ಮಡಿಕೇರಿ, ಜೂ. ೨೭: ಕೊಡಗು-ಕರ್ನಾಟಕ ಗಡಿಭಾಗದ ಕೇರಳ ಗಡಿ ಪ್ರದೇಶದಲ್ಲಿ ನೆಲದಡಿಯಲ್ಲಿ ಹುದುಗಿದ್ದ ನೆಲಬಾಂಬ್ ಪತ್ತೆಯಾಗಿದೆ. ಈ ಬಾಂಬ್ ಅನ್ನು ಈಗಾಗಲೇ ಕೇರಳ ಪೊಲೀಸರು ನಿಷ್ಕಿçಯಗೊಳಿಸಿದ್ದಾರೆ. ಈ ಸಂಬAಧ ಆರೋಪಿಗಳ ಶೋಧಕ್ಕಾಗಿ ಕೇರಳ ಪೊಲೀಸರು ಕೂಂಬಿAಗ್ ನಡೆಸುತ್ತಿದ್ದಾರೆ. ಕೊಡಗು ಜಿಲ್ಲೆಯ ಪ್ರದೇಶಗಳಲ್ಲಿ ನಡೆಸುವ ಕೂಂಬಿAಗ್ ಸಂದರ್ಭ ಜಿಲ್ಲೆಯ ಪೊಲೀಸರು ಕೂಡ ಸಹಕರಿಸುತ್ತಿದ್ದಾರೆ. ಕೇರಳ ಪೊಲೀಸರಿಂದ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕೊಡಗು ಎಸ್ಪಿ ರಾಮರಾಜನ್ ಖಚಿತಪಡಿಸಿದ್ದಾರೆ. ಅವರಿಗೆ ಅಗತ್ಯವಿರುವಾಗ ಕೊಡಗು ಪೊಲೀಸರು ಕೂಡ ಕೊಡಗು ವ್ಯಾಪ್ತಿಯಲ್ಲಿನ ಪ್ರದೇಶಗಳಲ್ಲಿ ಕೂಂಬಿAಗ್ ಕಾರ್ಯದಲ್ಲಿ ಸಹಕರಿಸುತ್ತಾರೆ ಎಂದು ಎಸ್. ಪಿ. “ಶಕ್ತಿ”ಗೆ ಮಾಹಿತಿಯಿತ್ತಿದ್ದಾರೆ.

ಕೇರಳದ ಗಡಿಭಾಗದ ತಲಪ್ಪುಳ, ಮಕ್ಕಿಮಲ ಮತ್ತು ಕೊಡಕ್ಕಾಡ್ ಅರಣ್ಯ ಪ್ರದೇಶಗಳಿಗೆ ಹೊಂದಿಕೊAಡಿರುವ ಕೊಡಗಿನ ಬಿರುನಾಣಿ ಗ್ರಾಮದ ಬಳಿ ಕೇರಳ ಪೊಲೀಸರು ನೆಲಬಾಂಬ್ ಅನ್ನು ಗುರುತಿಸಿದ್ದಾರೆ. ಬಾಂಬ್ ನಿಷ್ಕಿçಯ ದಳವು ಬಾಂಬ್ ಅನ್ನು ನಿಷ್ಕಿçಯಗೊಳಿಸಿದೆ. ಅಲ್ಲದೆ, ಕೆಲವು ಸ್ಥಳಗಳಲ್ಲಿ ದೊರೆತ ಸ್ಫೋಟಕಗಳನ್ನು ಪತ್ತೆಹಚ್ಚಿ ನಿರ್ಮೂಲನಗೊಳಿಸಲಾಗಿದೆ. ವಯನಾಡಿನ ತಲಪ್ಪುಳದಲ್ಲಿ ಮಾವೋವಾದಿ ಉಗ್ರರÀ ಚಲನವಲನದ ಪ್ರದೇಶದಲ್ಲಿ ನೆಲಬಾಂಬ್ ಸೇರಿದಂತೆ ಸ್ಫೋಟಕ ಸಾಧನಗಳು ಪತ್ತೆಯಾಗಿವೆ. ಈ ದುಷ್ಕಾರ್ಯವನ್ನು ಮಾವೋವಾದಿ ಉಗ್ರರು ನಡೆಸಿದ್ದಾರೆ ಎನ್ನುವುದಕ್ಕೆ ಪೊಲೀಸರಿಗೆ ಖಚಿತ ಆಧಾರ ಲಭ್ಯವಾಗಿದೆ. ಮಕ್ಕಿಮಾಳದ ಕೊಡಕ್ಕಾಡ್ ಅರಣ್ಯದಂಚಿನಲ್ಲಿ ನೆಲಬಾಂಬ್ ಪತ್ತೆಯಾಗಿದೆ. ಈ ಪ್ರದೇಶದಲ್ಲಿ ಜಿಲೆಟಿನ್ ಸ್ಟಿಕ್ ಸೇರಿದಂತೆ ಸ್ಫೋಟಕಗಳನ್ನು ಹೂತಿಟ್ಟಿರುವುದು ಪತ್ತೆಯಾಗಿದೆ. ಇದು ಕೇರಳದ ಬಾಂಬ್ ಪತ್ತೆ ದಳವು ಗಸ್ತು ತಿರುಗುತ್ತಿರುವ ಪ್ರದೇಶವಾಗಿದೆ.

