ಮಡಿಕೇರಿ, ಜು. ೩: ಸೋಮವಾರಪೇಟೆ ತಾಲೂಕು ಕೊಡ್ಲಿಪೇಟೆ ಹೋಬಳಿಯ ಹಲವು ಮಂದಿ ವಯೋವೃದ್ದರು ಮಾಸಿಕ ಸಂಧ್ಯಾ ಸುರಕ್ಷಾ ಪಿಂಚಣಿ ಹಣ ಹಲವು ತಿಂಗಳುಗಳಿAದ ಬಾರದೆ ಪರಿತಪಿಸುವಂತಾಗಿದೆ. ಈ ಕುರಿತು ಸಂಬAಧಿಸಿದ ತಾಲೂಕು ಕಚೇರಿಯಲ್ಲಿ ಸಮರ್ಪಕ ಉತ್ತರ ಸಿಕ್ಕಿಲ್ಲ ಎಂದು ಫಲಾನುಭವಿಗಳು "ಶಕ್ತಿ"ಯೊಂದಿಗೆ ದೂರಿಕೊಂಡಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಸಂಧ್ಯಾ ಸುರಕ್ಷಾ ಯೋಜನೆಯಡಿ ಬರುತ್ತಿದ್ದ ಹಣ ಕಳೆದ ಆರೇಳು ತಿಂಗಳಿನಿAದ ದಿಢೀರನೆ ಸ್ಥಗಿತವಾಗಿದೆ. ಈ ಬಗ್ಗೆ ಸಂಬAಧಿಸಿದ ಅಧಿಕಾರಿಗಳ ಬಳಿ ಖುದ್ದಾಗಿ ವಿಚಾರಿಸಿದಾಗ ಬರುತ್ತದೆ ಎನ್ನುವ ಭರವಸೆ ಸಿಕ್ಕಿದೆ. ಕೆಲವು ತಾಂತ್ರಿಕ ಸಮಸ್ಯೆ ಇದೆ ಎಂಬ ಕಾರಣ ನೀಡಿದ್ದು ಇದನ್ನು ಸರಿಪಡಿಸಿಕೊಟ್ಟಿದ್ದರೂ ಹಣ ಬರುತ್ತಿಲ್ಲ. ವಯೋವೃದ್ಧರಾದ ನಾವು ಅನಾರೋಗ್ಯಕ್ಕೆ ಔಷಧ ಖರೀದಿಸಲು ಇದೇ ಹಣದ ಮೇಲೆ ಅವಲಂಬಿಸಿರುತ್ತೇವೆ. ಈ ಬಗ್ಗೆ ತಹಶೀಲ್ದಾರರ ಗಮನಕ್ಕೆ ತಂದಿದ್ದರೂ ಹಣ ಬಂದಿಲ್ಲ. ಕೊಡ್ಲಿಪೇಟೆ ಮತ್ತು ಶನಿವಾರಸಂತೆ ಹೋಬಳಿಯ ಸುಮಾರು ೪೫ ಕ್ಕೂ ಹೆಚ್ಚು ಮಂದಿಗೆ ಮಾಸಿಕ ಹಣ ಬರುತ್ತಿಲ್ಲ. ಸಂಬAಧಿಸಿದ ಅಧಿಕಾರಿಗಳು ಗಮನಹರಿಸಿ ಸಕಾಲಕ್ಕೆ ಹಣ ಸಿಗುವಂತೆ ಮತ್ತು ಬಾಕಿ ಉಳಿಸಿಕೊಂಡಿರುವ ಆರು ತಿಂಗಳ ಹಣವನ್ನು ಕೊಡಿಸುವಂತೆ ಸಂಬAಧಿಸಿದ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.