ಕಡಂಗ, ಜು. ೧: ಇತ್ತೀಚೆಗೆ ಗೋವಾದಲ್ಲಿ ನಡೆದ ರಾಷ್ಟ್ರೀಯ ಮುಕ್ತ ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ ಚಿನ್ನದ ಪದಕ ಗಳಿಸಿದ್ದು, ತಂಡದಲ್ಲಿ ಕುಂಜಿಲಗೇರಿ ಗ್ರಾಮದ ಯಶ್ವಿತ್ ರೈ ಭಾಗವಹಿಸಿದ್ದರು. ಇವರು ಕುಂಜಿಲಗೇರಿ ಗ್ರಾಮದ ಬಿ.ಪಿ. ಉಲ್ಲಾಸ್ ರೈ ಮತ್ತು ಬಿ.ಯು. ಸುಜಾತಾ ರೈ ದಂಪತಿಯ ಪುತ್ರ.
ತರಬೇತುದಾರ ಸುರೇಶ್ ಟಿ. ಅವರ ನೇತೃತ್ವದಲ್ಲಿ ನಡೆದ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡು ತಂಡಕ್ಕೆ ಆಯ್ಕೆಯಾಗಿ ಈ ಸಾಧನೆ ಮಾಡಿದ್ದಾರೆ.