ಕೋವರ್ ಕೊಲ್ಲಿ ಇಂದ್ರೇಶ್
ಬೆAಗಳೂರು, ಜು. ೩: ಕಾಫಿ ಬೆಳೆಗಾರ ಸಂಘಟನೆಗಳು ಕೆಲ ವರ್ಷಗಳಿಂದ ಕಾಫಿಪುಡಿಗೆ ಚಿಕೋರಿ ಮಿಶ್ರಣ ಮಾಡುವುದನ್ನು ನಿಷೇಧಿಸಬೇಕೆಂದು ಒತ್ತಾಯಿಸುತ್ತಲೇ ಬಂದಿವೆ. ಆದರೆ ಈವರೆಗೂ ಈ ಕುರಿತು ಸರ್ಕಾರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಈ ನಡುವೆ ಕಾಫಿ ಮಂಡಳಿ ಕೂಡ ಇದೀಗ ಆಹಾರ ಸುರಕ್ಷತಾ ಇಲಾಖೆಗೆ ಪತ್ರ ಬರೆದು ಪ್ರಸ್ತಾವನೆ ಮುಂದಿಟ್ಟಿದೆ.
ಕಾಫಿಗೆ ಚಿಕೋರಿ ಮಿಶ್ರಣ ಮಾಡುವುದರಿಂದ ರುಚಿ ಹೆಚ್ಚುತ್ತದೆ ಎನ್ನಲಾಗಿದೆ. ಸಾಮಾನ್ಯವಾಗಿ ಕಾಫಿ ಪುಡಿಗೆ ಶೇ. ೨೦ ರಿಂದ ೩೦ ರವರೆಗೂ ಚಿಕೋರಿ ಮಿಶ್ರಣ ಮಾಡಲಾಗುತ್ತಿದೆ. ಚಿಕೋರಿ ಮಿಶ್ರಣ ಮಾಡಿದರೆ ಕಾಫಿ ಸ್ಟಾçಂಗ್ ಆಗುತ್ತದೆ. ಈಗ ಕಾಫಿಗೆ ದರ ಹೆಚ್ಚಿರುವುದರಿಂದ ಚಿಕೋರಿ ಮಿಶ್ರಣ ಮಾಡುವ ಪ್ರವೃತ್ತಿಯೂ ಹೆಚ್ಚಾಗುತ್ತಿದೆ. ದೇಶದ ಇನ್ಸ್ಟಂಟ್ ಕಾಫಿ ತಯಾರಿಕೆಯ ಪ್ರಮುಖ ಕಂಪೆನಿಗಳAತೂ ಈಗಲೇ ಎಕ್ಟಾç ಸ್ಟಾçಂಗ್ ಹೆಸರಿನಲ್ಲಿ ಶೇ. ೪೫-೪೯ ರಷ್ಟು ಚಿಕೋರಿ ಮಿಶ್ರಣ ಮಾಡಿ ಮಾರಾಟ ಮಾಡುತ್ತಿವೆ.
ಆದರೆ ಚಿಕೋರಿ ಮಿಶ್ರಣ ಹೆಚ್ಚು ಮಾಡಿದಷ್ಟೂ ಕಾಫಿಯ ನೈಜ ಸುವಾಸನೆ, ಪರಿಮಳ, ರುಚಿ ಕಡಿಮೆ ಆಗುತ್ತಾ ಹೋಗುತ್ತದೆ. ಅಲ್ಲದೆ ಚಿಕೋರಿ ಮಿಶ್ರಣ ಮಾಡುವುದು ಒಂದು ರೀತಿಯ ಕಲಬೆರಕೆಯೂ ಆಗುತ್ತದೆ. ಬೆಳೆಗಾರರ ಒತ್ತಾಯದ ಮೇರೆಗೆ ಈಗಾಗಲೇ ಕಾಫಿ ಮಂಡಳಿಯು ಕೂಡ ಚಿಕೋರಿ ಮಿಶ್ರಣವನ್ನು ಕಡಿತಗೊಳಿಸುವಂತೆ ಆಹಾರ ಇಲಾಖೆಗೆ (ಈooಜ Sಚಿಜಿeಣಥಿ ಚಿಟಿಜ Sಣಚಿಟಿಜಚಿಡಿಜs ಂuಣhoಡಿiಣಥಿ oಜಿ Iಟಿಜiಚಿ) ಪತ್ರ ಬರೆದು ಒತ್ತಾಯಿಸಿದೆ. ಆದರೆ ಈSSಂI ಇನ್ನೂ ಏನೂ ಕ್ರಮ ಕೈಗೊಂಡಿಲ್ಲ.
