ಕಣಿವೆ, ಜು. ೪ : ಕೊಡಗು ಜಿಲ್ಲೆಯ ಪ್ರಮುಖ ಪಟ್ಟಣ ಪ್ರದೇಶಗಳ ಪೈಕಿ ಅತ್ಯಂತ ಹೆಚ್ಚಿನ ಜನಸಂದಣಿಯನ್ನು ಹೊಂದಿರುವ ಕುಶಾಲನಗರ ಸರ್ಕಾರದ ಹಲವು ಸೌಲಭ್ಯಗಳಿಂದ ವಂಚಿತಗೊAಡಿದೆ. ಸರಿ ಸುಮಾರು ೨೫ ಸಾವಿರದಷ್ಟು ಜನಸಂಖ್ಯೆಯನ್ನು ಹೊಂದಿರುವ ಕುಶಾಲನಗರ ಪಟ್ಟಣ ಇತ್ತೀಚೆಗಷ್ಟೇ ಪುರಸಭೆಯಾಗಿ ಮೇಲ್ದರ್ಜೆಗೇರಿದೆ. ಆದರೆ ಕಳೆದ ಹದಿನೈದು ವರ್ಷಗಳಿಂದಲೂ ಸ್ವಂತದ್ದಾದ ಆಡಳಿತ ಕಛೇರಿಯ ಕಟ್ಟಡವನ್ನು ಹೊಂದಿರದ ಕುಶಾಲನಗರದ ಪುರಸಭಾ ಆಡಳಿತ ಯಾವುದೋ ಒಂದು ಖಾಸಗಿ ಕಟ್ಟಡದಲ್ಲಿ ವಾರ್ಷಿಕ ೫ ಲಕ್ಷ ರೂಗಳ ಬಾಡಿಗೆಯ ಕರಾರಿನಲ್ಲಿ ಅಧಿಕಾರ ನಡೆಸುತ್ತಿದೆ.
ಕಳೆದ ಹತ್ತು ವರ್ಷಗಳ ಹಿಂದೆ ಕುಶಾಲನಗರ ಪಟ್ಟಣ ಪಂಚಾಯಿತಿ ಯಾಗಿದ್ದಾಗ ಕಿಷ್ಕಿಂದೆಯಾಗಿದ್ದ ಗ್ರಾಮಾಡಳಿತದ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಿತ್ತು. ಅದರಂತೆಯೇ ಆರಂಭಿಕ ಹಂತದಲ್ಲಿ ೨.೪೦ ಕೋಟಿ ವೆಚ್ಚದ ಮೊದಲ ಅಂತಸ್ತಿನ ಕಟ್ಟಡವನ್ನು ನಿರ್ಮಿಸಲಾಯಿತು.
ಅಂದರೆ ಮೊದಲ ಅಂತಸ್ತಿನ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ವಿಧಾನಸಭಾ ಚುನಾವಣೆಗೆ ಘೋಷಣೆಯಾಗುವ ನೀತಿ ಸಂಹಿತೆಗೆ ಹೆದರಿದ ಆಡಳಿತಾರೂಢ ಬಿಜೆಪಿಗರು ಅಂದಿನ ಶಾಸಕರನ್ನು ಕರೆದು ತರಾತುರಿಯಲ್ಲಿ ಪುರಸಭಾ ಆಡಳಿತ ಕಟ್ಟಡದ ಮೊದಲ ಹಂತದ ವಾಣಿಜ್ಯ ಮಳಿಗೆಗೆಗಳನ್ನು ಉದ್ಘಾಟಿಸುವ ಪ್ರಹಸನ ನಡೆದಿತ್ತು.
ಆಮೆಗತಿಯಲ್ಲಿ ಸಾಗುತ್ತಿದ್ದ ಕಟ್ಟಡ ಕಾಮಗಾರಿಯ ಗೋಡೆಗೆ ಅಂಟಿಸಿದ್ದ ಗಾರೆಗೆ ಕ್ಯೂರಿಂಗ್ ಆಗದ ಮುನ್ನವೇ, ಒಂದು ವರ್ಷದ ಮೊದಲೇ ಸುಣ್ಣ ಬಳಿದು ಅದರಲ್ಲೊಂದು ಶಿಲಾಫಲಕ ಅಂಟಿಸಿ ಉದ್ಘಾಟನೆಯ ಅಧಿಕೃತ ಮುದ್ರೆ ಒತ್ತಲಾಗಿತ್ತು.
