ಸುಂಟಿಕೊಪ್ಪ: ಸಮೀಪದ ಏಳನೇ ಹೊಸಕೋಟೆ ಮೆಟ್ನಳ್ಳಿ ರಾಷ್ಟಿçÃಯ ಹೆದ್ದಾರಿಯಲ್ಲಿ ಬೆಳಗ್ಗಿನ ಜಾವ ನಡುರಸ್ತೆಯಲ್ಲಿ ಕಾಡಾನೆಯೊಂದು ನಿಧಾನವಾಗಿ ನಡೆಯುವ ಮೂಲಕ ಆತಂಕ ಸೃಷ್ಟಿ ಮಾಡಿದೆ. ಸಮೀಪದಲ್ಲಿ ಆನೆಕಾಡು ಅರಣ್ಯವಿದ್ದು ೭ನೇ ಹೊಸಕೋಟೆ ಗ್ರಾಮದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಹಲವಾರು ಬಾರಿ ರಸ್ತೆಯಲ್ಲಿ ಆನೆಗಳು ಸಂಚರಿಸುತ್ತಿರುವುದು ಕಂಡು ಬಂದಿದೆ. ಅಲ್ಲಿಂದ ನೇರವಾಗಿ ಕಾಫಿ ತೋಟಗಳಿಗೆ ನುಗ್ಗಿ ಕೃಷಿ ಫಸಲನ್ನು ನಾಶಗೊಳಿಸಿ ಮತ್ತೆ ರಾಜ್ಯ ಹೆದ್ದಾರಿಯಲ್ಲಿ ರಾಜ ಗಾಂಭೀರ್ಯದಿAದ ಸಾಗುತ್ತವೆ. ತೋಟಗಳಲ್ಲಿ ಗೇಟುಗಳನ್ನು ಮುಚ್ಚಿದ್ದರೆ ಸೊಂಡಿಲಿನಿAದ ದೂಡಿ ಒಳ ನುಗ್ಗುವ ಸಂದರ್ಭ ಗೇಟುಗಳು ಮುರಿದು ಬೀಳುವ ಕಾರಣ ತೋಟದ ಮಾಲೀಕರು ಗೇಟ್ ತೆರೆದಿಡುವುದರಿಂದ ಆನೆಗಳು ಸಲೀಸಾಗಿ ತೋಟಕ್ಕೆ ನುಗ್ಗಿ ಕೃಷಿ ಫಸಲನ್ನು ನಾಶಪಡಿಸುತ್ತಿವೆ ಎಂದು ಈ ಭಾಗದ ಕೃಷಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕಾಡಿನಲ್ಲಿ ಆಹಾರದ ಕೊರತೆ ಇರುವುದರಿಂದ ಕಾಡಾನೆಗಳು ನಾಡಿಗೆ ಬರುತ್ತಿವೆ. ಅರಣ್ಯ ಇಲಾಖೆ ಲಾಭ ಬರುವ ಮರವನ್ನು ಕಾಡಿನಲ್ಲಿ ಬೆಳೆಸಿದಂತೆ ಕಾಡುಪ್ರಾಣಿಗಳ ಆಹಾರದ ಬಗ್ಗೆ ಗಮನ ಹರಿಸಿ ಬೆಳೆಸುವಂತಾಗಬೇಕು; ಕಾಡಾನೆ ಹಾವಳಿಯನ್ನು ಕೂಡಲೇ ನಿಯಂತ್ರಿಸುವAತೆ ಈ ಭಾಗದ ರೈತರು ಒತ್ತಾಯಿಸಿದ್ದಾರೆ. - ರಾಜು ರೈಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದ ಸೋಮವಾರಪೇಟೆ - ಕುಶಾಲನಗರ ಸಮೀಪದ ಮುಖ್ಯ ರಸ್ತೆಯಲ್ಲಿ ಬೆಳಿಗ್ಗೆ ೮ ಗಂಟೆ ಸಮಯದಲ್ಲಿ ಕಾಡಾನೆಯೊಂದು ಗ್ರಾಮದೊಳಗೆ ನುಗ್ಗಲು ಪ್ರಯತ್ನ ನಡೆಸುತ್ತಿದ್ದುದು ಕಂಡುಬAದಿದೆ.
