ಮಡಿಕೇರಿ, ಜು. ೧: ಪ್ರಸ್ತುತ ದಿನಮಾನಗಳಲ್ಲಿ ಸಮಾಜಕ್ಕೆ ಹಿತವಿಲ್ಲದ ವಿಚಾರಗಳ ಸುತ್ತ ಮಾಧ್ಯಮಗಳು ಸುತ್ತುತ್ತಿದ್ದು, ಇವುಗಳನ್ನು ಮೀರಿ ಜನ ಹಿತದ ವಿಚಾರಗಳು ಆದ್ಯತೆಯಾಗಿರಲೆಂದು ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಸಾಹಿತಿ ಡಾ. ನರೇಂದ್ರ ರೈ ದೇರ್ಲ ಆಶಯ ವ್ಯಕ್ತಪಡಿಸಿದರು.
ಕೊಡಗು ಪತ್ರಕರ್ತರ ಸಂಘ ಮತ್ತು ಕೊಡಗು ಪತ್ರಿಕಾ ಭವನ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ಆಯೋಜಿತ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚಿನ ಕೆಲ ಸಮಯಗಳಿಂದ ದೃಶ್ಯ ವಾಹಿನಿಗಳು ಒಂದು ಪ್ರಕರಣಕ್ಕೆ ಸಂಬAಧಿಸಿದ ಸಣ್ಣ ಸಣ್ಣ ವಿಚಾರಗಳಿಗೆ ಗಂಟೆಗಟ್ಟಲೆ ಸಮಯವನ್ನು ವಿನಿಯೋಗಿಸುತ್ತಿವೆ. ಇವುಗಳನ್ನು ಮೀರಿ ನಮ್ಮ ಸುತ್ತಮುತ್ತಲ ಜನ ಸಾಮಾನ್ಯರ ದುಃಖ ದುಮ್ಮಾನಗಳಿಗೆ ಸ್ಪಂದಿಸುವ, ನಮ್ಮಲ್ಲಿನ ಕೃಷಿ ಚಟುವಟಿಕೆ, ಹಸಿವಿನ ವಿಚಾರಗಳಿಗೆ ನಾವೇಕೆ ಆದ್ಯತೆಯನ್ನು ನೀಡುತ್ತಿಲ್ಲವೆಂದು ಪ್ರಶ್ನಿಸಿದರು.
ಸಮಾಜ ಸರಿಯಾದ ಪಥದಲ್ಲಿ ಸಾಗುವುದಕ್ಕೆ ಪೂರಕವಾಗಿ ಮಾಧ್ಯಮ ಕ್ಷೇತ್ರವು ದಾರಿ ತೋರುವ ದೀಪದ ಕೆಲಸವನ್ನು, ಧ್ವನಿಯಿಲ್ಲದ ಮಂದಿಯ ಧ್ವನಿಯಾಗುವ ಕೆಲಸವನ್ನು ಮಾಡುವ ನಿಟ್ಟಿನಲ್ಲಿ ಮುಂದುವರೆಯಬೇಕೆAದು ತಿಳಿಸಿದರು.
ಪತ್ರಿಕಾ ದಿನಾಚರಣೆಯ ಸಂದರ್ಭ ನಮ್ಮ ಆತ್ಮಾವಲೋಕನಕ್ಕೆ ಬದಲಾಗಿ ನಮ್ಮ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಸಮಯವಾಗಿದೆ. ಅತ್ಯಂತ ಅತಿರೇಕದ ಸಂದಿಗ್ಧ ಸಂದರ್ಭದಲ್ಲಿ ನಾವಿದ್ದೇವೆಂದು ಹೇಳಿದ ಅವರು, ಇವುಗಳ ನಡುವೆಯೂ ಕೊಡಗಿನ ಪತ್ರಿಕೋದ್ಯಮ ಇಂದಿಗೂ ಪ್ರಾಮಾಣಿಕವಾಗಿ, ಜನಪರವಾಗಿ ಕಾರ್ಯನಿರ್ವಹಿಸುತ್ತಿದೆ. ಕೊಡಗಿನ ಮಟ್ಟಿಗೆ ಶಕ್ತಿ ಪತ್ರಿಕೆ ಸುದ್ದಿಯ ಗಟ್ಟಿತನದೊಂದಿಗೆ ಪ್ರಾಮಾಣಿಕತೆಯನ್ನು ಉಳಿಸಿಕೊಂಡಿದೆ ಎಂದು ಮೆಚ್ಚುಗೆಯ ನುಡಿಯಾಡಿದರು.
ಕೊರೊನಾ ಮಹಾಮಾರಿಯ ಅವಧಿ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಿದ್ದು, ಇಂದು ತರಗತಿಯಲ್ಲಿ ಮಕ್ಕಳು ಪಾಠ ಪ್ರವಚನಗಳನ್ನು ನಿಷ್ಠೆಯಿಂದ ಕೇಳುತ್ತಿಲ್ಲ. ಟಿವಿ ಮತ್ತು ಮೊಬೈಲ್ಗಳ ಪ್ರಭಾವಳಿಯಿಂದ ಮಕ್ಕಳನ್ನು ಹೊರ ತರುವ ಮೂಲಕ ಅವರನ್ನು ಮನುಷ್ಯರನ್ನಾಗಿ ಪರಿವರ್ತಿಸುವ ಅಗತ್ಯವಿದೆಯೆಂದು ಮಾರ್ಮಿಕವಾಗಿ ನುಡಿದರು.
