ಮಡಿಕೇರಿ, ಜು. ೪: ಕೊಡಗು ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಒಂದಷ್ಟು ಇಳಿಮುಖಗೊಂಡAತಿ ದ್ದರೂ ಇದೀಗ ನಡುನಡುವೆ ಬಿರುಸಿನ ಮಳೆಯಾಗುತ್ತಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಿನ್ನೆ ಅಪರಾಹ್ನ ಭಾರೀ ಮಳೆ ಸುರಿದಿದ್ದು, ನಂತರ ಬಿಡುವು ನೀಡಿತ್ತು. ಆದರೆ, ರಾತ್ರಿಯಿಡೀ ಮತ್ತೆ ಬಿರುಸಿನ ಮಳೆ ಸುರಿದಿದೆ. ಜಿಲ್ಲೆಯ ಇನ್ನಿತರ ಭಾಗಗಳಲ್ಲೂ ಒಂದಷ್ಟು ರಭಸದ ಮಳೆಯಾಗಿದೆ.

ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ೨.೦೫ ಇಂಚು ಮಳೆಯಾಗಿದೆ. ಜನವರಿಯಿಂದ ಈತನಕ ಒಟ್ಟು ೩೭.೭೮ ಇಂಚು ಮಳೆ ದಾಖಲಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ೧೨.೩೮ ಇಂಚು ಮಳೆಯಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ ಕಳೆದ ೨೪ ಗಂಟೆಯಲ್ಲಿ ೩.೫೦ ಇಂಚು, ವೀರಾಜಪೇಟೆ ೧.೮೧, ಪೊನ್ನಂಪೇಟೆ ೨.೦೮ ಇಂಚು, ಸೋಮವಾರಪೇಟೆ ತಾಲೂಕಿನಲ್ಲಿ ೨.೦೨ ಹಾಗೂ ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೧ ಇಂಚು ಮಳೆ ಸುರಿದಿದೆ.

ಹೋಬಳಿವಾರು ವಿವರ

ಕಳೆದ ೨೪ ಗಂಟೆಗಳ ಅವಧಿಯಲ್ಲಿ ಭಾಗಮಂಡಲ ಹೋಬಳಿಯಲ್ಲಿ ಹೆಚ್ಚಿನ ಮಳೆಯಾಗಿದೆ. ಇಲ್ಲಿ ೪.೫೩ ಇಂಚು ಮಳೆ ಸುರಿದಿದೆ. ಉಳಿದಂತೆ ಮಡಿಕೇರಿ ಕಸಬಾ ೩.೫೩, ನಾಪೋಕ್ಲು ೨.೪೮, ಸಂಪಾಜೆ ೩.೪೬ ಇಂಚು ಮಳೆ ಯಾಗಿದೆ. ವೀರಾಜಪೇಟೆ ಹೋಬಳಿ ಯಲ್ಲಿ ೨ ಇಂಚು, ಅಮ್ಮತ್ತಿ ೧.೫೮, ಹುದಿಕೇರಿ ೩.೬೦,

(ಮೊದಲ ಪುಟದಿಂದ) ಶ್ರೀಮಂಗಲ ೨.೬೮, ಪೊನ್ನಂಪೇಟೆ ೧.೨೮, ಬಾಳೆಲೆ ೦.೭೦, ಸೋಮವಾರಪೇಟೆ ಕಸಬಾ ೨ ಇಂಚು, ಶನಿವಾರಸಂತೆ ೦.೭೦, ಶಾಂತಳ್ಳಿ ೪.೪೮, ಕೊಡ್ಲಿಪೇಟೆ ೦.೭೬, ಕುಶಾಲನಗರ ೦.೭೦, ಸುಂಟಿಕೊಪ್ಪ ಹೋಬಳಿಯಲ್ಲಿ ೧ ಇಂಚು ಮಳೆ ಕಳೆದ ೨೪ ಗಂಟೆಗಳಲ್ಲಿ ಸುರಿದಿದೆ.

