ಮಡಿಕೇರಿ, ಜು. ೧: ನಗರಸಭಾ ಸದಸ್ಯರೊಬ್ಬರು ಅಕ್ರಮವಾಗಿ ನಗರಸಭಾ ಖಾತೆಯಿಂದ ವರ್ಗಾಯಿಸಿದ್ದಾರೆ ಎಂಬ ಪುಕಾರಿನ ವಿಲೇವಾರಿಗೆ ೨ ತಿಂಗಳ ಅವಕಾಶ ನೀಡಿ ರಾಜ್ಯ ಉಚ್ಛ ನ್ಯಾಯಾಲಯ ಆದೇಶ ಹೊರಡಿಸಿದೆ.
ಮಡಿಕೇರಿ ನಗರಸಭೆಯ ಸದಸ್ಯ ಅಪ್ಪಣ್ಣ ಅವರು ನಿಯಮಕ್ಕೆ ವಿರುದ್ಧವಾಗಿ ಹಣ ವರ್ಗಾಯಿಸಿದ್ದಾರೆ ಎಂದು ಆರೋಪಿಸಿ ಇನ್ನೋರ್ವ ಸದಸ್ಯ ಅಮೀನ್ ಮೊಹಿಸಿನ್ ಪ್ರಾದೇಶಿಕ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಆದರೆ, ಪ್ರಾದೇಶಿಕ ಆಯುಕ್ತರು ಯಾವುದೇ ಕ್ರಮ ಕೈಗೊಂಡಿಲ್ಲವೆAದು ರಾಜ್ಯ ಉಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೀಗ ನ್ಯಾಯಾಲಯವು ಪ್ರಾದೇಶಿಕ ಆಯುಕ್ತರಿಗೆ ೨ ತಿಂಗಳ ಕಾಲಾವಕಾಶದೊಳಗೆ ಈ ದೂರಿನ ಕುರಿತು ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.