ಮಡಿಕೇರಿ, ಜೂ. ೨೯: ದೇಶದ ರಕ್ಷಣಾ ಪಡೆಯ ವಿಚಾರದಲ್ಲಿ ಕೊಡಗು ಜಿಲ್ಲೆ ವಿಶೇಷವಾಗಿ ಗುರುತಿಸಲ್ಪಟ್ಟಿದೆ. ಭಾರತೀಯ ಸೇನೆಯಲ್ಲಿನ ಸೇವೆ - ಸಾಧನೆಯಿಂದಾಗಿ ಜಿಲ್ಲೆಯ ಹಲವರು ವಿಶೇಷ ಹೆಸರು ಮಾಡಿದ್ದಾರೆ. ಫೀಲ್ಡ್ ಮಾರ್ಷಲ್ ಖ್ಯಾತಿಯ ಜನರಲ್ ಕೆ.ಎಂ. ಕಾರ್ಯಪ್ಪ, ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯರಿಂದ ಹಿಡಿದು ಹಲವಾರು ವೀರ ಸೇನಾನಿಗಳು ಈ ಪಟ್ಟಿಯಲ್ಲಿದ್ದಾರೆ.
ರಾಷ್ಟçದ ರಾಜಧಾನಿ ನವದೆಹಲಿಯಲ್ಲಿರುವ ಸೇನಾ ಪೆರೇಡ್ ಮೈದಾನ ಕೂಡ ಫೀ.ಮಾ. ಕಾರ್ಯಪ್ಪ ಅವರ ಪ್ರತಿಮೆಯೊಂದಿಗೆ ಕಾರ್ಯಪ್ಪ ಪೆರೇಡ್ ಗ್ರೌಂಡ್ ಎಂದೇ ನಾಮಾಂಕಿತವಾಗಿರುವುದು ಕೊಡಗಿಗೆ, ರಾಜ್ಯಕ್ಕೆ ಹೆಮ್ಮೆಯ ವಿಚಾರವಾಗಿದೆ. ದೇಶದ ಹಲವೆಡೆಗಳಲ್ಲೂ ಕಾರ್ಯಪ್ಪ, ತಿಮ್ಮಯ್ಯ ಮತ್ತಿತರ ಸಾಧಕರ ಪ್ರತಿಮೆ, ಹೆಸರುಗಳನ್ನು ಇಡಲಾಗಿದೆ.
ಇದೀಗ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿಯೂ ಜಿಲ್ಲೆಯ ಇಬ್ಬರು ಸೇನಾದಂತಕಥೆಗಳ ಐತಿಹ್ಯ ಪ್ರತಿಬಿಂಬಿತವಾಗಿರುವುದು ಮತ್ತೊಂದು ವಿಶೇಷವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿರುವ ಪೆರೇಡ್ ಮೈದಾನ ರಾಷ್ಟçದ ಮತ್ತೊಬ್ಬರು ಫೀಲ್ಡ್ ಮಾರ್ಷಲ್ ಖ್ಯಾತಿಯ ಸ್ಯಾಮ್ ಮಾಣಿಕ್ ಷಾ ಅವರ ಹೆಸರಿನಲ್ಲಿದೆ.
