ಶನಿವಾರಸಂತೆ, ಜು. ೧: ಶನಿವಾರಸಂತೆ ರೋಟರಿ ಸಂಸ್ಥೆಗೆ ೨೦೨೩-೨೪ ರ ಅವಧಿಯಲ್ಲಿ ಕೈಗೊಂಡ ಉತ್ತಮ ಸೇವಾ ಕಾರ್ಯಕ್ರಮಗಳಿಗಾಗಿ ಗೋಲ್ಡನ್ ಅವಾರ್ಡ್ ಲಭಿಸಿದೆ.
ಮೈಸೂರಿನಲ್ಲಿ ನಡೆದ ಜೈತ್ರ ಯಾತ್ರಾ ಅವಾರ್ಡ್ಸ್ ನೈಟ್ ಕಾರ್ಯಕ್ರಮದಲ್ಲಿ ರೋಟರಿ ಕೊಡಗು ಜಿಲ್ಲಾ ರಾಜ್ಯಪಾಲ ಎಚ್.ಆರ್. ರಂಗನಾಥ್ ಅವರಿಂದ ಶನಿವಾರಸಂತೆ ರೋಟರಿ ಸಂಸ್ಥೆ ಅಧ್ಯಕ್ಷ ಎ.ಎಚ್. ಚಂದ್ರಕಾAತ್ ಹಾಗೂ ಕಾರ್ಯದರ್ಶಿ ಎ.ಆರ್. ಸೋಮಶೇಖರ್ ಪ್ರಶಸ್ತಿ ಪತ್ರ ಹಾಗೂ ಅವಾರ್ಡ್ ಸ್ವೀಕರಿಸಿದರು. ಪದಾಧಿಕಾರಿಗಳು ಹಾಜರಿದ್ದರು.