ಇತ್ತೀಚೆಗೆ ರಾಜ್ಯ ಸರ್ಕಾರ ಕ್ಯಾನ್ಸರ್ಕಾರಕ ಕೃತಕ ಬಣ್ಣಗಳನ್ನು ಕಬಾಬ್ ಇನ್ನಿತರ ಆಹಾರ ಪದಾರ್ಥಗಳಲ್ಲಿ ನಿಷೇಧಿಸಿರುವ ಹಿನ್ನೆಲೆಯಲ್ಲಿ ಚಿಕೋರಿ ಮಿಶ್ರಣ ಮತ್ತೆ ಚರ್ಚೆಗೆ ಬಂದಿದೆ.
(ಮೊದಲ ಪುಟದಿಂದ) ಹಾಸನ ಜಿಲ್ಲೆಯ ಕಾಫಿ ಬೆಳೆಗಾರರ ಸಂಘವಾದ ಚಿಹಾಕೋದ ಸಂಸ್ಥಾಪಕ ಸದಸ್ಯ ಯೆಸಳೂರು ಉದಯಕುಮಾರ್ ಅವರ ಪ್ರಕಾರ ಕಾಫಿ ಪುಡಿಯಲ್ಲಿ ಚಿಕೋರಿ ಮಿಶ್ರಣದಿಂದ ಕಾಫಿ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ ಮತ್ತು ಇದನ್ನು ನಿಷೇಧಿಸುವಂತೆ ಕೋರಿ ಪತ್ರವನ್ನು ಮಂಡಳಿಗೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಚಿಕೋರಿ (ಅiಛಿhoಡಿium iಟಿಣಥಿbus) ದಂಡೇಲಿಯನ್ ಕುಟುಂಬದ ಹೂಬಿಡುವ ಸಸ್ಯವಾಗಿದೆ. ತಿಳಿ ಕೆನ್ನೇರಳೆ ಹೂವನ್ನು ಹೊಂದಿರುವ ಸಸ್ಯದ ಬೇರುಗಳನ್ನು ಹುರಿದ ಮತ್ತು ಪುಡಿಯಾಗಿ ಪುಡಿಮಾಡಲಾಗುತ್ತದೆ. ಇದನ್ನು ಕಾಫಿ ಪುಡಿಗೆ ಸೇರಿಸಲಾಗುತ್ತದೆ. ಇದು ಮೂಲತಃ ಯೂರೋಪ್ ದೇಶದ್ದಾಗಿದ್ದು, "೧೮೦೦ ರ ದಶಕದಲ್ಲಿ ಫ್ರಾನ್ಸ್ನಲ್ಲಿ ಕಾಫಿ ಕೊರತೆಯ ಸಮಯದಲ್ಲಿ ಹುಟ್ಟಿಕೊಂಡಿತು" ಎಂದು ನಂಬಲಾಗಿದೆ. "ಕಾಫಿ ಪುಡಿಯನ್ನು ಹೆಚ್ಚು ಮಾಡಲು ಬದಲಿಯನ್ನು ಹುಡುಕುತ್ತಿದ್ದ ಜನರಿಗೆ, ಅವರ ಕಾಫಿಯಲ್ಲಿ ಚಿಕೋರಿ ಬೇರುಗಳನ್ನು ಒಣಗಿಸಿ ಪುಡಿ ಮಾಡಿ ಬೆರೆಸಲಾಗುತ್ತಿತ್ತು. ಅಮೇರಿಕಾದಲ್ಲಿ ನಾಗರಿಕ ಯುದ್ಧ ಸಮಯದಲ್ಲಿ ಬಂದರುಗಳಿಗೆ ದಿಗ್ಬಂಧನ ಹಾಕಿದಾಗ ಕಾಫಿಯ ಕೊರತೆ ಉಂಟಾಯಿತು. ಆಗ ಅಂತರ್ಯುದ್ಧದ ಸಮಯದಲ್ಲಿ ನ್ಯೂ ಓರ್ಲಿಯನ್ಸ್ನಲ್ಲಿ ಚಿಕೋರಿ ಜನಪ್ರಿಯವಾಯಿತು.
