾಗತಿಸಿದರು. ಶಾಲೆಗೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿನಿ ವರ್ಷಿಣಿ ಅನುಭವವನ್ನು ಹಂಚಿಕೊAಡಳು.
ಶಾಲಾ ಆಡಳಿತ ಮಂಡಳಿಯ ಖಜಾಂಚಿ ಬಟ್ಟೀರ ರಕ್ಷÄ ಕಾಳಪ್ಪ ವಂದಿಸಿದರು. ಶಾಲಾ ಆಡಳಿತ ಮಂಡಳಿಯ ಸದಸ್ಯರು, ಹಳೆ ವಿದ್ಯಾರ್ಥಿಗಳು, ಶಾಲಾ ಮಕ್ಕಳು ಮತ್ತು ಶಿಕ್ಷಕ ವೃಂದದವರು ಹಾಜರಿದ್ದರು. ಸಿಹಿ ಹಂಚುವುದರೊAದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.