ಸುಂಟಿಕೊಪ್ಪ, ಜು. ೨: ಅತ್ತೂರು ನಲ್ಲೂರು ಗ್ರಾಮz ತೋಟದಲ್ಲಿ ಕಾಡಾನೆಗಳ ಹಿಂಡು ಕೃಷಿ ಫಸಲುಗಳನ್ನು ನಾಶಗೊಳಿಸಿದೆ.

ಸೋಮವಾರ ಮಧ್ಯರಾತ್ರಿ ೧ ಗಂಟೆಯ ಸಮಯದಲ್ಲಿ ಅತ್ತೂರು ನಲ್ಲೂರು ಗ್ರಾಮದ ಕೃಷಿಕ ಕಡ್ಲೆಮನೆ ರಘುಕುಮಾರ ತೋಟಕ್ಕೆ ಕಾಡಾನೆಗಳ ಹಿಂಡು ತೋಟಕ್ಕೆ ಲಗ್ಗೆ ಇಟ್ಟು ಬಾಳೆ ಗಿಡಗಳನ್ನು ಸಂಪೂರ್ಣ ತಿಂದು ನಾಶಪಡಿಸಿದೆ. ಕಾಡಾನೆಗಳ ಹಿಂಡು ತೋಟಗಳಲ್ಲಿಯೇ ಬೀಡುಬಿಟ್ಟಿದ್ದು ಈ ಭಾಗದ ಬಹುತೇಕ ತೋಟಗಳಲ್ಲಿ ದಾಳಿ ನಡೆಸುವ ಮೂಲಕ ಕೃಷಿ ಫಸಲುಗಳನ್ನು ಹಾನಿಗೊಳಿಸುತ್ತಿದೆ. ಅರಣ್ಯ ಇಲಾಖೆಯವರು ಕಾಡಾನೆಗಳನ್ನು ಆಗಿಂದಾಗೆ ಕಾಡಾನೆಗಳನ್ನು ಕಾಡಿಗೆ ಅಟ್ಟಲಾಗುತ್ತಿದ್ದರೂ, ಮರುದಿನ ಮತ್ತೆ ಅದೇ ಸ್ಥಳಗಳಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿ ಮತ್ತಷ್ಟು ದಾಂಧಲೇ ನಡೆಸುತ್ತಿದೆ ಎಂದು ರಘುಕುಮಾರ್ ಆಳಲನ್ನು ತೋಡಿಕೊಂಡಿದ್ದಾರೆ.