ಸೋಮವಾರಪೇಟೆ, ಜು. ೩: ಇಲ್ಲಿಗೆ ಸಮೀ ಪದ ಐಗೂರು ಸರ್ಕಾರಿ ಶಾಲೆ ಬಳಿ ಇಂದು ಸಂಜೆ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರನ ಕಾಲು ಮುರಿದ ಘಟನೆ ನಡೆದಿದೆ.
ಮಡಿಕೇರಿಯಿಂದ ಸೋಮವಾರ ಪೇಟೆಗೆ ಬರುತ್ತಿದ್ದ ಖಾಸಗಿ ಬಸ್ಗೆ, ಸೋಮವಾರಪೇಟೆ ಕಡೆಯಿಂದ ಮಡಿಕೇರಿಗೆ ತೆರಳುತ್ತಿದ್ದ ಮಡಿಕೇರಿಯ ನಕ್ಷ ಚಾಲಿಸುತ್ತಿದ್ದ ದ್ವಿ ಚಕ್ರ ವಾಹನ ಡಿಕ್ಕಿಯಾಗಿದ್ದು, ಕಾಲಿನ ಮೂಳೆ ಮುರಿದಿದೆ. ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ಬಳಿಕ ಜಿಲ್ಲಾ ಸ್ಪತ್ರೆಗೆ ಬೈಕ್ ಸವಾರನನ್ನು ಕರೆದೊಯ್ಯಲಾಗಿದೆ.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಠಾಣಾಧಿಕಾರಿ ರವಿ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.