ಗೋಣಿಕೊಪ್ಪಲು, ಜು. ೫: ಗೋಣಿಕೊಪ್ಪ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಚೇಂದAಡ ಸುಮಿ ಸುಬ್ಬಯ್ಯ ನೇಮಕಗೊಂಡಿದ್ದು, ರೋಟರಿ ಪದಗ್ರಹಣ ಅಧಿಕಾರಿಗಳಾದ ಪಿಡಿಜಿ ಪ್ರಕಾಶ್ ಕಾರಂತ್ ಅವರಿಂದ ಅಧಿಕಾರ ಸ್ವೀಕಾರ ಮಾಡಿದರು. ಕಾರ್ಯದರ್ಶಿಯಾಗಿ ಪಿ.ಆರ್. ವಿಜಯ್ ಅಧಿಕಾರ ಸ್ವೀಕರಿಸಿದರು.

ಅತ್ತೂರುವಿನ ಖಾಸಗಿ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷೆ ಸುಮಿ ಸುಬ್ಬಯ್ಯ, ರೋಟರಿ ಸಂಸ್ಥೆಯು ಹೆಚ್ಚಿನ ಮಹಿಳಾ ಸದಸ್ಯರನ್ನು ಹೊಂದಿದೆ. ಹಲವು ಜನಪರ ಸೇವಾ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ. ನನ್ನ ಅವಧಿಯಲ್ಲಿ ಇನ್ನಷ್ಟು ಜನೋಪಯೋಗಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು. ಪದಗ್ರಹಣ ಅಧಿಕಾರಿಯಾಗಿ ಆಗಮಿಸಿದ್ದ ಪಿಡಿಜಿ ಪ್ರಕಾಶ್ ಕಾರಂತ್ ಮಾತನಾಡಿ, ರೋಟರಿ ಸದಸ್ಯರು ಪ್ರಪಂಚದಲ್ಲೆಡೆ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಪ್ರೇರಿತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನಷ್ಟು ಸದಸ್ಯರನ್ನು ರೋಟರಿಗೆ ಸೇರಿಸುವ ಕೆಲಸ ಮುಂದುವರೆಯಬೇಕು. ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಸಂಸ್ಥೆಯನ್ನು ಮುನ್ನಡೆಸಬೇಕು. ನಾನಾ ರೀತಿಯ ಸಮಸ್ಯೆಗಳು ಎದುರಾದರೂ ಅದನ್ನು ಸರಿಪಡಿಸಿ ಮುಂದೆ ಸಾಗಬೇಕು. ಇದರ ಬಹುದೊಡ್ಡ ಜವಾಬ್ದಾರಿಯನ್ನು ಕ್ಲಬ್‌ನ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ನಿಭಾಯಿಸಬೇಕು ಎಂದು ಹೇಳಿದರು.

ಯಾರು ಬದಲಾದರೂ ರೋಟರಿಯ ಧ್ಯೇಯ ಬದಲಾಗುವುದಿಲ್ಲ. ರೋಟರಿಯು ಎಂದೆAದಿಗೂ ಪ್ರಸ್ತುತವಾಗಿರುತ್ತದೆ. ನಾವು ಮಾಡುವ ಕೆಲಸದಿಂದಾಗಿ ವೈವಿಧ್ಯತೆಯನ್ನು ಕಾಣಬೇಕಾಗಿದೆ. ರೋಟರಿ ಸಂಸ್ಥೆಯು ಹಲವು ಸಾಧನೆಗಳನ್ನು ಮಾಡಿದೆ. ಆ ಸಾಲಿನಲ್ಲಿ ಗೋಣಿಕೊಪ್ಪ ರೋಟರಿ ಕೂಡ ಬಂದಿರುವುದು ಶ್ಲಾಘನೀಯ. ರೋಟರಿಯಲ್ಲಿ ಸಮಾನವಾದ ಪಾಲುದಾರಿಕೆ ಇರುತ್ತದೆ. ಹೊಸಬರಿಗೆ ಅವಕಾಶಗಳನ್ನು ಹೆಚ್ಚಾಗಿ ಕೊಡುವಂತಾಗಬೇಕು. ಸೇವೆಯಲ್ಲಿ ನಿರಂತರವಾಗಿರಬೇಕು ಎಂದರು. ನಿಕಟಪೂರ್ವ ಅಧ್ಯಕ್ಷ ಕೆ. ಅರುಣ್ ತಮ್ಮಯ್ಯ ತಮ್ಮ ಅವಧಿಯಲ್ಲಾದ ಕಾರ್ಯಕ್ರಮದ ಬಗ್ಗೆ ವಿವರ ನೀಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಅಸಿಸ್ಟೆಂಟ್ ಗವರ್ನರ್ ಪಿಹೆಚ್‌ಎಫ್ ಡಿ.ಎಂ. ಕಿರಣ್, ವಲಯ ಲೆಫ್ಟಿನೆಂಟ್ ಡಾ. ಎಂ.ಯು. ಚೆಂಗಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ ರೋಟೇರಿಯನ್‌ಗಳಾದ ಪಿ.ಸಿ. ಮೀನಾಕ್ಷಿ, ಡಾ. ಕೆ.ಎನ್. ಚಂದ್ರಶೇಖರ್, ಬಿ.ಎ. ದೇಚಮ್ಮ, ಕೆ.ಬಿ. ನವೀನ್, ಟಿ.ಯು. ನರೇಂದ್ರ, ಪಿ. ದಿಲನ್ ಚಂಗಪ್ಪ, ಸುಷ್ಮ ಚಂಗಪ್ಪ, ಎಂ.ಎನ್. ರಮೇಶ್, ಲ ಎ.ಎ. ಚಂಗಪ್ಪ, ಎಂ.ಜಿ. ಮೋಹನ್, ಡಾ. ಆಶಿಕ್ ಚಂಗಪ್ಪ, ಕೆ.ಜಿ. ರಾಜೀವ್, ಕಿಶೋರ್ ಮೇದಪ್ಪ, ಪಿ.ಬಿ. ಪೂಣಚ್ಚ, ರಿಸ್ತ ಚಂಗಪ್ಪ, ಟಿ.ಬಿ. ಪೂಣಚ್ಚ, ಶೋಭ ವಿಜಯ್, ಡಾ. ಕೆ.ಪಿ. ಚಿಣ್ಣಪ್ಪ ಸೇರಿದಂತೆ ಹಲವು ಪದಾಧಿಕಾರಿಗಳು, ವಿವಿಧ ಭಾಗದಿಂದ ರೋಟರಿ ಕ್ಲಬ್‌ನ ಪದಾಧಿಕಾರಿಗಳು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ಜಾನಪದ ಪರಿಷತ್ತಿನ ಅಧ್ಯಕ್ಷ ಅನಂತಶಯನ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಗಣಪತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಕೆ. ಬೋಪಣ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕೆ.ಎ. ತಿಮ್ಮಯ್ಯ ಸ್ವಾಗತಿಸಿ, ದೀನಾ ಹಾಗೂ ಲತ ಬೋಪಣ್ಣ ನಿರೂಪಿಸಿ, ಪಿ.ಆರ್. ವಿಜಯ್ ವಂದಿಸಿದರು.