ವಾಹನಗಳ ನಿಲುಗಡೆ ತಾಣ : ಆರಂಭಿಕ ಹಂತದಲ್ಲಿ ರೂ ೨.೪೦ ಕೋಟಿ ವೆಚ್ಚದಲ್ಲಿ ನಡೆದ ತರಾತುರಿಯ ಅವೈಜ್ಞಾನಿಕ ಕಟ್ಟಡ ಕಾಮಗಾರಿಗೆ ಅರ್ಧದಷ್ಟು ಹಣವನ್ನು ಗುತ್ತಿಗೆದಾರ ಪಡೆದುಕೊಂಡಿದ್ದ. ಇದೀಗ ಆ ಕಟ್ಟಡದ ಗುತ್ತಿಗೆದಾರನಿಗೆ ಇನ್ನೂ ಒಂದು ಕೋಟಿ ರೂಗಳ ಬಿಲ್ ಬಾಕಿ ಇದೆಯಂತೆ. ಅಂದರೆ ಊರ ಜನರ ಆಶೋತ್ತರಗಳ ಸೌಧವನ್ನು ಕಟ್ಟಬೇಕಾದ ರೀತಿಯಲ್ಲಿ ಹಾಗೂ ನಿರ್ಮಿಸಲೇಬೇಕಾದ ಶೈಲಿಯಲ್ಲಿ ಕಟ್ಟದ ಕಾರಣ ಇಂದು ಈ ಕಟ್ಟಡ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು ಹೇಳುವವರು ಕೇಳುವವರು ಇಲ್ಲದ ಅನಾಥ ಸ್ಥಿತಿಯಲ್ಲಿದ್ದು ದ್ವಿಚಕ್ರ ವಾಹನಗಳು ಹಾಗೂ ಕಾರುಗಳ ನಿಲುಗಡೆ ಸ್ಥಳವಾಗಿ ಮಾರ್ಪಟ್ಟಿದೆ ಉದ್ದೇಶಿತ ಈ ಪುರಭವನ.
ಕಳೆದ ಎರಡೂ ಅವಧಿಗ ಳಿಂದಲೂ ಅಧಿಕಾರ ಹಿಡಿದ ಬಿಜೆಪಿಗರು ತಮ್ಮ ಬದ್ಧತೆ ಮರೆತ ಪರಿಣಾಮವೇ ಈ ಕಟ್ಟಡದ ದುಸ್ಥಿತಿಗೆ ಹಿಡಿದ ಕೈಗನ್ನಡಿ. ಅಂದರೆ ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದ್ದು, ಕ್ಷೇತ್ರದಲ್ಲೂ ಬಿಜೆಪಿಯ ಸಂಸದ ಹಾಗೂ ಶಾಸಕರಿದ್ದರೂ ಊರ ಅಭಿವೃದ್ಧಿಯ ವಿಚಾರದಲ್ಲಿ ಮೌನವಾಗಿದ್ದ ಪರಿಯನ್ನು ಈ ಕಟ್ಟಡ ಸಾರಿ ಸಾರಿ ಹೇಳುತ್ತಿದೆ ಊರ ಮಂದಿಗೆ.
ಶಾಸಕರು ಇಚ್ಛಾಶಕ್ತಿ ತೋರಬೇಕಿದೆ
ಕುಶಾಲನಗರ ಪುರಸಭೆಯ ಉದ್ದೇಶಿತ ನೂತನ ಕಟ್ಟಡದ ಅಧ್ವಾನವನ್ನು
(ಮೊದಲ ಪುಟದಿಂದ) ಸರಿಪಡಿಸಿ ಶೀಘ್ರಗತಿಯಲ್ಲಿ ಕಟ್ಟಡ ಕಾಮಗಾರಿ ನಡೆಸಿ, ಊರ ಜನರ ಸೇವೆಗೆ ಬಿಟ್ಟುಕೊಡುವ ಹೊಸ ಅಧ್ಯಾಯಕ್ಕೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಮಂತರ್ಗೌಡರು ಹೊಸ ಮುನ್ನುಡಿ ಬರೆಯಬೇಕಿದೆ.
ಆದಾಯವೂ ಇಲ್ಲ.... ಬಾಡಿಗೆಯೇ ಎಲ್ಲಾ...