ಯಡವನಾಡು ಮೀಸಲು ಅರಣ್ಯ ಪ್ರದೇಶ ಕಡೆಯಿಂದ ಕಳೆದ ಒಂದು ವಾರದಿಂದಲೂ ಕಾಡಾನೆಗಳ ಹಿಂಡು ಈ ವ್ಯಾಪ್ತಿಯ ಜಮೀನಿಗೆ ದಾಳಿ ಮಾಡಿ ಬೆಳೆಗಳನ್ನು ನಷ್ಟಪಡಿಸುತ್ತಿವೆ. ಗುಂಪಿನಲ್ಲಿ ತಪ್ಪಿಸಿಕೊಂಡ ಒಂಟಿ ಕಾಡಾನೆಯು ಯಡವನಾಡು ಮೀಸಲು ಅರಣ್ಯ ಕಡೆಗೆ ಹೋಗದೆ ಸಮೀಪದ ಹುದುಗೂರು ಗ್ರಾಮದ ಮುಖ್ಯರಸ್ತೆಯನ್ನು ದಾಟಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳ ಸದ್ದು ಮತ್ತು ಜನರ ಕೂಗಾಟದಿಂದ ಸಮೀಪದ ಹಾರಂಗಿ ಮುಖ್ಯನಾಲೆ ಉಪ ಸೇತುವೆಯ ಮೇಲೆ ತೆರಳಿ ಯಡವನಾಡು ಮೀಸಲು ಅರಣ್ಯ ಪ್ರದೇಶಕ್ಕೆ ಹೋಗಿದೆ.
ಈ ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡನ್ನು ಮೀಸಲು ಅರಣ್ಯ ಪ್ರದೇಶಕ್ಕೆ ಓಡಿಸುವ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. - ಕೆ.ಕೆ.ಎನ್. ಶೆಟ್ಟಿ ಚೆಯ್ಯಂಡಾಣೆ: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆ, ನರಿಯಂದಡ, ಕೊಕೇರಿ, ಚೇಲಾವರ ಗ್ರಾಮದಲ್ಲಿ ಕಾಡಾನೆ ಹಾವಳಿ ನಿರಂತರವಾಗಿದ್ದು ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನರಿಯಂದಡ ಹಾಗೂ ಕೊಕೇರಿ ಗ್ರಾಮದ ತೋಟಗಳಲ್ಲಿ ಬೀಡುಬಿಟ್ಟ ಕಾಡಾನೆ ಸುಮಾರು ೨ ಎಕರೆಯಷ್ಟು ಜಮೀನಿನಲ್ಲಿ ಬೆಳೆದ ೧೫೦ಕ್ಕೂ ಹೆಚ್ಚು ಫಸಲು ಭರಿತ ಬಾಳೆಗಿಡವನ್ನು ತುಳಿದು ನಾಶ ಮಾಡಿದೆ. ಕೆರೆ ಸಮೀಪ ಅಳವಡಿಸಿದ್ದ ಮೋಟಾರ್ಅನ್ನು ತುಳಿದಿದೆ, ಸಮೀಪದಲ್ಲೇ ಇದ್ದ ಸ್ಪಿçಂಕ್ಲರ್ ಪೈಪ್ಗಳನ್ನು ತುಳಿದು ಹಾನಿಪಡಿಸಿದ್ದು, ತೋಟಕ್ಕೆ ಲಗ್ಗೆ ಇಟ್ಟು ಕಾಫಿ, ಅಡಿಕೆ ಮತ್ತಿತರ ಗಿಡಗಳನ್ನು ನಾಶಪಡಿಸಿದೆ. ಕೆರೆಯ ಏರಿ, ತೋಡುಗಳನ್ನು ತುಳಿದು ಅಪಾರ ಪ್ರಮಾಣದ ನಷ್ಟ ಉಂಟುಮಾಡಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಶಾಲೆಯ ತೆರಳಲು ಭಯಪಡುವಂತಾಗಿದೆ. ಕಾರ್ಮಿಕರು ತೋಟಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ತಮ್ಮ ಸಂಕಟವನ್ನು ಹೇಳಿಕೊಂಡಿದ್ದಾರೆ.
