ಕಡಂಗ, ಜು. ೪: ಕೊಡಗು ಜಿಲ್ಲಾ ಸಖಾಫಿ ಕೌನ್ಸಿಲ್‌ನ ಜಿಲ್ಲಾಮಟ್ಟದ ಸಂಗಮ ಹಾಗೂ ವಾರ್ಷಿಕ ಮಹಾಸಭೆ ಕೊಟ್ಟಮುಡಿ ಮರ್ಕಝುಲ್ ಹಿದಾಯ ಸಂಸ್ಥೆಯಲ್ಲಿ ನಡೆಯಿತು. ಕಾರ್ಯಕ್ರಮ ದಲ್ಲಿ ಅಬ್ಬಾಸ್ ಸಖಾಫಿ ಅವರು ಅಧ್ಯಕ್ಷತೆ ವಹಿಸಿದ್ದರು. ಮಹಾಸಭೆಗೆ ಉಸ್ತುವಾರಿಗಳಾಗಿ ರಾಜ್ಯ ಸಮಿತಿ ಸದಸ್ಯರಾದ ಮುಹಮ್ಮದ್ ಅಲಿ ಸಖಾಫಿ, ಅಝೀಝ್ ಸಖಾಫಿ ಪರಪ್ಪು ಹಾಗೂ ಸತ್ತಾರ್ ಸಖಾಫಿ ಬೆಳ್ಳಾರೆ ಆಗಮಿಸಿದ್ದರು. ಪ್ರಧಾನ ಕಾರ್ಯದರ್ಶಿ ಅಝೀಝ್ ಸಖಾಫಿ ಕೊಡ್ಲಿಪೇಟೆ ೨೦೨೦-೨೪ರ ವರೆಗಿನ ವರ್ಷದ ವರದಿ ಮಂಡಿಸಿದರು. ರಾಜ್ಯ ಸಮಿತಿ ನಾಯಕರಾದ ಮಹಮ್ಮದ್ ಅಲಿ ಸಖಾಫಿ ಅಶ್ ಅರಿಯ ಮುಖ್ಯ ಭಾಷಣ ಮಾಡಿದರು.

ತಾ. ೮ ರಂದು ನಡೆಯುವ ಕರ್ನಾಟಕ ರಾಜ್ಯ ಸಖಾಫಿ ಬೃಹತ್ ಸಂಗಮದ ಯಶಸ್ವಿಗೆ ಕರೆ ನೀಡಿದರು. ನಂತರ ಅಝೀಝ್ ಸಖಾಫಿ ಪರಪ್ಪು ಅವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಅಬ್ಬಾಸ್ ಸಖಾಫಿ ಪಡಿಯಾಣಿ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ರಾಫಿ ಕಾಮಿಲ್ ಸಖಾಫಿ ಅಯ್ಯಂಗೇರಿ, ಕೋಶಾಧಿಕಾರಿಯಾಗಿ ಅಬ್ದುಲ್ಲಾ ಸಖಾಫಿ ಕೊಟ್ಟಮುಡಿ ಹಾಗೂ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು. ರಾಜ್ಯ ಸಖಾಫಿ ಕೋಶಾಧಿಕಾರಿ ಸಯ್ಯದ್ ಇಲ್ಯಾಸ್ ಸಖಾಫಿ ಐದರೂಸಿ ಅವರು ಸಮಾರೋಪ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು. ನೂತನ ಪ್ರಧಾನ ಕಾರ್ಯದರ್ಶಿ ರಾಫಿ ಸಖಾಫಿ ವಂದಿಸಿದರು.