ಮಡಿಕೇರಿ, ಜು. ೨: ಮಡಿಕೇರಿ-ವೀರಾಜಪೇಟೆ ರಾಜ್ಯ ಹೆದ್ದಾರಿಯ ಮೇಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ರಸ್ತೆ ಮಧ್ಯೆ ಬೃಹತ್ ಗುಂಡಿಗಳು ನಿರ್ಮಾಣವಾಗಿ ವಾಹನ ಸಂಚಾರಕ್ಕೆ ತೊಡಕು ಉಂಟಾಗುತ್ತಿದ್ದ ಕುರಿತು ‘ಶಕ್ತಿ’ ದಿನಪತ್ರಿಕೆಯಲ್ಲಿ "ಬೃಹತ್ ಗುಂಡಿಗಳ ನಡುವೆ ಸಾಗಬೇಕಾದ ಸ್ಥಿತಿ" ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಗೊಂಡಿತ್ತು.
ಬಳಿಕ ಎಚ್ಚೆತ್ತುಕೊಂಡ ಲೋಕೋಪ ಯೋಗಿ ಇಲಾಖೆ ಮಂಗಳವಾರ ಗುಂಡಿಬಿದ್ದ ಸ್ಥಳಕ್ಕೆ ಕಾಂಕ್ರೀಟ್ ಮಿಕ್ಸ್ ತುಂಬುವ ಮೂಲಕ ರಸ್ತೆಯಲ್ಲಿದ್ದ ಬೃಹತ್ ಗುಂಡಿಗಳಿಗೆ ತಾತ್ಕಾಲಿಕ ಮುಕ್ತಿ ನೀಡಲು ಮುಂದಾಗಿದೆ. ಶಾಶ್ವತವಾಗಿ ಈ ಸ್ಥಳದಲ್ಲಿ ನೀರು ನಿಲ್ಲದಂತೆ ಮಾಡಿ, ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿ, ಕಾಂಕ್ರಿಟ್ ಅಳವಡಿಸುವ ಮೂಲಕ ರಸ್ತೆ ಸರಿಪಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.