ಸೋಮವಾರಪೇಟೆ, ಜು. ೬: ಕೊಡಗು ಜಿಲ್ಲೆಯ ಮಡಿಕೇರಿ ಆಕಾಶವಾಣಿ ಕೇಂದ್ರದ ಉದ್ಘೋಷಕರಾಗಿ ಸೇವೆ ಸಲ್ಲಿಸುತ್ತಿದ್ದ ಕಲಾವಿದ ಶಾಂತಳ್ಳಿ ಬಿ.ಎ. ಗಣೇಶ್ ಹಾಗೂ ಕೊಡವ ಸುದ್ದಿ ಸಮಾಚಾರ ವಾರ್ತಾ ವಾಚಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚೊಟ್ಟಂಡ ದಿವ್ಯಾ ಪ್ರದೀಪ್ ಅವರನ್ನು ಕೇಂದ್ರದ ವತಿಯಿಂದ ಬೀಳ್ಕೊಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಕಾಶವಾಣಿ ಕೇಂದ್ರದ ನಿಲಯ ನಿರ್ದೇಶಕ ಪಿ.ಎಂ. ಜಗದೀಶ್ ಮಾತನಾಡಿ, ನಿವೃತ್ತಿ ಎನ್ನವುದು ಸೇವೆಗೆ ಮಾತ್ರ ವಿರಾಮ. ಆದರೆ ತಮ್ಮಲ್ಲಿರುವ ಪ್ರತಿಭೆ, ಅನುಭವವನ್ನು ಸಮಾಜಕ್ಕೆ, ಸಂಘ ಸಂಸ್ಥೆಗಳಿಗೆ ಪ್ರಚುರಪಡಿಸಿದರೆ ಜನಮಾನಸದಲ್ಲಿ ಇನ್ನಷ್ಟು ಹೆಸರು ಉಳಿಯಲು ಸಾಧ್ಯ.

ನಾವು ನಿವೃತ್ತರಾಗಿದ್ದೇವೆ ಎಂದು ಯಾರೂ ಕೂಡ ಭಾವಿಸಲೇಬಾರದು, ಪ್ರತಿನಿತ್ಯವೂ ಹುರುಪು ಹುಮ್ಮಸ್ಸಿನಿಂದ ಇರಬೇಕೆಂದರು. ಹಿರಿಯ ಉದ್ಘೋಷಕ ಸುಬ್ರಾಯ ಸಂಪಾಜೆ ಮಾತನಾಡಿ, ಕಳೆದ ಮೂವತ್ತು ವರ್ಷಗಳಿಂದ ತಮ್ಮ ಸುಶ್ರಾವ್ಯ ಸ್ವರದಿಂದ ಬಾನುಲಿ ಕೇಳುಗರಿಗೆ ಚಿರಪರಿಚಿತರಾಗಿದ್ದ ಗಣೇಶ್ ಅನೇಕ ಭಕ್ತಿಗೀತೆಗಳನ್ನು ರಚಿಸಿ, ತಾವೇ ಗಾಯಕರಾಗಿ, ಸಂಗೀತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತಿದ್ದ ಇವರು ವೈದಿಕ ಶಾಸ್ತçವನ್ನು ಕಲಿತಿದ್ದರು ಎಂದು ಹೇಳಿದರು.

ಬೀಳ್ಕೊಡುಗೆ ಸಮಾರಂಭದಲ್ಲಿ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಆನಂದನ್, ನಿವೃತ್ತ ಉದ್ಘೋಷಕಿ ಕೂಪದೀರ ಶಾರದಾ ನಂಜಪ್ಪ, ಕೇಂದ್ರದ ಸಿಬ್ಬಂದಿಗಳು, ಸುದ್ದಿ ವಾಚಕರು ಉಪಸ್ಥಿತರಿದ್ದರು.