ಮಡಿಕೇರಿ, ಜು.೧: ಭಾರತ ಸರಕಾರವು ಜುಲೈ ಒಂದರಿAದ ದೇಶದಲ್ಲಿ ಕ್ರಿಮಿನಲ್ ಅಪರಾಧಗಳಿಗೆ ಶಿಕ್ಷೆ ವಿಧಿಸಲು ಹಲವಾರು ತಿದ್ದುಪಡಿಗಳನ್ನು ಮಾಡಿದ್ದು ಜುಲೈ ೧ ರಿಂದ ಈ ನೂತನ ಕಾನೂನು ಜಾರಿಗೊಳ್ಳುತ್ತಿದೆ. ಇದುವರೆಗೆ ಅಸ್ತಿತ್ವದಲ್ಲಿದ್ದ ಐಪಿಸಿ, ಸಿಆರ್ಪಿಸಿಗಳ ಬಳಕೆ ಇನ್ನು ಮುಂದೆ ಸ್ಥÀಗಿತಗೊಳ್ಳಲಿದೆ. ಅಲ್ಲದೆ, ಎವಿಡೆನ್ಸ್ ಆ್ಯಕ್ಟ್ನಲ್ಲಿ ಬದಲಾವಣೆ ತರಲಾಗಿದೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್), ಭಾರತೀಯ ನಾಗರಿಕ ಸುರಕ್ಷಾ ಸಂಹಿತೆÀ (ಬಿಎನ್ಎಸ್ಎಸ್) ಮತ್ತು ಭಾರತೀಯ ಸಾಕ್ಷö್ಯ ಅಧಿನಿಯಮ್ (ಬಿಎಸ್ಎ) ಕಾಯ್ದೆ ಜಾರಿಗೊಳ್ಳಲಿದೆ. ಅದೇ ರೀತಿ ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿಯೂ ಯಾವ ರೀತಿ ಸಿದ್ಧತೆ ನಡೆದಿದೆ ಎಂಬ ಕುರಿತು ಜಿಲ್ಲಾ ಎಸ್. ಪಿ. ರಾಮರಾಜನ್ ಅವರನ್ನು “ಶಕ್ತಿ” ಪ್ರಶ್ನಿಸಿದಾಗ ಅವರು ಈ ಕೆಳಗಿನಂತೆ ಪ್ರತಿಕ್ರಿಯಿಸಿದ್ದಾರೆ.
ಸೋಮವಾರದಿಂದಲೇ ಕೊಡಗಿನಲ್ಲಿಯೂ ನೂತನ ಕಾನೂನು ಸಮರ್ಪಕವಾಗಿ ಜಾರಿಗೊಳ್ಳುತ್ತಿದೆ. ಈಗಾಗಲೇ ಜಿಲ್ಲೆಯ ಪೊಲೀಸರಿಗೆ ಹಾಗೂ ಅಧಿಕಾರಿಗಳಿಗೆ ಈ ಕುರಿತು ಸಾಕಷ್ಟು ತರಬೇತಿ ನಡೆಸಲಾಗಿದೆ. ಸದ್ಯದ ಮಟ್ಟಿಗೆ ಎಲ್ಲಾ ಎಫ್.ಐ.ಆರ್ಗಳನ್ನು ಅಧಿಕೃತಗೊಳಿಸುವ ಮುನ್ನ ನನ್ನ ಗಮನಕ್ಕೆ ತರುವಂತೆ ನಿರ್ದೇಶನ ನೀಡಿದ್ದೇನೆ. ನಾನು ಪರಿಶೀಲಿಸಿದ ಬಳಿಕ ಅಂತಿಮಗೊಳಿಸಲಾಗುತ್ತ್ತಿದೆ. ಇನ್ನೂ ೧೦ ದಿನಗಳ ಕಾಲ ಪೊಲೀಸರಿಗೆ ಈ ಕುರಿತು ತರಬೇತಿ ರೀತಿಯಲ್ಲಿಯೇ ವ್ಯವಹರಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಸಾಕಷ್ಟು ಪರಿಣಿತಿ ಪಡೆದಿದ್ದಾರೆ. ಅನೇಕ ಕಾನೂನುಗಳು ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಬದಲಾವಣೆಗೊಂಡಿ ರುವುದರಿಂದ ಅಷ್ಟೇನೂ ಕಷ್ಟಕರವಾಗದು.
ಆದರೆ, ಈಗ ಐಪಿಎಸ್ ಬಳಕೆ ಬದಲು ಬಿಎನ್ಎಸ್ಎಸ್ ಬಳಸಬೇಕು. ಅದೇ ರೀತಿ ಸೆಕ್ಷನ್ಗಳÀÄ ಕೂಡ ಸಂಖ್ಯಾ ಕ್ರಮದಲ್ಲಿ ಬದಲಾಗಿದ್ದು ಮೊಕದ್ದಮೆಯಲ್ಲಿ ನಮೂದಿಸುವಾಗ ಬದಲೀ ಸಂಖ್ಯೆ ನಮೂದಿಸುವ ಕುರಿತು ಗಮನ ಹರಿಸಬೇಕಾಗಿದೆ. ಕೆಲವು ಮೊಕದ್ದಮೆಗಳಲ್ಲಿ ಬಿಎನ್ಎಸ್ಎಸ್ ಹಾಗೂ ಬಿಎಸ್ಎ ಬಳಸಬೇಕಾಗಿದೆ ಎಂದು ಅವರು ವಿವರಿಸಿದರು.
ಅಲ್ಲದೆ, ಈ ಹಿಂದೆ ದಾಖಲಾಗಿದ್ದ ಮೊಕದ್ದಮೆಗಳು ಐಪಿಎಸ್ ಇದ್ದರೆ ಅದೇ ರೀತಿ ಮುಂದುವರಿಯುತ್ತದೆ. ಇಂದಿನಿAದ ಮೊಕದ್ದÀಮೆ ದಾಖಲಾಗಿದ್ದರೂ ನಡೆದ ಪ್ರಕರಣವೇನಾದರೂ ಈ ಹಿಂದಿನ ದಿನಗಳಾಗಿದ್ದರೆ ಈ ಹಿಂದಿನ ಕಾನೂನಿನಡಿಯೇ ದಾಖಲಾಗುತ್ತದೆ. ಆದರೆÀ, ಜುಲೈ ೧ ರ ಬಳಿಕ ನಡೆಯುವ ಪ್ರಕರÀಣಗಳು ಮಾತ್ರ ಹೊಸ ಕಾನೂನಿನ ಅನ್ವಯವೇ ತನಿಖೆೆಗೆ ಒಳಪಡುತ್ತದೆ ಎಂದು ಎಸ್ಪಿ ರಾಮರಾಜನ್ ಸ್ಪಷ್ಟಪಡಿಸಿದರು.