ಸಮಾರಂಭವನ್ನು ಜ್ಯೋತಿ ಬೆಳಗುವ
(ಮೊದಲ ಪುಟದಿಂದ) ಮೂಲಕ ಉದ್ಘಾಟಿಸಿದ ಕೊಡಗು ಪತ್ರಿಕಾ ಭವನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ. ಕೇಶವ ಕಾಮತ್ ಮಾತನಾಡಿ, ತಂತ್ರಜ್ಞಾನದ ಬೆಳವಣಿಗೆ ಪತ್ರಿಕಾ ಕ್ಷೇತ್ರದ ಮೇಲೆ ಗಾಢ ಪರಿಣಾಮವನ್ನು ಬೀರುತ್ತಿದೆ. ಪ್ರಸ್ತುತ ಆನ್ಲೈನ್ಗಳಲ್ಲು ಸುದ್ದಿಗಳು ಜನರಿಗೆ ತಲುಪಬಲ್ಲುದಾದರು, ಪತ್ರಿಕೆಯ ಓದಿನ ಸಂತೋಷ ಮತ್ತು ಅನುಭವ ಬೇರೆಯೆ ತೆರನಾದದ್ದು ಎಂದರು.
ಹಿರಿಯ ಪತ್ರಕರ್ತ ಟಿ.ಪಿ. ರಮೇಶ್ ಮಾತನಾಡಿ, ಪ್ರಜೆಗಳ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸುವುದು ಪತ್ರಿಕೆಗಳ ಧರ್ಮವಾಗಿದೆ. ಸಮಾಜ ಸರಿದಾರಿಯಲ್ಲಿ ಮುನ್ನಡೆಸಲು ಪತ್ರಿಕೆಗಳು ನೆರವಾಗಬೇಕೆಂದು ಹೇಳಿದರು.
ಪ್ರಸ್ತುತ ಬಂಡವಾಳಶಾಹಿಗಳು ಪತ್ರಿಕೆಗಳನ್ನು ನಡೆಸುವ ಹಂತವನ್ನು ಕಾಣುತ್ತಿದ್ದು, ಇದು ಅಪಾಯಕಾರಿಯಾದ ಬೆಳವಣಿಗೆಯಾಗಿದೆಯಲ್ಲದೆ ಪತ್ರಿಕಾ ಸ್ವಾತಂತ್ರö್ಯಕ್ಕೂ ಧಕ್ಕೆಯನ್ನುಂಟು ಮಾಡುವ ಸಾಧ್ಯತೆ ಇರುವುದಾಗಿ ಕಳವಳ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್ ಮಾತನಾಡಿ, ಸಂಘದ ವತಿಯಿಂದ ಮೂರನೇ ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರ ಸಹಕಾರವನ್ನು ಸ್ಮರಿಸಿದರು.
ಹಿರಿಯ ಪತ್ರಕರ್ತರಿಗೆ ಸನ್ಮಾನ: ಸಮಾರಂಭದಲ್ಲಿ ಶಕ್ತಿ ಪತ್ರಿಕೆಯ ಸಂಪಾದಕರಾದ ಜಿ. ಚಿದ್ವಿಲಾಸ್, ಗಡಿನಾಡ ಸಂಚಾರಿ ಪತ್ರಿಕೆಯ ಸಂಪಾದಕರಾಗಿದ್ದ ಟಿ.ಪಿ. ರಮೇಶ್, ಸಂಯುಕ್ತ ಕರ್ನಾಟಕ ಪತ್ರಿಕೆಯ ಸುಂಟಿಕೊಪ್ಪ ವರದಿಗಾರ ಕೆ.ಹೆಚ್.ಶಿವಣ್ಣ, ಗೋಣಿಕೊಪ್ಪ ಸುದ್ದಿ ಸಂಸ್ಥೆಯ ಸ್ಥಾಪಕ ಟಿ.ಎಲ್.ಶ್ರೀನಿವಾಸ್ ಮತ್ತು ಸೋಮವಾರಪೇಟೆ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರ ತೇಲಪಂಡ ಕವನ್ ಕಾರ್ಯಪ್ಪ ಅವರನ್ನು ಅತಿಥಿ ಗಣ್ಯರು ಸನ್ಮಾನಿಸಿ, ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಕ್ತಿ ಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್, ನಮ್ಮೊಳಗಿನ ಯಾವುದೇ ಭಿನ್ನಾಭಿಪ್ರಾಯಗಳನ್ನು ಬದಿಗೆ ಸರಿಸಿ ಪತ್ರಕರ್ತರು ಮುನ್ನಡೆಯುವ ಅಗತ್ಯತೆ ಇದೆ. ಒಟ್ಟಾಗಿದ್ದಾಗ ಮಾತ್ರ ಸಂತೋಷ ಮತ್ತು ಒಗ್ಗಟ್ಟು ಇರುತ್ತದೆ. ಒಗ್ಗಟ್ಟಿದ್ದಾಗ ನಮ್ಮಲ್ಲಿನ ಯಾವುದೇ ದೌರ್ಬಲ್ಯಗಳ ಲಾಭವನ್ನು ಇತರರು ಪಡೆಯಲು ಸಾಧ್ಯವಿಲ್ಲವೆಂದು ಪ್ರತಿಪಾದಿಸಿದರು.
ಸಂಘದ ಸದಸ್ಯ ರಜತ್ ರಾಜ್ ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ಸ್ವಾಗತಿಸಿದರು. ಸಂಘÀದ ಸಲಹೆಗಾರರಾದ ಅನಿಲ್ ಎಚ್.ಟಿ. ಕಾರ್ಯಕ್ರಮವನ್ನು ನಿರೂಪಿಸಿ, ವೀರಾಜಪೇಟೆ ಘಟಕದ ಅಧ್ಯಕ್ಷ ಮಧೋಷ್ ಪೂವಯ್ಯ ವಂದಿಸಿದರು.