ಮಡಿಕೇರಿ, ಜು. ೨: ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ೨೦೨೪-೨೫ನೇ ಸಾಲಿನ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭವನ್ನು ಶಾಲಾ ಸಭಾಂಗಣದಲ್ಲಿ ನಡೆಸಲಾಯಿತು. ಕೊಡವ ಸಮಾಜ ಹಾಗೂ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಮಂಡುವAಡ ಮುತ್ತಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಂಜಿತAಡ ಸ್ವಾತಿ ಸುಬ್ರಮಣಿ (ನಿವೃತ್ತ ಡೆಪ್ಯೂಟಿ ಮಾನೈಜಿಂಗ್ ಡೈರೆಕ್ಟರ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ) ಅವರು ಆಗಮಿಸಿದ್ದರು.
ವಿವಿಧ ವಿಭಾಗಗಳ ನಾಯಕರಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅತಿಥಿಗಳು ಹಾಗೂ ಶಾಲಾ ಅಧ್ಯಕ್ಷರು ಪದಕ ಪ್ರದಾನ ಮಾಡಿದರು ನಂತರ ಶಾಲಾ ಪ್ರಾಂಶುಪಾಲೆ ಸವಿತ ಎಂ.ಜಿ. ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ನಂತರ ಸಾಹಿತ್ಯ, ವಿಜ್ಞಾನ, ಕಲಾ, ವಾಣಿಜ್ಯ ಹಾಗೂ ಕ್ವಿಜ್ ಸಂಘಗಳ ಉದ್ಘಾಟನೆ ಮಾಡಲಾಯಿತು.
ವಿಜ್ಞಾನ ಸಂಘವನ್ನು ಮಡಿಕೇರಿ ಕೊಡವ ಸಮಾಜ ಕಾರ್ಯದರ್ಶಿ ಕನ್ನಂಡ ಸಂಪತ್ ಕುಮಾರ್, ಕಲಾ ಸಂಘವನ್ನು ಶಾಲೆಯ ಸಂಚಾಲಕರಾದ ಕನ್ನಂಡ ಕವಿತಾ ಕಾವೇರಮ್ಮ, ವಾಣಿಜ್ಯ ಸಂಘವನ್ನು ಶಾಲಾಡಳಿತದ ಕಾರ್ಯಾಧ್ಯಕ್ಷ ಕೇಕಡ ಎ. ದೇವಯ್ಯ, ಸಾಹಿತ್ಯ ಸಂಘವನ್ನು ಶಾಲಾಡಳಿತ ಮಂಡಳಿಯ ಸದಸ್ಯೆ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಕ್ವಿಜ್ ಸಂಘವನ್ನು ಶಾಲಾಡಳಿತ ಮಂಡಳಿಯ ಸದಸ್ಯ ಕಾಳಚಂಡ ಎಂ. ಅಪ್ಪಣ್ಣ ಉದ್ಘಾಟಿಸಿದರು. ೨೦೨೩-೨೪ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ೧೦ನೇ ತರಗತಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಮುಖ್ಯ ಅತಿಥಿಗಳು ತಮ್ಮ ಶಾಲಾ ದಿನಗಳ ಮೆಲುಕು ಹಾಕಿದರು. ವಿದ್ಯಾರ್ಥಿ ನಾಯಕರ ಜವಬ್ದಾರಿಯ ಬಗ್ಗೆ ತಿಳಿಸಿ, ಉತ್ತಮ ನಾಗರಿಕರಾಗಬೇಕು ಎಂದರು. ಪ್ರಯತ್ನದಿಂದ ಬದುಕಿನಲ್ಲಿ ಮೇಲೆ ಬರುವ ಪ್ರಯತ್ನ ಪಡಬೇಕು. ತಂದೆ- ತಾಯಿಗಳ ಬಗ್ಗೆ ಗೌರವ ಇರಬೇಕು ಎಂಬುದಾಗಿ ತಿಳಿಸಿದರು.
ನಂತರ ವಿದ್ಯಾರ್ಥಿಗಳಿಂದ ಸಾಂಸ್ಕöÈತಿಕ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷ ಮಂಡುವAಡ ಮುತ್ತಪ್ಪ, ಶಾಲಾ ಪ್ರಾಂಶುಪಾಲೆ ಸವಿತ ಎಂ.ಜಿ ಹಾಗೂ ಶಾಲೆಯ ಕಾರ್ಯಾಧ್ಯಕ್ಷ ಕೇಕಡ ಎ. ದೇವಯ್ಯ, ಕನ್ನಂಡ ಕವಿತಾ ಕಾವೇರಮ್ಮ, ಶಾಲಾ ಆಡಳಿತ ಅಧಿಕಾರಿ ಮುಕ್ಕಾಟಿರ ಪೊನ್ನಮ್ಮ, ಕನ್ನಂಡ ಸಂಪತ್ ಕುಮಾರ್, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಬೋಧಕ ಹಾಗೂ ಬೋಧಕೇತರ ವರ್ಗದವರು. ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.