ಮಡಿಕೇರಿ, ಜು. ೩: ಕರ್ನಾಟಕ ಔಷಧಿ ವ್ಯಾಪಾರಿಗಳ ಸಂಘದ ೨೦೨೪-೨೭ನೇ ಸಾಲಿಗೆ ಅಧ್ಯಕ್ಷರಾಗಿ ಬೆಂಗಳೂರಿನ ರಘುನಾಥ ರೆಡ್ಡಿ ಮತ್ತು ಗೌರವ ಕಾರ್ಯದರ್ಶಿಯಾಗಿ ಮಡಿಕೇರಿಯ ಅಂಬೆಕಲ್ ಜೀವನ್ ಕುಶಾಲಪ್ಪ ಪುನರಾಯ್ಕೆಯಾಗಿದ್ದಾರೆ,
ಮಡಿಕೇರಿಯಲ್ಲಿ ನಡೆದ ಕರ್ನಾಟಕ ಔಷಧಿ ವ್ಯಾಪಾರಿಗಳ ಸಂಘದ ೬೬ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಆಡಳಿತ ಮಂಡಳಿಗೆ ಆಯ್ಕೆ ಪ್ರಕ್ರಿಯೆ ನಡೆದ ಸಂದರ್ಭ ರಘುನಾಥ ರೆಡ್ಡಿ ಮತ್ತು ಜೀವನ್ ಅವಿರೋಧವಾಗಿ ಪುನರಾಯ್ಕೆಯಾದರು.
ನೂತನ ಆಡಳಿತ ಮಂಡಳಿಯ ಖಜಾಂಚಿಯಾಗಿ ಬಿ. ಉಮೇಶ್, ಉಪಾಧ್ಯಕ್ಷರಾಗಿ ಬಿ.ಕೆ. ಪ್ರಸನ್ನ ಕುಮಾರ್, ಶಿವರಾಜ್ ಪಾಟೀಲ್, ಜಂಟಿ ಕಾರ್ಯದರ್ಶಿಯಾಗಿ ಸತ್ಯನಾರಾಯಣ ಕೇಲ್ಗರ್, ಸಂಘಟನಾ ಕಾರ್ಯದರ್ಶಿಯಾಗಿ ವಿಜಯ್ ಕುಮಾರ್ ಎಸ್. ಬುರಲಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.