ಗ್ರಾಮಸ್ಥ ಪೊಕ್ಕುಳಂಡ್ರ ಧನೋಜ್ ಮಾತನಾಡಿ, ಈ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಕಾಡಾನೆ ನಿರಂತರ ತೋಟಗಳಲ್ಲೇ ಇದ್ದು ತೋಟಗಳನ್ನು ನಾಶ ಮಾಡಿವೆ. ಅರಣ್ಯ ಇಲಾಖೆ ನಿನ್ನೆ ಕಾಡಾನೆ ಕಾರ್ಯಾಚರಣೆ ಮಾಡಿದರೂ ತೋಟದಲ್ಲಿ ಕಾಡಾನೆ ಪತ್ತೆಯಾಗಿಲ್ಲ. ಆದರೆ ಇಂದು ಬೆಳಿಗ್ಗೆ ತೋಟಕ್ಕೆ ಬಂದು ನೋಡಿದರೆ ಸರಿಸುಮಾರು ೧೦ಕ್ಕೂ ಹೆಚ್ಚು ಕಾಡಾನೆಗಳು ದಾಳಿ ಮಾಡಿ ತೋಟಗಳನ್ನು ನಾಶ ಮಾಡಿವೆ. ಅರಣ್ಯ ಇಲಾಖೆ ಕೂಡಲೇ ಕಾಡಾನೆ ಹಾವಳಿ ತಡೆಗಟ್ಟಬೇಕು, ಆನೆಯನ್ನು ಸೆರೆಹಿಡಿದು ಬೇರೆಡೆ ಸ್ಥಳಾಂತರಿಸಬೇಕು. ನಷ್ಟ ಅನುಭವಿಸಿದವರಿಗೆ ಸೂಕ್ತ ಪರಿಹಾರ ನೀಡಬೇಕು, ಉನ್ನತ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು, ತಾ. ೧೦ ರಂದು ಚೆಯ್ಯಂಡಾಣೆಯಲ್ಲಿ ಪ್ರತಿಭಟನೆ ಹಾಗೂ ರಸ್ತೆ ತಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಚೇಲಾವರ ಗ್ರಾಮಸ್ಥ ಜೈನೀರ ರಾಜ್ಕುಮಾರ್ ಮಾತನಾಡಿ, ಈ ವ್ಯಾಪ್ತಿಯಲ್ಲಿ ಕೇವಲ ೪ ರಿಂದ ೫ ಆನೆ ಇತ್ತು. ಇಂದು ಅದು ೭೦ ರಿಂದ ೮೦ರಷ್ಟಾಗಿವೆ. ಇದು ಕೇರಳದಿಂದ ತಂದು ಇಲ್ಲಿ ಬಿಟ್ಟಂತಹ ಆನೆ, ಕೇರಳದಲ್ಲಿ ಆನೆಯನ್ನು ನೋಡಿಕೊಳ್ಳಲಾಗದೆ ಅದನ್ನು ಇಲ್ಲಿ ತಂದು ಬಿಟ್ಟಿದ್ದಾರೆ. ಸುಂಟಿಕೊಪ್ಪ ಹಾಗೂ ಕೊಡಗರಹಳ್ಳಿಯಲ್ಲಿ ಸೆರೆ ಹಿಡಿದ ಆನೆಯ ಕುತ್ತಿಗೆಯಲ್ಲಿ ಹಗ್ಗ ಇತ್ತು, ಅರಣ್ಯದಲ್ಲಿ ಇರುವ ಆನೆಗೆ ಕುತ್ತಿಗೆಯಲ್ಲಿ ಹಗ್ಗ ಹೇಗೆ ಬರುತ್ತದೆ ಎಂದು ಪ್ರಶ್ನಿಸಿದರು.
