ಮಡಿಕೇರಿ, ಜು. ೩: ಮನೆಗೆ ನುಗ್ಗಿ ವ್ಯಕ್ತಿಯ ಕತ್ತಿನಲ್ಲಿದ್ದ ಚಿನ್ನದ ಸರ ಅಪಹರಿಸಿ ಪರಾರಿಯಾಗಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

ಶನಿವಾರಸÀAತೆ ಪೊಲೀಸ್ ಠಾಣಾ ವ್ಯಾಪ್ತಿಯ ಗೌಡಳ್ಳಿ ಗ್ರಾಮ ನಿವಾಸಿ ಅಣ್ಣಯ್ಯ (೭೬) ದಿನಾಂಕ ೨೮-೦೯-೨೦೨೪ ರಂದು ರಾತ್ರಿ ೮.೩೦ ಗಂಟೆ ಸಮಯದಲ್ಲಿ ಊಟ ಸಂದರ್ಭ ಅಪರಿಚಿತ ª್ಯÀಕ್ತಿಯು ಅP್ರÀಮವಾಗಿ ಮನೆಗೆ ¥್ರÀವೇಶಿಸಿ ಅಣ್ಣಯ್ಯ ಅವರು ಚಳಿಗಾಗಿ ತಲೆಗೆ ಧರಿಸಿದ್ದ ಮಂಕಿ ಕ್ಯಾಪ್ ಅನ್ನು ಹಿಂಭಾಗದಿAದ ಕಣ್ಣುಮುಚ್ಚ್ಚುವಂತೆ ಎಳೆದು ಕತ್ತಿನಲ್ಲಿದ್ದ ಅಂದಾಜು ೨೭ ಗ್ರಾಂ ತೂಕದÀ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿದ್ದ. ಸ್ಥಳಕ್ಕೆ ಶನಿವಾರಸಂತೆ ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಕೃತ್ಯಕ್ಕೆ ಸಂಬAಧಿಸಿದ ಮಾಹಿತಿ ಹಾಗೂ ಸಾಕ್ಷಾö್ಯಧಾರಗಳನ್ನು ಕಲೆಹಾಕಿದರು. ಆರೋಪಿಯನ್ನು ಪತ್ತೆ ಹಚ್ಚಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಆರ್.ವಿ ಗಂಗಾಧರಪ್ಪ, ವೃತ್ತನಿರೀಕ್ಷಕ ಪ್ರೀತಂ ಡಿ. ಶ್ರೇಯಾಕರ್, ಠಾಣಾಧಿಕಾರಿ ಗೋವಿಂದ ರಾಜು, ಸಿಬ್ಬಂದಿಗಳು ಹಾಗೂ ತಾಂತ್ರಿಕ ಸಿಬ್ಬಂದಿಗಳÀ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ಇಂದು ಚೆಸ್ಕಾಂನಲ್ಲಿ ಲೈನ್‌ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹೊಳೆನರಸೀಪುರ ಮೂಲದ ಉದ್ದೂರು ಗ್ರಾಮ ನಿವಾಸಿಯಾದ ಸಂದೀಪ್.ಆರ್. (೨೭) ಎಂಬಾತನನ್ನು ಬಂದಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಳವು ಮಾಡಿದ್ದ ೨೭ ಗ್ರಾಂ ಚಿನ್ನದ ಸರವನ್ನು ಮತ್ತು ಕೃತ್ಯಕ್ಕೆ ಬಳಸಿದ ದ್ವಿ-ಚP್ರÀ ವಾಹನವನ್ನು ವಶಪಡಿಸಿಕೊ¼್ಳÀಲಾಗಿದೆ.