ಮಡಿಕೇರಿ, ಜೂ. ೨೯: ಮಡಿಕೇರಿ ನಗರದ ಕೊಹಿನೂರು ರಸ್ತೆಯಲ್ಲಿ ಲಾರಿ ನಿಲ್ದಾಣದ ಬಳಿ ಇರುವ ಶೌಚಾಲಯವು ಇದೀಗ ಮದ್ಯಪಾನ ತಾಣವಾಗಿ ಮಾರ್ಪ ಟ್ಟಿದೆ. ಆಗಂತಕರು ಇಲ್ಲಿ ರಾತ್ರಿ ವೇಳೆ ಮದ್ಯ ಸೇವಿಸಿ ಬಾಟಲಿಗಳನ್ನು ಎಸೆದು ಹೋಗುತ್ತಿರುವುದು ದುರ್ಗೋ ಚರವಾಗಿದೆ. ಅನೇಕ ಪ್ರವಾಸಿಗರು, ಸ್ಥಳೀಯರು ಕೂಡ ಈ ಹಿಂದೆ ಈ ಸುಲಭ್ ಶೌಚಾಲಯವನ್ನು ಬಳಸು ತ್ತಿದ್ದು ಪ್ರಯೋಜನಕಾರಿಯಾಗಿತ್ತು. ಈ ಶೌಚಾಲಯವನ್ನು ಪ್ರವಾಸೋದ್ಯಮ ಇಲಾಖೆಯು ನಿರ್ಮಿ ಸಿದ್ದು, ನಿರ್ವಹಣೆಯ ಜವಾಬ್ದಾರಿ ಕೆಯು ಅವರದ್ದಾಗಿದೆ. ಆದರೆ ಇದೀಗ ಶೌಚಾಲಯ ಗಬ್ಬೆದ್ದು ಹೋಗಿದ್ದು, ಇದನ್ನು ಯಾರು ಬಳಸುವ ಸ್ಥಿತಿಯಲ್ಲಿಲ್ಲ. ಅತ್ಯಂತ ಅಸಹ್ಯ ಸ್ಥಿತಿಯಲ್ಲಿದ್ದು, ದಾರಿಹೋ ಕರಿಗೆ ಮಾಲಿನ್ಯದ ದರ್ಶನದೊಂದಿಗೆ ವಾಸನೆ ಪಸರಿಸುತ್ತಿದೆ. ಈಗಲಾದರೂ ಪ್ರವಾಸೋದ್ಯಮ ಇಲಾಖೆ ಇದನ್ನು ಗಮನಿಸಿ ದುರಸ್ತಿಗೊಳಿಸಿ ಸಾರ್ವಜನಿ ಕರಿಗೆ ಉಪಯೋಗವಾಗುವ ರೀತಿ ಯಲ್ಲಿ ವ್ಯವಸ್ಥೆಗೊಳಿಸುವಂತೆ ನಾಗರಿ ಕರು ಕೋರಿದ್ದಾರೆ. ಹಿಂದೆ ಇಲ್ಲಿ ಸಿಬ್ಬಂದಿಯೊಬ್ಬರಿದ್ದು, ಹಣ ಪಡೆದು ಶೌಚಾಲಯ ಬಳಸಲು ಅವಕಾಶವಿತ್ತು. ಶುಚಿತ್ವವು ಕೂಡ ನಿರ್ವಹಣೆ ಯಾಗುತ್ತಿತ್ತು. ಅದೇ ವ್ಯವಸ್ಥೆಯನ್ನು ಮುಂದುವರಿಸುವAತೆಯೂ ನಾಗರಿಕರು ಸಲಹೆಯಿತ್ತಿದ್ದಾರೆ.

ಚಿತ್ರ ವರದಿ : ಟಿ.ಜಿ. ಸತೀಶ್