ಇದು ಕಾಡಾನೆಯಲ್ಲ ಇದು ಬಿಬಿಟಿಸಿ, ಟಾಟಾ ಕಾಫಿ ಎಸ್ಟೇಟ್ಗಳಲ್ಲಿ ಹುಟ್ಟಿದಂತ ಆನೆಗಳಾಗಿವೆ. ಅರಣ್ಯಕ್ಕೆ ಎಷ್ಟೇ ಓಡಿಸಿದರೂ ಅದು ತಿರುಗಿ ಇಲ್ಲಿಗೆ ಬರುತ್ತವೆ. ಇದಕ್ಕೆ ಕಾಫಿ ತೋಟಗಳೇ ಕಾಡು. ಇಲ್ಲಿಗೆ ಒಟ್ಟು ೪ ಆನೆ ಹಿಡಿಯಲು ಅನುಮತಿ ಸಿಕ್ಕಿದರೂ ಒಂದು ಆನೆಯನ್ನು ಮಾತ್ರ ಹಿಡಿಯಲಾಗಿದೆ ಉಳಿದ ಆನೆಯನ್ನು ಕೂಡಲೇ ಹಿಡಿಯಬೇಕೆಂದು ಆಗ್ರಹಿಸಿದರು.
ಕೋಕೇರಿ ಗ್ರಾಮಸ್ಥ ಬೆಳಿಯಂಡ್ರ ಲಕ್ಕಿ ಹಾಗೂ ಮಚ್ಚಂಡ ಸುಮತಿ ಮಾತನಾಡಿ, ಕೋಕೇರಿ ವ್ಯಾಪ್ತಿಯಲ್ಲಿ ಆನೆಯ ಕಾಟ ಮಿತಿಮೀರಿದ್ದು, ನಾವು ಬೆಳೆದ ಎಲ್ಲಾ ಗಿಡಗಳನ್ನು ತುಳಿದು ನಾಶಪಡಿಸಿವೆ. ಅರಣ್ಯ ಇಲಾಖೆ ಕ್ರಮಕೈಗೊಳ್ಳುತ್ತಿಲ್ಲ. ಕಾರ್ಯಾಚರಣೆ ನೆಪ ಮಾತ್ರ ಹೇಳಿ ಕೋಕೇರಿಯಿಂದ ನರಿಯಂದಡ, ನರಿಯಂದಡದಿAದ ಚೇಲಾವರ ಗ್ರಾಮಕ್ಕೆ ಕಾಡಾನೆಯನ್ನು ಓಡಿಸುತ್ತಾರೆ. ಶಾಶ್ವತವಾಗಿ ಕಾಡಾನೆಯನ್ನು ಕಾಡಿಗೆ ಓಡಿಸಬೇಕು ಅಥವಾ ಇರುವ ಎಲ್ಲಾ ಆನೆಗಳನ್ನು ಸೆರೆಹಿಡಿದು ಬೇರೆಡೆ ಸ್ಥಳಾಂತರಿಸಬೇಕೆAದು ಆಗ್ರಹಿಸಿದರು.
ತೋಟದ ಕಾರ್ಮಿಕ ಪ್ರವೀಣ್ ಮಾತನಾಡಿ, ನಮಗೆ ತೋಟಕ್ಕೆ ಬರಲು ಹೆದರಿಕೆಯಾಗುತ್ತದೆ. ನಿನ್ನೆ ಇದೇ ತೋಟದಲ್ಲಿ ಕೆಲಸ ಮಾಡಿದ್ದೇವೆ ಆದರೆ ಅದೇ ತೋಟದಲ್ಲಿ ಇಂದು ಕೆಲಸಕ್ಕೆ ಬರುವ ಸಂದರ್ಭ ತುಳಿದು ನಾಶಪಡಿಸಿವೆ. ಭಯದಲ್ಲಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ, ಕೂಡಲೇ ಕಾಡಾನೆ ಹಾವಳಿ ತಡೆಗಟ್ಟುವಂತೆ ಒತ್ತಾಯಿಸಿದರು.
