x

ನಾಪೋಕ್ಲು, ಜು. ೧: ಸಮೀಪದ ಪಾಲೆಮಾಡು ನಿವಾಸಿ ಎಂ ಆರ್ ಕಾಳಪ್ಪ ಅವರ ಮನೆಯ ಸಮೀಪದ ಬರೆ ಕುಸಿಯುವ ಹಂತದಲ್ಲಿದ್ದು ಕಾಳಪ್ಪ ಭಯದಿಂದ ದಿ£ Àದೂಡುತ್ತಿದ್ದಾರೆ..

ಮೂರ್ನಾಡು ಸಮೀಪದ ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೆಮಾಡುವಿನಲ್ಲಿ ವಾಸವಿರುವ ಎಂ.ಆರ್. ಕಾಳಪ್ಪ ಅವರ ಮನೆಯ ಸಮೀಪದ ಬರೆ ಕುಸಿಯಲು ಆರಂಭಿಸಿ ಮೂರು ವರ್ಷಗಳೇ ಸಂದಿವೆ. ಇದೀಗ ಈ ಬಾರಿಯ ಮಳೆಯಲ್ಲೂ ಕೂಡ ಮತ್ತಷ್ಟು ಬರೆಯ ಮಣ್ಣು ಕುಸಿದು ಮನೆ ಹಾಗೂ ಸಮೀಪದ ದೇವಾಲಯಕ್ಕೆ ಹಾನಿಯಾಗುವ ಸಂಭವವಿದೆ. ಕಳೆದ ಮೂರು ವರ್ಷಗಳಿಂದ ಗ್ರಾಮ ಪಂಚಾಯಿತಿಗೆ ತಡೆಗೋಡೆ ನಿರ್ಮಿಸಲು ಕಾಳಪ್ಪ ಮನವಿ ಸಲ್ಲಿಸಿದ್ದರು. ಅವರ ಕೋರಿಕೆಗೆ ಸ್ಪಂದನೆ ದೊರೆತಿಲ್ಲ.

ಸಂಬAಧಿಸಿದ ಇಲಾಖೆಯವರು ಸ್ಥಳವನ್ನು ಪರಿಶೀಲಿಸಿ ಬರೆ ಕುಸಿತದಿಂದ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಿ ಕಾಳಪ್ಪ ಅವರ ಆತಂಕವನ್ನು ದೂರ ಮಾಡಬೇಕಿದೆ.