\ಮಡಿಕೇರಿ, ಜೂ. ೨೯: ಕೊಣಂಜಗೇರಿ ಪಂಚಾಯಿತಿ ವ್ಯಾಪ್ತಿಯ ಪಾರಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಅಂರ್ರಾಷ್ಟಿçÃಯ ಯೋಗ ದಿನ ಆಚರಿಸಲಾಯಿತು. ಆಯುಷ್ ಆರೋಗ್ಯ ಮತ್ತು ಯೋಗ ಕೇಂದ್ರದ, ಯೋಗ ತರಬೇತುದಾರರಾದ ಕನ್ನಿಕಾ ಮತ್ತು ಪಾರಾಣೆ ಸರ್ಕಾರಿ ಹೋಮಿಯೋಪತಿ ವೈದ್ಯೆ ಡಾ. ವೃಂದ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಯೋಗದ ಮೂಲಕ ದೇಹದ ಆರೋಗ್ಯ ಮತ್ತು ಜೀವನ ಸಮತೋಲನದ ಮಹತ್ವವನ್ನು ಪ್ರಾಯೋಗಿಕವಾಗಿ ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ಕೊಣಂಜಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಡೆಯಂಡ ಕಟ್ಟಿ ಕುಶಾಲಪ್ಪ, ಮುಖ್ಯೋಪಾಧ್ಯಾಯ ವೇದ ಪ್ರಸಾದ್, ಸಹಶಿಕ್ಷಕ ಕಿಶೋರ್ ಕುಮಾರ್, ಅತಿಥಿ ಶಿಕ್ಷಕರಾದ ಸುಮಿತ್ರ, ಮಂಜುಳ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.