ಸೋಮವಾರಪೇಟೆ, ಜು. ೪: ಜೆಸಿಐ ವಲಯ ೧೪ ರ ಮಧ್ಯವಾರ್ಷಿಕ ಸಮ್ಮೇಳನದಲ್ಲಿ ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ಘಟಕವು ಹಲವು ಪ್ರಶಸ್ತಿಗಳಿಗೆ ಭಾಜನವಾಗಿದೆ.

ಇತ್ತೀಚೆಗೆ ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದ ಮಧ್ಯವಾರ್ಷಿಕ ಸಮ್ಮೇಳನದಲ್ಲಿ ವಿತರಿಸಲಾಯಿತು. ‘ಔಟ್ ಸ್ಟಾö್ಯಂಡಿAಗ್ ಪ್ರೋಗ್ರಾಮ್ ವಿನ್ನರ್ ಅವಾರ್ಡ್’ ಮತ್ತು ‘ಔಟ್ ಸ್ಟಾö್ಯಂಡಿAಗ್ ಪ್ರೆಸಿಡೆಂಟ್’ ಪುರಸ್ಕಾರವನ್ನು ಜೆಸಿಐ ಸೋಮವಾರಪೇಟೆ ಘಟಕದ ಅಧ್ಯಕ್ಷ ಎಸ್.ಆರ್. ವಸಂತ್ ಸ್ವೀಕರಿಸಿದರು.

ಇದರೊಂದಿಗೆ ಜೇಸೀ ಸಂಸ್ಥೆಯಿAದ ಆಯೋಜಿಸಿದ ವಿವಿಧ ಸಾಮಾಜಿಕ ಕಾರ್ಯಕ್ರಮಗಳು, ನಾಯಕತ್ವ ತರಬೇತಿ ಸೇರಿದಂತೆ ಇನ್ನಿತರ ಕಾರ್ಯಾಗಾರಗಳನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದರ್ಭ ಜೆಸಿಐ ಸೋಮವಾರಪೇಟೆ ಘಟಕದ ಜೆ.ಎ.ಸಿ. ಉಪಾಧ್ಯಕ್ಷೆ ಮಮತಾ, ವಲಯ ೧೪ರ ಕಾರ್ಯದರ್ಶಿ ಮಾಯಾ ಗಿರೀಶ್, ರಾಷ್ಟಿçÃಯ ಅಧಿಕಾರಿ ನೆಲ್ಸನ್ ಡಿಸೋಜ, ಕಾರ್ಯದರ್ಶಿ ಜಗದಾಂಬ ಗುರುಪ್ರಸಾದ್, ಮಹಿಳಾ ಘಟಕದ ಅಧ್ಯಕ್ಷೆ ವಿನುತ ಸುದೀಪ್, ಸದಸ್ಯ ಪುಷ್ಪಕ್, ನಿಕಟಪೂರ್ವ ವಲಯಾಧಿಕಾರಿ ಗಿರೀಶ್, ಗುರುಪ್ರಸಾದ್ ಮತ್ತು ಜೂನಿಯರ್ ಜೇಸಿ ವಲಯ ಅಧ್ಯಕ್ಷೆ ದಿಶಾ ಗಿರೀಶ್ ಉಪಸ್ಥಿತರಿದ್ದರು.