ಡಿಎಫ್ಓ ಭೇಟಿ
ನಷ್ಟ ಉಂಟಾದ ಸ್ಥಳಕ್ಕೆ ಹಾಗೂ ಕಾಡಾನೆ ಲಗ್ಗೆ ಇಟ್ಟು ನಾಶಪಡಿಸಿದ ನರಿಯಂದಡ ಗ್ರಾ.ಪಂ. ವ್ಯಾಪ್ತಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಭೇಟಿ ನೀಡಿ ಪರಿಶೀಲಿಸಿದರು. ಬಾಳೆ ಗಿಡಗಳನ್ನು ತುಳಿದು ನಾಶಪಡಿಸಿ ಅಪಾರ ಪ್ರಮಾಣದ ನಷ್ಟ ಉಂಟಾದ ರೈತನ ತೋಟ ಕಂಡು ಬೇಸರ ವ್ಯಕ್ತಪಡಿಸಿದರು. ನಂತರ ‘ಶಕ್ತಿ’ ಚೆಯ್ಯಂಡಾಣೆ ವ್ಯಾಪ್ತಿಯ ಕಾಡಾನೆ ಹಾವಳಿ ಬಗ್ಗೆ ಅಭಿಪ್ರಾಯ ಬಯಸಿದಾಗ ಈ ಭಾಗದಲ್ಲಿ ಹಲವಾರು ತಿಂಗಳುಗಳಿAದ ಆನೆಗಳ ಚಲನವಲನ ಇದೆ. ರೈತರ ಜಮೀನುಗಳಿಗೆ ಅನಾಹುತ ಮಾಡುತ್ತಿದೆ ಎಂಬ ಮಾಹಿತಿ ಇದೆ. ಇಲ್ಲಿ ಕಾರ್ಯಾಚರಣೆ ಕೂಡ ಹಮ್ಮಿಕೊಂಡಿದ್ದೇವೆ, ಇಲ್ಲಿಯ ರೈತರ ಮಾಹಿತಿ ಪ್ರಕಾರ ಆನೆಯ ಚಲನವಲನವನ್ನು ಗಮನಿಸಿ ಅದನ್ನು ಕಾಡಿಗೆ ಓಡಿಸುವ ಅಥವಾ ಅದನ್ನು ಸೆರೆಹಿಡಿದು ಬೇರೆಡೆ ಸ್ಥಳಾಂತರಿಸಲು ಅವಕಾಶವಿದ್ದರೆ ನಿಯಮಾನುಸಾರ ಮುಖ್ಯ ವನ್ಯಜೀವಿ ಪರಿಪಾಲಕರ ಗಮನಕ್ಕೆ ತಂದು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸಾರ್ವಜನಿಕರು ಸಹಕರಿಸಬೇಕು, ಯಾವುದೇ ಪ್ರತಿಭಟನೆ ಬೇಡ ಇಲಾಖೆಯಿಂದ ಏನು ಕ್ರಮ ವಹಿಸಬೇಕೋ ಅದನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ. ನಮ್ಮ ತಂಡ ಸನ್ನದ್ಧವಾಗಿದೆ. ದಿನದ ೨೪/೭ ಗಂಟೆ ಕೆಲಸ ಮಾಡಲು ತಯಾರಿದ್ದೇವೆ ಎಂದರು.