ಈಗಾಗಲೇ ನಡೆದಿರುವ ಮೊದಲ ಹಂತದ ಪುರಸಭಾ ವಾಣಿಜ್ಯ ಕಟ್ಟಡದ ನೆಲ ಅಂತಸ್ತಿನ ಮಳಿಗೆಗಳನ್ನು ಸಾರ್ವಜನಿಕರಿಗೆ ಬಾಡಿಗೆಗೆ ನೀಡಿದಲ್ಲಿ ಪುರಸಭೆಗೆ ವರ್ಷಕ್ಕೆ ಲಕ್ಷಾಂತರ ರೂಗಳ ಆದಾಯವಾದರೂ ಬರುತ್ತಿತ್ತು. ಇಲ್ಲಿ ಬಾಡಿಗೆ ಎಂಬ ಆದಾಯದ ಮಾತಿರಲಿ, ಸೋರಿ ಹೋಗುತ್ತಿರುವ ಆದಾಯವನ್ನು ತಡೆಗಟ್ಟುವ ಯೋಚನೆಯೂ ಆಡಳಿತಾರೂಢರಿಗೆ ಇಲ್ಲದಿರುವುದು ಬೇಸರದ ಸಂಗತಿ. ಅಂದರೆ, ಮಾಸಿಕ ೪೫ ಸಾವಿರ ರೂಗಳ ಬಾಡಿಗೆಯ ಕಟ್ಟಡದಲ್ಲಿ ಪುರಸಭೆ ಆಡಳಿತ ಸಾಗುತ್ತಿದ್ದು, ವರ್ಷಕ್ಕೆ ೫ ಲಕ್ಷ ರೂಗಳ ಹಣ ಪೋಲಾಗುತ್ತಿದೆ.
ಈ ಸಂದರ್ಭ ಪುರಸಭೆಯ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ‘ಶಕ್ತಿ' ಯೊಂದಿಗೆ ಪ್ರತಿಕ್ರಿಯಿಸಿ, ಸ್ಥಗಿತಗೊಂಡಿರುವ ಪುರಸಭೆ ಕಟ್ಟಡ ಕಾಮಗಾರಿಗೆ ಕಾಯಕಲ್ಪ ಕೊಟ್ಟು ಮುಂದಿನ ಡಿಸೆಂಬರ್ ಒಳಗಾಗಿ ಆಡಳಿತ ಭವನವನ್ನು ಹೊಸ ಕಟ್ಟಡದಲ್ಲಿಯೇ ಆರಂಭಿಸಬೇಕೆAಬ ಗುರಿ ಹೊಂದಲಾಗಿದೆ. ಈ ಬಗ್ಗೆ ಈಗಾಗಲೇ ಶಾಸಕರ ಜೊತೆಗೂ ಚರ್ಚಿಸಲಾಗಿದೆ.
ಈಗಾಗಲೇ ನಡೆದಿರುವ ಮೊದಲ ಹಂತದ ಕಾಮಗಾರಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿ ರಾಷ್ಟಿçÃಯ ಹೆದ್ದಾರಿಯಲ್ಲಿನ ಪುರಸಭಾ ಆಡಳಿತ ಸೌಧಕ್ಕೆ ಆಧುನಿಕ ಸ್ಪರ್ಶ ಕೊಡಲಾಗುವುದು. ಹಾಗೆಯೇ ಕಟ್ಟಡದ ಮುಂದುವರೆದ ಕಾಮಗಾರಿಗೆ ಶೀಘ್ರದಲ್ಲಿಯೇ ಟೆಂಡರ್ ಕರೆದು ಕಾಮಗಾರಿಯನ್ನು ಆದಷ್ಟು ಕಡಿಮೆ ಅವಧಿಯಲ್ಲಿ ಮುಕ್ತಾಯ ಗೊಳಿಸಲಾಗುವುದು ಎಂದರು. ಒಟ್ಟಾರೆ, ಊರ ಜನರ ಆಶೋತ್ತರಗಳ ಆಲಯವಾದ ಪುರಸಭಾ ಕಟ್ಟಡದ ಕಾಮಗಾರಿ ಬೇಗ ಮುಗಿದು ಊರ ಜನರಿಗೆ ಆದಷ್ಟು ಬೇಗ ಬಳಕೆಯಾಗಬೇಕಿದೆ. -ವರದಿ : ಕೆ.ಎಸ್.ಮೂರ್ತಿ