ಮಡಿಕೇರಿ, ಜು. ೧: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ೨೦೨೦ ರಲ್ಲಿ ಪ್ರಸ್ತುತಪಡಿಸಿದ ‘ಸಾಹೇಬ್ರು ಬಂದವೇ’ ನಾಟಕದಲ್ಲಿ ಮೋನಿಕಾ ಪಾತ್ರದಲ್ಲಿ ಅಭಿನಯಿಸಿದ್ದ ಸುಸ್ಮಿತಾ ಅವರು ಶಿವಮೊಗ್ಗ ಜಿಲ್ಲೆಯ ಸಾಗರದ ನೀನಾಸಂ ರಂಗಶಿಕ್ಷಣ ತರಬೇತಿಗೆ ಪ್ರಸಕ್ತ (೨೦೨೪-೨೫) ಸಾಲಿಗೆ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಲಕ್ಷಿö್ಮÃನಾರಾಯಣ ಕಜೆಗದ್ದೆ ತಿಳಿಸಿದ್ದಾರೆ. ಈಕೆ ಕಾಸರಗೋಡು ಜಿಲ್ಲೆ ದೇಲಂಪಾಡಿ ಗ್ರಾಮದ ನಿವಾಸಿ ಬೆಳ್ಳಿಪಾಡಿ ಪೆರುಂದಲಪದವು ಮೋಹನ್ ಮತ್ತು ಸುಶೀಲಾ ದಂಪತಿಯ ದ್ವಿತೀಯ ಪುತ್ರಿ.