ಚೆಯ್ಯAಡಾಣೆ, ಜು. ೨: ಸಂಯುಕ್ತ ಅರಬ್ ಸಂಸ್ಥಾನದಲ್ಲಿ ನೆಲೆಸಿರುವ ಕೊಡಗಿನ ಅನಿವಾಸಿಗಳಿಗಾಗಿ ಕಳೆದ ಹಲವಾರು ವರ್ಷಗಳಿಂದ ನಡೆಸಿ ಕೊಂಡು ಬರುತ್ತಿರುವ ಬಕ್ರೀದ್ ಕಪ್ ಫುಟ್ಬಾಲ್ ಪಂದ್ಯಾವಳಿಯು ದುಬೈಯಲ್ಲಿರುವ ಅಲ್ ಅಹ್ಲಿ ಕ್ಲಬ್ ಮೈದಾನದಲ್ಲಿ ಇತ್ತೀಚೆಗೆ ನಡೆಯಿತು.

ರಾಪ್ಟರ್ಸ್ ಕುಂಜಿಲ ತಂಡ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಕೊಡಗಿನ ಚಾಮಿಯಾಲ, ಎಮ್ಮೆಮಾಡು, ಕುಂಜಿಲ, ಸುಂಟಿಕೊಪ್ಪ ಹಾಗೂ ಕೂರ್ಗ್ ಯುನೈಟೆಡ್ ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯಾವಳಿಯಲ್ಲಿ ಸುಂಟಿಕೊಪ್ಪ ಎಫ್.ಸಿ. ತಂಡವು ೫-೩ ಗೋಲುಗಳ ಅಂತರದಿAದ ರಾಪ್ಟರ್ಸ್ ಕುಂಜಿಲ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ರಾಪ್ಟರ್ಸ್ ಕುಂಜಿಲ ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಬಹುಮಾನ ವಿತರಣಾ ಸಮಾರಂಭದಲ್ಲಿ ಅತಿಥಿಗಳಾಗಿ ಪ್ರಮುಖರಾದ ರಿಜ್ವಾನ್, ಸರ್ಫುದ್ದೀನ್, ಜಿನಾಶ್, ತಾಹಿರ್, ರಫೀಕಲಿ ಸೇರಿದಂತೆ ಅರಬ್ ಸಂಸ್ಥಾನದಲ್ಲಿರುವ ಕೊಡಗಿನ ಅನಿವಾಸಿಗಳು ಹಾಜರಿದ್ದರು.