ಕಣಿವೆ, ಜು. ೪: ಇಲ್ಲಿನ ಹಾರಂಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಫ್ಯಾಷನ್ ಶೋ ಮತ್ತು ೨೦೨೩-೨೪ನೇ ಸಾಲಿನ ಮಿಸ್ಟರ್ ಜಿಎಫ್ ಜಿಸಿ ಮತ್ತು ಮಿಸ್ ಜಿಎಫ್ ಜಿಸಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಈ ಸ್ಪರ್ಧೆಯಲ್ಲಿ ೧೨ ಯುವಕರು ಮತ್ತು ೧೦ ಮಂದಿ ಯುವತಿಯರು ಭಾಗವಹಿಸಿದ್ದರು. ವಿವಿಧ ರೀತಿಯ ಬಣ್ಣ ಬಣ್ಣದ ವಸ್ತç ವಿನ್ಯಾಸದೊಂದಿಗೆ ಕಂಗೊಳಿಸಿದ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳ ಚಪ್ಪಾಳೆಯ ಪ್ರೋತ್ಸಾಹದೊಂದಿಗೆ ಭಾಗವಹಿಸಿ ಎಲ್ಲರ ಗಮನ ಸೆಳೆದರು.

ಯುವಕರ ವಿಭಾಗದ ೨೦೨೩-೨೪ನೇ ಸಾಲಿನ ಮಿಸ್ಟರ್ ಜಿಎಫ್‌ಜಿಸಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ತೃತೀಯ ಬಿಎ ವಿದ್ಯಾರ್ಥಿ ಹೆಚ್.ಎನ್. ಆಕಾಶ್ ತನ್ನದಾಗಿಸಿಕೊಂಡರೆ, ಯುವತಿಯರ ವಿಭಾಗದಲ್ಲಿ ತೃತೀಯ ಬಿಕಾಂ ವಿದ್ಯಾರ್ಥಿನಿ ಅಮಿತಾ ಹೆಂಡ್ರಿ ಪ್ರಥಮ ಸ್ಥಾನವನ್ನು ಪಡೆಯುವುದರೊಂದಿಗೆ ಈ ವರ್ಷದ ಅತ್ಯುನ್ನತ ಮಿಸ್ ಜಿಎಫ್‌ಜಿಸಿ ಗೌರವಕ್ಕೆ ಪಾತ್ರರಾದರು.

ಯುವಕರ ವಿಭಾಗದಲ್ಲಿ ದ್ವಿತೀಯ ಬಹುಮಾನವನ್ನು ತೃತೀಯ ಬಿಕಾಂ ವಿದ್ಯಾರ್ಥಿ ಉಜ್ವಲ್ ಹಾಗೂ ತೃತೀಯ ಬಿಕಾಂ ವಿದ್ಯಾರ್ಥಿ ಅದ್ನಾನ್ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಯುವತಿಯರ ವಿಭಾಗದಲ್ಲಿ ತೃತೀಯ ಬಿಕಾಂನ ಕೆ.ಜೆ. ದೀಪ್ತಿ ಮತ್ತು ನವೀನ ಸಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಹಂಚಿಕೊAಡರು.

ತೀರ್ಪುಗಾರರಾಗಿ ಕಾಲೇಜಿನ ಸಹ ಪ್ರಾಧ್ಯಾಪಕರುಗಳಾದ ಡಾ. ಸುನಿಲ್ ಕುಮಾರ್, ಕುಸುಮ, ಪಿ.ಪಿ. ಜಯಂತಿ, ಸಿದ್ದಪ್ಪಾಜಿ, ಹರ್ಷಿತ, ಶಾಲಿನಿ ಕಾರ್ಯನಿರ್ವಹಿಸಿದರು. ಬಹುಮಾನ ವಿತರಣೆಯನ್ನು ಕಾಲೇಜಿನ ಅರ್ಥಶಾಸ್ತç ವಿಭಾಗದ ಮುಖ್ಯಸ್ಥ ಡಾ. ಬಿ.ಡಿ. ಹರ್ಷ ಮತ್ತು ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥೆ ಕುಸುಮ ಅವರು ವಿತರಿಸಿದರು.

ಈ ಸಂದರ್ಭ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಸುಧಾಕರ್, ಉಪನ್ಯಾಸಕರುಗಳಾದ ಮನೋಜ್ ಕುಮಾರ್, ರಾಜೇಶ್, ಸಿದ್ಧರಾಮೇಗೌಡ ಸೇರಿದಂತೆ ಇತರರು ಇದ್ದರು.