ಚೆಯ್ಯಂಡಾಣೆ, ಜು. ೨: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡ ಹಾಗೂ ನೆರೆಯ ಪಾಲಂಗಾಲ ಗ್ರಾಮದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಿಗಟ್ಟುವಲ್ಲಿ ಯಶಸ್ವಿಯಾದರು.

ಮಂಗಳವಾರ ಬೆಳಿಗ್ಗೆ ನಡೆದ ಕಾರ್ಯಾಚರಣೆಯಲ್ಲಿ ಕರಡ ಗ್ರಾಮದ ಪಾಂಡAಡ, ಎಳ್ತಂಡ, ಐತಿಚಂಡ, ಚೇಲ್ಮಂಡ ತೋಟಗಳಲ್ಲಿ ಬೀಡು ಬಿಟ್ಟು ಕಾಫಿ, ಅಡಿಕೆ, ಬಾಳೆ, ತೆಂಗು, ಒಳ್ಳೆಮೆಣಸು ಗಿಡಗಳನ್ನು ತುಳಿದು ನಾಶಪಡಿಸಿ ಉಪಟಳ ನೀಡುತಿದ್ದ ಕಾಡಾನೆಯ ಹಿಂಡನ್ನು ಮಲೆತಿರಿಕೆ ಕಾಡಿಗೆ ಓಡಿಸಲಾಯಿತು.

ಅಮ್ಮತಿ, ಹೆಗ್ಗಳ, ವೀರಾಜಪೇಟೆ, ಚೆಯ್ಯಂಡಾಣೆ, ಆರ್‌ಆರ್‌ಟಿ ಸುಮಾರು ೨೫ ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಆರ್‌ಎಫ್‌ಓ ಕಳ್ಳಿರ ದೇವಯ್ಯ ಹಾಗೂ ಎಸಿಎಫ್ ನೆಹರು ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಓ ಆನಂದ್, ಪ್ರಶಾಂತ್, ಸಿಬ್ಬಂದಿ ಗ್ರಾಮಸ್ಥರು ಇದ್ದರು.

ತಾ. ೩ ರಂದು (ಇಂದು) ಕೂಡ ಕಾರ್ಯಾಚರಣೆ ಮುಂದುವರೆಯ ಲಿದೆ. ಕರಡ, ಪಾಲಂಗಾಲ, ಕೆದ ಮುಳ್ಳೂರು, ನರಿಯಂದಡ, ಕೊಕೇರಿ, ಚೇಲಾವರ ಹಾಗೂ ಮರಂದೋಡ ದಲ್ಲಿ ಉಳಿದ ಕಾಡಾನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಯಲಿದೆ. -ಅಶ್ರಫ್