(ಮೊದಲ ಪುಟದಿಂದ) ಇದರಿಂದಾಗಿ ಈ ಬಾಂಬ್ ಹಾಗೂ ಸ್ಫೋಟಕಗಳನ್ನು ಸುಲಭದಲ್ಲಿ ಪತ್ತೆ ಹಚ್ಚಲು ಸಾಧ್ಯವಾಯಿತು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಧಾವಿಸಿದ ಬಾಂಬ್ ಪತ್ತೆ ದಳದ ಸಿಬ್ಬಂದಿ ಸ್ಫೋಟಕಗಳನ್ನು ನಿಷ್ಕಿçಯಗೊಳಿಸಿದ್ದಾರೆ. ಇಲ್ಲದಿದ್ದರೆ ಭಾರೀ ಅನಾಹುತವಾಗುವ ಸಾಧ್ಯತೆಯಿತ್ತು. ದಾರಿ ಹೋಕರಿಗೇ ಅಲ್ಲದೆ ವನ್ಯಪ್ರಾಣಿಗಳ ಜೀವಕ್ಕೂ ಅಪಾಯ ಸಂಭವಿಸಲಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನಾ ಸ್ಥಳದ ಸಮೀಪದಲ್ಲಿ ಬಾಂಬ್ ಜೊತೆ ಸ್ಫೋಟಕಗಳನ್ನು ಕೂಡ ದುಷ್ಕರ್ಮಿಗಳು ಹೂತು ಹಾಕಿದ್ದರು. ಇದೀಗ ಬಾಂಬ್ ನಿಷ್ಕಿçಯ ದಳದ ಸಿಬ್ಬಂದಿ ಈ ಎಲ್ಲ ಸ್ಫೋಟಕ ಹಾಗೂ ಬಾಂಬನ್ನು ಸಂಪೂರ್ಣ ನಿಷ್ಕಿçಯಗೊಳಿಸಿ ಸಂಭವಿಸಲಿದ್ದ ಅಪಾಯವನ್ನು ತಡೆಗಟ್ಟಲು ಯಶಸ್ವಿಯಾಗಿದ್ದಾರೆ. ಈ ಸಂಬAಧ ವಯನಾಡು ವಿಭಾಗದ ತಲಪ್ಪುಳ ಠಾಣಾ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ೧೯೬೭ (ತಿದ್ದುಪಡಿ ಕಾಯ್ದೆ ೨೦೧೨) ರ ಅಡಿಯಲ್ಲಿ ಅಪರಿಚಿತ ಸಿಪಿಐ ಮಾವೋವಾದಿಗಳ ಕಾರ್ಯಕರ್ತರನ್ನು ಆರೋಪಿಗಳಾಗಿಸಿ ಸ್ವಯಂ ಪ್ರೇರಿತ ಮೊಕದ್ದಮೆಯನ್ನು ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗೆ ತನಿಖೆ ಕಾರ್ಯ ಬಿರುಸಿನಿಂದ ಸಾಗಿದೆ.