ವೀರಾಜಪೇಟೆ, ಜು. ೨: ಅಪ್ಪಯ್ಯಸ್ವಾಮಿ ರಸ್ತೆಯ ಜನರಲ್ ತಿಮ್ಮಯ್ಯ ಬಡಾವಣೆಯ ಕಾವೇರಿ ಕೊಡವಕೇರಿಯ ೨೦ನೇ ವರ್ಷದ ವಾರ್ಷಿಕ ಮಹಾಸಭೆ ಕೊಡವ ಸಮಾಜದ ಸಭಾಂಗಣದಲ್ಲಿ ಕೇರಿ ಅಧ್ಯಕ್ಷ ಮೇರಿಯಂಡ ಅರಸು ಅಚ್ಚಮ್ಮ ಅಧ್ಯಕ್ಷತೆಯಲ್ಲಿ ನಡೆಯಿತು.
ಕೊಡವ ಸಂಸ್ಕೃತಿ, ಭಾಷಾ ವಿಶೇಷತೆ, ಶಾಸ್ತç ಸಂಪ್ರದಾಯಗಳು ವಿಶ್ವದಲ್ಲಿಯೇ ವಿಶಿಷ್ಟವಾದದ್ದು. ಈ ಪದ್ಧತಿ ಪರಂಪರೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದರ ಮೂಲಕ ಇವುಗಳನ್ನು ಜೀವಂತವಿರಿಸಬೇಕೆAದು ಅರಸು ಅಚ್ಚಮ್ಮ ಹೇಳಿದರು.
ಕಾರ್ಯದರ್ಶಿ ಚೊಟ್ಟೇರ ಬೆಳ್ಳಿಯಪ್ಪ ಕಳೆದ ವಾರ್ಷಿಕ ಸಭೆಯ ವರದಿಯನ್ನು ಮಂಡಿಸಿದರು. ಮರಣ ನಿಧಿ ಕಾರ್ಯದರ್ಶಿ ಚೊಟ್ಟೇರ ರಮೇಶ್ ೨೦೨೩-೨೪ರ ಜಮಾ ಖರ್ಚಿನ ವಿವರ ಹಾಗೂ ಮರಣ ನಿಧಿಯ ಲೆಕ್ಕಪತ್ರವನ್ನು ಮಂಡಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಅಂಜಪರವAಡ ಅನಿಲ್ ಮಂದಣ್ಣ, ಬಾಳೇಕುಟ್ಟಿರ ರಾಜಾ ಗಣಪತಿ, ಮೇಕತಂಡ ಚಂಗಪ್ಪ, ಬಟ್ಟಿಯಂಡ ವಿಠಲ, ಮುಕ್ಕಾಟಿರ ರಾಯ್ ಬಿದ್ದಪ್ಪ, ಬೊಪ್ಪಂಡ ತ್ರಿಶು, ಪಾಂಡAಡ ಕಾವ್ಯ ರಚನ್, ಬೊಳ್ಳೇಪಂಡ ಆಶಾ ಸುರೇಶ್, ಅಮ್ಮಣಕುಟ್ಟಂಡ ರಶ್ಮಿ ತಿಮ್ಮಯ್ಯ, ಚಿಲ್ಲವಂಡ ರೇಖಾ ಹರೀಶ್ ಹಾಗೂ ತಾತಂಡ ಮಿನ್ನು ಹಾಜರಿದ್ದರು.