ಮುಳ್ಳೂರು, ಜು. ೨: ವೈದ್ಯರ ದಿನ ಪ್ರಯುಕ್ತ ಸಮೀಪದ ಆಲೂರು ಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ವತಿಯಿಂದ ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸುಪರ್ಣ ಕೃಷ್ಣಾನಂದ್ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಕಾರ್ಯಕ್ರಮದಲ್ಲಿ ರೋಟರಿ ಮಲ್ಲೇಶ್ವರ ಸಂಸ್ಥೆಯ

ಅಧ್ಯಕ್ಷ ಟಿ.ವಿ.ದಯಾನಂದ್, ಕಾರ್ಯದರ್ಶಿ ಎಚ್.ಇ.ಕಿರಣ್, ರೋಟರಿ ಸದಸ್ಯರಾದ ಎಚ್.ಇ. ತಮ್ಮಯ್ಯ, ನಾರಾಯಣಸ್ವಾಮಿ, ಎಸ್.ಜೆ.ಪ್ರಸನ್ನಕುಮಾರ್, ಎ.ಜೆ.ವಿಜಯ್, ಆಸ್ಪತ್ರೆ ಆರೋಗ್ಯ ನಿರೀಕ್ಷಣಾಧಿಕಾರಿ ಎಚ್.ಡಿ.ಪ್ರವೀಣ್ ಕುಮಾರ್, ಆಸ್ಪತ್ರೆ ಆರೋಗ್ಯ ಸಹಾಯಕಿಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು.