ವೀರಾಜಪೇಟೆ, ಜೂ. ೨೯: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೆಸರಿನಲ್ಲಿ ಈಶ್ವರ ಮತ್ತು ಚಾಮುಂಡಿ ದೇವರುಗಳ ದೇಗುಲದಲ್ಲಿ ವಲಯ ಕಾಂಗ್ರೆಸ್ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.

ವೀರಾಜಪೇಟೆ ತಾಲೂಕು ಕೆದಮುಳ್ಳೂರು ವಲಯ ಕಾಂಗ್ರೆಸ್ ವತಿಯಿಂದ ಶಾಸಕರ ಆಯುಷ್ಯ, ಆರೋಗ್ಯ ವೃದ್ಧಿಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕೆದಮುಳ್ಳೂರು ವಲಯ ಕಾಂಗ್ರೆಸ್ ಅಧ್ಯಕ್ಷ ನಡಿಕೇರಿಯಂಡ ಮಹೇಶ್ ಅವರು ಮಾತನಾಡಿ, ಪ್ರತಿಭಟನೆಯ ವೇಳೆಯಲ್ಲಿ ಶಾಸಕರ ಪ್ರತಿಕೃತಿ ದಹನ ಮಾಡಿರುವುದು ಖಂಡನೀಯ ಎಂದರು.

ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಳೆಟೀರ ಜೆಫ್ರಿ ಉತ್ತಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಮಾಳೆಟೀರ ಪ್ರಶಾಂತ್ ಉತ್ತಪ್ಪ, ಡಿ.ಸಿ.ಸಿ ಸದಸ್ಯರಾದ ಬೆಲ್ಲು ಬೋಪಯ್ಯ, ಸುಭಾಷ್, ಸುಬ್ಬಯ್ಯ, ವಿಜಯ್ ಮಂದಣ್ಣ, ಪೊನ್ನು ಪೊನ್ನಪ್ಪ, ಪಾಲಂಗಾಲ ಗ್ರಾಮದ ಕರಿನೆರವಂಡ ಜಾಲು ಚೆಂಗಪ್ಪ, ಜೀತನ್, ಡ್ಯಾನಿ ಕುಶಾಲಪ್ಪ, ಮಿಟ್ಟು ಅಯ್ಯಪ್ಪ, ತಂಬAಡ ಇಮ್ಮಿ ಪೊನ್ನಪ್ಪ ಮತ್ತು ಕಾರ್ಯಕರ್ತರು ಹಾಜರಿದ್ದರು.