ಇದೀಗ ಈ ಮೈದಾನದ ಆವರಣದಲ್ಲಿ ಸೇನಾ ಇತಿಹಾಸದಲ್ಲಿ ಕೀರ್ತಿ ಪಡೆದಿರುವ ವೀರ ಸೇನಾನಿಗಳನ್ನು ಪರಿಚಯಿಸಿ ಯುವ ಪೀಳಿಗೆಗೆ ಉತ್ತೇಜನ ಮೂಡಿಸುವ ನಿಟ್ಟಿನಲ್ಲಿ ವಿವಿಧ ಸೇನಾ ಬಿರುದು ಪಡೆದವರನ್ನು ಪ್ರತಿಬಿಂಬಿಸುವ ಗ್ಯಾಲಂಟ್ರಿ ವಾಕ್ ವೇಯೊಂದನ್ನು ನಿರ್ಮಿಸಲಾಗಿದೆ. ಪರಮವೀರ ಚಕ್ರ, ಅಶೋಕ ಚಕ್ರ, ಮಹಾವೀರ ಚಕ್ರ ಪುರಸ್ಕೃತರು ಸೇರಿದಂತೆ ಕರ್ನಾಟದವರಾಗಿ ಉನ್ನತ ಶೌರ್ಯ ಪ್ರಶಸ್ತಿ ಪುರಸ್ಕೃತರಾದ ಏಳು ಮಂದಿಯ ಪ್ರತಿಮೆಗಳನ್ನು ಈ ಗ್ಯಾಲಂಟ್ರಿ ವಾಕ್ ವೇ ಪ್ರದರ್ಶಿಸುತ್ತದೆ. ಈ ಗ್ಯಾಲಂಟ್ರಿವಾಕ್ವೇಯಲ್ಲಿ ಕೊಡಗಿನವರಾದ ಮಹಾವೀರಚಕ್ರ ಪುರಸ್ಕೃತರಾಗಿರುವ ಸ್ಕಾ÷್ವಡ್ರನ್ ಲೀಟರ್ ದಿ. ಅಜ್ಜಮಾಡ ಬಿ. ದೇವಯ್ಯ ಹಾಗೂ ಮತ್ತೋರ್ವ ಮಹಾವೀರ ಚಕ್ರ ಬಿರುದು ಪಡೆದಿರುವ ಹಾಲಿ ಬೆಂಗಳೂರಿನಲ್ಲಿ ವಾಸವಾಗಿರುವ ಕರ್ನಲ್ ಪುಟ್ಟಿಚಂಡ ಎಸ್. ಗಣಪತಿ ಅವರುಗಳ ಪುತ್ಥಳಿ ಕೂಡ ಗೌರವಯುತವಾಗಿ ಅಳವಡಿಸಲ್ಪಟ್ಟಿರುವುದು ಕೊಡಗಿನ ಸೇನಾ ಹಿರಿಮೆಗೆ ಮತ್ತೊಂದು ಸಾಕ್ಷಿಯಾಗಿದೆ. ಪುತ್ಥಳಿಯಲ್ಲಿ ಸೇನೆಯಲ್ಲಿ ಇವರಿಬ್ಬರು ತೋರಿರುವ ಸಾಹಸದ ಯಶೋಗಾಥೆಯನ್ನು ನೀಡಲಾಗಿದೆ.
ಬೆಂಗಳೂರಿನ ಕಬ್ಬನ್ ರಸ್ತೆಯಲ್ಲಿರುವ ಮಾಣಿಕ್ಷಾ ಪೆರೇಡ್ ಮೈದಾನದ ಗ್ರಾö್ಯಂಡ್ಗೇಟ್ನ ಪಕ್ಕದಲ್ಲಿರುವ ಈ ಗ್ಯಾಲಂಟ್ರಿ ವಾಕ್ ವೇಯ ಉದ್ಘಾಟನೆ ಇದೀಗ ನಡೆದಿದೆ. ಈ ಐತಿಹಾಸಿಕ ಸ್ಥಳ ಮಿಲಿಟರಿ ಪರಂಪರೆಯನ್ನು ಪ್ರತಿಬಿಂಬಿಸುತ್ತಿದೆ. ರಾಷ್ಟçದ ಭದ್ರತೆಯ ಕಡೆಗೆ ಭಾರತೀಯ ಸೇನೆಯು ಪ್ರದರ್ಶಿಸಿದ ತ್ಯಾಗ ಮತ್ತು ಅಚಲ ಬದ್ಧತೆಯ ಸ್ಮರಣೆಯಾಗಿ ವಾಕ್ ವೇ ಯನ್ನು ಅಭಿವೃದ್ಧಿ ಪಡಿಸಲಾಗಿದೆ.
ಕರ್ನಾಟಕ - ಕೇರಳ ಸಬ್ ಏರಿಯಾದ ಮೇಜರ್ ಜನರಲ್ ರವಿ ಮುರುಗನ್ ಅವರು ಈ ಗ್ಯಾಲಂಟ್ರಿ ವಾಕ್ ವೇ ಯನ್ನು ಉದ್ಘಾಟಿಸಿದರು. ಸೇನಾ ಸಂಬAಧಿತ ಚಟುವಟಿಕೆ ನಡುವೆ ಶಿಸ್ತುಬದ್ಧವಾಗಿ ಕಾರ್ಯಕ್ರಮ ಜರುಗಿತು.
- ಶಶಿ ಸೋಮಯ್ಯ