ವೀರಾಜಪೇಟೆ, ಜು. ೧: ಕೇರಳದ ಸರಕಾರೇತರ ಸಂಸ್ಥೆಯಾದ ಪೀಪಲ್ಸ್ ಫೌಂಡೇಶನ್ ಹಾಗೂ ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿ ಸಂಯುಕ್ತವಾಗಿ ೨೦೧೯ರ ಪ್ರವಾಹ ಸಂತ್ರಸ್ತರಿಗಾಗಿ ನಿರ್ಮಿಸಿ ನೀಡಲಾದ ಮನೆಗಳನ್ನು ಒಳಗೊಂಡ ಸಿದ್ದಾಪುರ-ನಲ್ವತ್ತೇಕರೆಯ ಪೀಪಲ್ಸ್ ವಿಲೇಜಿನಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಈದ್ ಸೌಹಾರ್ದ ಕೂಟ ಏರ್ಪಡಿಸಲಾಗಿತ್ತು.

ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಕೆ. ಹಕೀಂ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರಕೃತಿ ವಿಕೋಪದಲ್ಲಿ ಸಂಕಷ್ಟಕ್ಕೀಡಾಗಿದ್ದವರ ನೆರವಿಗೆ ಬಂದ ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆ ಹಾಗೂ ಅಂಗ ಸಂಸ್ಥೆಗಳ ಸೇವಾ ಕಾರ್ಯಗಳು ಅತ್ಯಂತ ಶ್ಲಾಘನೀಯ ಎಂದರು. ಪೀಪಲ್ಸ್ ಫೌಂಡೇಶನ್ ವಲಯ ಪ್ರತಿನಿಧಿ ಕೆ. ಸಾದಿಖ್ ಉಳಿಯಿಲ್ ದಿಕ್ಸೂಚಿ ಭಾಷಣ ಮಾಡಿದರು.

ಜ.ಇ.ಮೈಸೂರು ವಲಯ ಸಂಚಾಲಕ ಯು. ಅಬ್ದುಲ್ ಸಲಾಂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸೌಹಾರ್ದತೆಯೆಂಬುದು ಪ್ರಕೃತಿ ನಿಯಮವಾಗಿದೆ. ಪ್ರವಾದಿ

ಇಬ್ರಾಹಿಮ್ ಅವರ ತ್ಯಾಗಮಯ ಬದುಕನ್ನು ನೆನಪಿಸುವ ಈ ಸಂದರ್ಭದಲ್ಲಿ ಎಲ್ಲರೂ ಸೌಹಾರ್ದತೆಯ ವಾತಾವರಣವನ್ನು ನಿರ್ಮಿಸಲು ಮುಂದಾಗಬೇಕು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷಿö್ಮ, ಉಪಾಧ್ಯಕ್ಷೆ ಪ್ರಮೀಳಾ , ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ಜಿಲ್ಲಾ ಸಂಚಾಲಕಿ ಝೈನಬಾ ರೆಹೆಮಾನ್, ನಲ್ವತ್ತೇಕರೆ ಮಹಲ್ ಸಮಿತಿ ಅಧ್ಯಕ್ಷ ಬೀರಾನ್ ಕುಟ್ಟಿ, ಜಮಾಅತೆ ಇಸ್ಲಾಮಿ ಹಿಂದ್ ಮೈಸೂರು ವಲಯ ಕಾರ್ಯದರ್ಶಿ ಪಿ.ಕೆ. ಅಬ್ದುಲ್ ರೆಹೆಮಾನ್, ಎನ್.ಅಬ್ದುಲ್ ಗಫೂರ್, ಟಿ.ಎ. ಬಷೀರ್ ಅಹಮದ್ ಇದ್ದರು.