ರೈತರಿಗೆ, ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ತೊಂದರೆಯಾಗುವAತಹ ಪ್ರತಿಭಟನೆ ಮಾಡಬೇಡಿ. ಪ್ರತಿಭಟನೆ ಕೈಬಿಡಿ ರೈತರೊಂದಿಗೆ ನಾವಿದ್ದೇವೆ, ರೈತರ ಎಲ್ಲಾ ಸಾಧಕ ಬಾಧಕಗಳನ್ನು ಕ್ರೋಢೀಕರಿಸಿ, ಚರ್ಚಿಸಿ ವಿಶೇಷವಾಗಿ ವೀರಾಜಪೇಟೆ ಅರಣ್ಯ ವಲಯದ ಪ್ರಾಣಿ-ಮಾನವ ಸಂಘರ್ಷ ತಡೆಯಲು ಅಂತಿಮ ವರದಿ ಸಲ್ಲಿಸಿ, ಸರಕಾರದ ಗಮನಕ್ಕೂ ಹಾಗೂ ಇಲಾಖೆಯ ಗಮನಕ್ಕೆ ತಂದು ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಇದಕ್ಕೆಲ್ಲ ಗ್ರಾಮಸ್ಥರ ಸಹಕಾರ ಇರಲಿ ಎಂದರು. ಈ ಸಂದರ್ಭ ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ, ಕ್ಯಾಂಪ್ ಸಿಬ್ಬಂದಿಗಳು, ಮತ್ತಿತರರು ಇದ್ದರು. -ಅಶ್ರಫ್
ಕಾಡಾನೆಯೊಂದು ಗುಂಡಿಯೊಳಗೆ ಕಾಲು ಸಿಲುಕಿ ಹೊರ ಬರಲು ಒದ್ದಾಡುತ್ತಿರುವ ದೃಶ್ಯ ಕಂಡುಬAದಿದೆ. ಅರ್ಧ ತಾಸು ಗುಂಡಿಯಲ್ಲಿ ಕಾಲು ಸಿಲುಕಿ ಹರಸಾಹಸಪಡುತ್ತಿದ್ದ ದೃಶ್ಯ ಗೋಚರಿಸಿದೆ. ಈ ಘಟನೆಯು ಕಳೆದ ವಾರದಲ್ಲಿ ನಡೆದಿದ್ದು, ಗುಂಡಿಯಲ್ಲಿ ಕಾಡಾನೆಯ ಕಾಲು ಸಿಲುಕಿ ಗಾಯಗೊಂಡಿರುವ ಆನೆ ಹಾಗೂ ರಸ್ತೆಯಲ್ಲಿ ಕಂಡುಬAದ ಗಾಯಗೊಂಡ ಆನೆ ಎರಡೂ ಒಂದೇ ಆಗಿರಬಹುದೆಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನು ಪತ್ತೆಹಚ್ಚಿ ಸೆರೆಹಿಡಿದು ಸೂಕ್ತ ಚಿಕಿತ್ಸೆ ನೀಡಬೇಕಾದ ಅಗತ್ಯ ಇದೆ. - ವಾಸು
ಮುಳ್ಳೂರು: ಶನಿವಾರಸಂತೆ ಹೋಬಳಿ ವ್ಯಾಪ್ತಿಯ ದುಂಡಳ್ಳಿ, ಕ್ಯಾತನಳ್ಳಿ, ಗೌಡಳ್ಳಿ, ಹಿರಿಕರ ಮುಂತಾದ ಕಡೆಗಳಲ್ಲಿ ಕಳೆದ ಒಂದು ವಾರದಿಂದ ಕಾಡಾನೆ ಹಾವಳಿ ಜಾಸ್ತಿಯಾಗಿದ್ದು, ರಾತ್ರಿ ಸಮಯದಲ್ಲಿ ಕಾಡಾನೆಗಳು ರೈತರ ಹೊಲ, ಗದ್ದೆ, ತೋಟಗಳಿಗೆ ನುಗ್ಗಿ ಬಾಳೆ, ಅಡಿಕೆ, ಕಾಫಿ ಗಿಡಗಳನ್ನು ತುಳಿದು ನಾಶ ಮಾಡುತ್ತಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ರಾತ್ರಿ ಸಮೀಪದ ಕ್ಯಾತನಳ್ಳಿ ಗ್ರಾಮದಲ್ಲಿ ಕಾಡಾನೆಯೊಂದು ರೈತರು ಬೆಳೆದ ಬೆಳೆಗಳನ್ನು ತುಳಿದು ನಾಶಪಡಿಸಿದೆ. ಗ್ರಾಮದ ಪುನಿತ್ ಎಂಬವರಿಗೆ ಸೇರಿದ ತೋಟಕ್ಕೆ ನುಗ್ಗಿದ ಕಾಡಾನೆ ತೋಟದಲ್ಲಿ ಬೆಳೆದ ಕಾಫಿ ಗಿಡ, ಬಾಳೆ, ಮೆಣಸು ಮುಂತಾದ ಬೆಳೆಗಳನ್ನು ತುಳಿದು ಧ್ವಂಸಗೊಳಿಸಿವೆ. ಈ ಕುರಿತು ಪುನೀತ್ ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. -ಭಾಸ್ಕರ್ ಮುಳ್ಳೂರು