ವೀರಾಜಪೇಟೆ, ಜು. ೪: ೨೦೨೦-೨೧ನೇ ಸಾಲಿನ ೧೫ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನದಡಿಯಲ್ಲಿ ಪುರಸಭಾ ವ್ಯಾಪ್ತಿಯ ವಾರ್ಡ್ ನಂ.೫ರ ನೆಹರು ನಗರದಲ್ಲಿ ನೀರು ಸರಬರಾಜಿನ ಪಂಪ್ಹೌಸ್ ನಿರ್ಮಿಸಲು ಸ್ಥಳ ದಾನ ಮಾಡಿದ ಖಾಸಿಮುಲ್ ಉಲೂಮ್ ಮದ್ರಸದ ಸಮಿತಿಯ ಪದಾಧಿಕಾರಿಗಳಾದ ಅಸ್ಗರ್ ಹುಸೈನ್, ಅಬ್ದುಲ್ರವೂಫ್ ಹಾಗೂ ಎಂ.ಜಿ. ಫಹೀಮ್ರವರನ್ನು ವೀರಾಜಪೇಟೆ ಪುರಸಭಾ ವತಿಯಿಂದ ಸನ್ಮಾನಿಸಲಾಯಿತು.
ಇತ್ತೀಚೆಗೆ ವೀರಾಜಪೇಟೆ ಕಾವೇರಿ ಕಲ್ಯಾಣ ಮಂಟಪದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಕಾರ್ಯ ನಡೆಯಿತು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಎಸ್.ಹೆಚ್. ಮತೀನ್, ಎಂ.ಕೆ. ದೇಚಮ್ಮ, ಮುಹಮ್ಮದ್ ರಾಫಿ, ಅಬ್ದುಲ್ ಜಲೀಲ್, ಪಟ್ಟಡ ರಂಜಿ ಪೂಣಚ್ಚ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಆರ್.ಕೆ. ಅಬ್ದುಸ್ಸಲಾಮ್, ಪುರಸಭಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕುಮಾರ್ ಹಾಜರಿದ್ದರು.