ಕೂಡಿಗೆ, ಜು. ೨: ಕೂಡುಮಂಗಳೂರು ಸಮೀಪದ ಚಿಕ್ಕತ್ತೂರು ವ್ಯಾಪ್ತಿಯ ರೈತರ ಜಮೀನಿಗೆ ದಾಳಿ ಮಾಡಿದ ಕಾಡಾನೆ ಹಿಂಡು ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಮತ್ತು ಸಿಹಿ ಗೆಣಸು ಬೆಳೆಯನ್ನು ತುಳಿದು ನಷ್ಟ ಪಡಿಸಿವೆ. ಚಿಕ್ಕತ್ತೂರು ಗ್ರಾಮದ ತಿಮ್ಮಯ್ಯ, ಜಗದೀಶ್, ನಾಗೇಂದ್ರ, ರಾಮೇಗೌಡ ಅವರ ಜಮೀನಿನಲ್ಲಿ ಬಿತ್ತನೆ ಮಾಡಿದ ಬೆಳೆ ಚಿಗುರು ಬರುವಾಗಲೇ ಕಾಡಾನೆಗಳು ಸಮೀಪದ ಮೀಸಲು ಬೆಂಡೆಬೆಟ್ಟದ ಅರಣ್ಯ ಮತ್ತು ಅತ್ತೂರು ಅರಣ್ಯ ಪ್ರದೇಶಗಳ ಕಡೆಯಿಂದ ಬಂದು ನಾಶಪಡಿಸಿವೆ. ಸಂಬAಧಿಸಿದ ಅರಣ್ಯ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸುವಂತೆ ಗ್ರಾಮಸ್ಥರ ಆಗ್ರಹವಾಗಿದೆ.