ಚಿಕೋರಿಯನ್ನು ಕಾಫಿಪುಡಿಗೆ ಮಿಶ್ರಣ ಮಾಡುವ ಪ್ರಕ್ರಿಯೆ ಕರ್ನಾಟಕದಲ್ಲಿ ಸುಮಾರು ೧೯೭೫-೭೭ ರ ಅವಧಿಯಲ್ಲಿ ಆರಂಭವಾಗಿ ನಂತರ ವ್ಯಾಪಕವಾಯಿತು. ಉತ್ತರ ಪ್ರದೇಶ ಮತ್ತು ಗುಜರಾತ್ನಲ್ಲಿ ಚಿಕೋರಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ದೇಶದ ಒಟ್ಟು ಚಿಕೋರಿ ಉತ್ಪಾದನೆಯಲ್ಲಿ ಶೇ. ೯೭ ರಷ್ಟು ಈ ಎರಡು ರಾಜ್ಯಗಳ ಪಾಲಾಗಿದ್ದು ಕಾಫಿ ಬೆಳೆಯುವ ದಕ್ಷಿಣದ ರಾಜ್ಯಗಳಿಗೆ ಇಲ್ಲಿಂದಲೇ ಸರಬರಾಜು ಮಾಡಲಾಗುತ್ತಿದೆ. ಚಿಕೋರಿ ಸಸ್ಯದ ಎಲೆಗಳನ್ನು ಗೋವುಗಳ ಆಹಾರವಾಗಿ ಬಳಸಲು ಬೆಳೆಸಲಾಗುತ್ತಿದೆ. ಇದರ ಬೇರಿಗೆ ಕಿಲೋಗೆ ೨೫ ರಿಂದ ೩೫ ರೂಪಾಯಿವರೆಗೂ ದರ ಇದ್ದು ಇದನ್ನೇ ಒಣಗಿಸಿ ಹುರಿದು ಕಾಫಿಗೆ ಬೆರೆಸಲಾಗುತ್ತಿದೆ.
ಚಿಕೋರಿ ಮಿಶ್ರಣ ಮಾಡುವುದರಿಂದ ಕಾಫಿಯ ಮಾರಾಟಕ್ಕಂತೂ ಹೊಡೆತ ಬೀಳುತ್ತಿದೆ. ಉದಾಹರಣೆಗೆ ದೇಶದ ಆಂತರಿಕ ಕಾಫಿ ಬಳಕೆ ಒಂದು ಲಕ್ಷ ಟನ್ ಎಂದಿಟ್ಟುಕೊAಡರೆ ಅದರಲ್ಲಿ ಶೇ. ೨೫ ರಷ್ಟು ಚಿಕೋರಿ ಬೆರೆಸಿದ್ದರೆ ೨೫ ಸಾವಿರ ಟನ್ ಕಾಫಿ ಮಾರಾಟ ಕಡಿಮೆ ಆಗುತ್ತದೆ.
ಈ ಕುರಿತು ಪ್ರತಿಕ್ರಿಯಿಸಿದ ಕಾಫಿ ಮಂಡಳಿಯ ಹಿರಿಯ ಅಧಿಕಾರಿ ಯೊಬ್ಬರು ಎರಡು ವರ್ಷಗಳ ಹಿಂದೆಯೇ ಕಾಫಿ ಮಂಡಳಿ ಕಾಫಿ ಪುಡಿಗೆ ಚಿಕೋರಿ ಮಿಶ್ರಣಕ್ಕೆ ನೀಡಿರುವ ಗರಿಷ್ಠ ಮಟ್ಟವನ್ನು ಕಡಿತಗೊಳಿಸಬೇಕೆಂದೂ ಮತ್ತು ಪರಿಶುದ್ದ (ಠಿuಡಿe) ಕಾಫಿ ಹೆಸರಿನಲ್ಲಿ ಮಾರಾಟ ಮಾಡುವುದನ್ನು ತಡೆಯಲು ಎಫ್ಎಸ್ಎಸ್ಏಐಗೆ ಪತ್ರ ಬರೆದಿದೆ. ಆದರೆ ಈವರೆಗೂ ಏನೂ ಕ್ರಮ ಕೈಗೊಳ್ಳಲಾಗಿಲ್ಲ ಎಂದರು.
ಪ್ರಸ್ತುತ ಎಫ್ಎಸ್ಎಸ್ಏಐ ಕಾಫಿ ಪುಡಿಗೆ ಗರಿಷ್ಠ ಶೇ. ೪೯ ರಷ್ಟು ಚಿಕೋರಿ ಮಿಶ್ರಣ ಮಾಡುವುದಕ್ಕೆ ಅನುಮತಿಸಿದೆ. ಈ ಪ್ರಮಾಣವನ್ನು ಶೇ. ೩೦ ರೊಳಗೆ ಇರಿಸಬೇಕೆಂದು ಬೆಳೆಗಾರ ಸಂಘಟನೆಗಳು ಒತ್ತಾಯಿಸುತ್ತಿವೆ. ಅಲ್ಲದೆ ಚಿಕೋರಿ ಮಿಶ್ರಿತ ಕಾಫಿ ಪುಡಿಯನ್ನು ಪ್ಯೂರ್ ಎಂದು ಮಾರಾಟ ಮಾಡಲಾಗುತ್ತಿದೆ ಇದಕ್ಕೆ ನಿರ್ಬಂಧ ವಿಧಿಸಬೇಕೆನ್ನುವುದೂ ಸಂಘಟನೆಗಳ ಒತ್ತಾಯವಾಗಿದೆ.