ಕಳೆದ ವರ್ಷ ಈ ಅವಧಿಯಲ್ಲಿ ಮಡಿಕೇರಿ ತಾಲೂಕಿನಲ್ಲಿ ೨೩.೪೬, ವೀರಾಜಪೇಟೆ ೮.೬೪, ಪೊನ್ನಂಪೇಟೆ ೮.೪೦, ಸೋಮವಾರಪೇಟೆ ೯.೪೪ ಹಾಗೂ ಕುಶಾಲನಗರ ತಾಲೂಕಿನಲ್ಲಿ ೧೧.೯೬ ಇಂಚು ಮಳೆಯಾಗಿತ್ತು. ಪ್ರಸಕ್ತ ಸಾಲಿನಲ್ಲಿ ಜನವರಿಯಿಂದ ಈತನಕ ಮಡಿಕೇರಿ ತಾಲೂಕಿನಲ್ಲಿ ೫೪.೬೪, ವೀರಾಜಪೇಟೆ ೩೯.೦೮, ಪೊನ್ನಂಪೇಟೆ ೩೭.೯೬, ಸೋಮವಾರಪೇಟೆ ೩೦.೫೨, ಕುಶಾಲನಗರ ತಾಲೂಕಿನಲ್ಲಿ ೨೬.೬೭ ಇಂಚು ಮಳೆಯಾಗಿದೆ.ಕರಿಕೆ: ಇಲ್ಲಿಗೆ ಸಮೀಪದ ಹಳೆ ಮನೆ ಎಂಬಲ್ಲಿ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಭಾಗಮಂಡಲ- ಕರಿಕೆ ಅಂತರ್‌ರಾಜ್ಯ ಹೆದ್ದಾರಿಯಲ್ಲಿ ಗಾಳಿ, ಮಳೆಗೆ ಬ್ರಹತ್ ಗಾತ್ರದ ಮರವೊಂದು ಉರುಳಿ ಬಿದ್ದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ನಂತರ ಸ್ಥಳೀಯ ಗ್ರಾಮ ಪಂಚಾಯಿತಿ ಸಹಕಾರದಿಂದ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.ಐಗೂರು : ಕಳೆದ ಬೇಸಿಗೆಯಲ್ಲಿ ನೀರಿನ ಒಳಹರಿವು ಇಲ್ಲದೆ ಸಂಪೂರ್ಣವಾಗಿ ಐಗೂರಿನ ಚೋರನ ಹೊಳೆಯು ಬತ್ತಿಹೋಗಿದ್ದು, ಬೇಸಿಗೆಯಲ್ಲಿ ಜನರಿಗೆ ಮತ್ತು ದನ ಕರುಗಳಿಗೆ ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇತ್ತೀಚೆಗೆ ಜೂನ್ ತಿಂಗಳಲ್ಲಿ ಸುರಿದ ಮಳೆಯಿಂದ ನೀರಿನ ಒಳಹರಿವು ಹೆಚ್ಚಾಗಿ ನದಿ ಪಾತ್ರದಲ್ಲಿದ್ದ ತ್ಯಾಜ್ಯವಸ್ತು ಕೊಚ್ಚಿ ಹೋಗಿದೆ. ನೀರಿನ ಹರಿವು ಹೆಚ್ಚಾಗಿ ಹೊಳೆಯು ತುಂಬಿ ಹರಿಯುತ್ತಿದೆ. -ಸುಕುಮಾರ

ಮೂರ್ನಾಡು : ಇಲ್ಲಿಗೆ ಸಮೀಪದ ಕಿಗ್ಗಾಲು ಗ್ರಾಮೀಣ ಸಂಪರ್ಕ ರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡ ಬಿದ್ದಿದ್ದು ಸಂಚಾರಕ್ಕೆ ತಡೆಯುಂಟುಮಾಡಿದೆ. ಇದರ ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ವಿದ್ಯುತ್ ಸಂಪರ್ಕಕ್ಕೆ ತಡೆಯಾಗಿದೆ.ಸುಂಟಿಕೊಪ್ಪ: ಇಲ್ಲಿನ ಪಂಪ್‌ಹೌಸ್ ಬಡಾವಣೆ ಅಂಗನವಾಡಿ ಮುಂಭಾಗದಲ್ಲಿ ರಸ್ತೆಯೂ ಬಿರುಕು ಬಿಟ್ಟು ಕುಸಿಯುವ ಹಂತದಲ್ಲಿದೆ. ರಸ್ತೆ ಕೆಲ ಭಾಗದÀಲ್ಲಿ ದೊಡ್ಡ ಹೊಂಡಗಳಿದ್ದು, ಈ ರಸ್ತೆಗಾಗಿ ಶಾಲಾ ಮಕ್ಕಳು, ಖಾಸಗಿ ವಾಹನಗಳು ಸಂಚರಿಸುತ್ತಿದ್ದು ರಸ್ತೆ ಕುಸಿದರೆ ಭಾರೀ ಅನಾಹುತ ಸಂಭವಿಸಲಿದೆ. ಅಲ್ಲದೆ ಈ ರಸ್ತೆಯ ಕೆಳ ಭಾಗದಲ್ಲಿ ಮತ್ತು ಮೇಲ್ಭಾಗದಲ್ಲಿ ನೂರಾರು ಮನೆಗಳು, ಅಂಬೇಡ್ಕರ್ ಕಾಲೋನಿ, ಅಂಗನವಾಡಿಗಳಿದ್ದು, ಅಪಾಯ ಉಂಟಾದರೆ ರಸ್ತೆ ಸಂಪರ್ಕ ಕಳೆದುಕೊಳ್ಳುವÀ ಭೀತಿ ಎದುರಾಗಿದೆ. ಈ ಸಮಸ್ಯೆಯಿಂದ ಈ ಭಾಗದ ನಿವಾಸಿಗಳು ಆತಂಕಗೊಳಗಾಗಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಕೂಡಲೆ ಗಮನ ಹರಿಸಿ ಬಿರುಕು ಬಿಟ್ಟ ರಸ್ತೆಯನ್ನು ಸರಿಪಡಿಸಿ ಮುಂದಾಗುವ ಅನಾಹುತವನ್ನು ತಪ್ಪಿಸÀಬೇಕೇಂದು ಒತ್ತಾಯಿಸಿದ್ದಾರೆ.