ಸುಂಟಿಕೊಪ್ಪ, ಜೂ. ೨೭: ಇಲ್ಲಿನ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಚೇರಳ ಶ್ರೀಮಂಗಲ ಹೊಸಮನೆ ಪೂವಯ್ಯ ಅವರ ತೋಟಕ್ಕೆ ಮಂಗಳವಾರ ರಾತ್ರಿ ನಾಲ್ಕು ಕಾಡಾನೆಗಳು ಬಂದು ಅಡಿಕೆ ಮರ, ಕಾಫಿ ಗಿಡ, ತೋಟದ ಬೇಲಿ ಸೇರಿದಂತೆ ಹಲವು ಫಸಲುಗಳನ್ನು ಧ್ವಂಸ ಮಾಡಿವೆ.
ಹಲವಾರು ದಿನಗಳಿಂದ ಕಾಡಾನೆಗಳು ನಿರಂತರ ಕಾಡಿನಿಂದ ನಾಡಿಗೆ ಬಂದು ಸುತ್ತ ಮುತ್ತಲಿನ ತೋಟಗಳನ್ನು ನಾಶ ಪಡಿಸಿ ಇಲ್ಲೇ ನೆಲೆಸಿದ್ದು ,ತೋಟದಲ್ಲಿ ಕಾರ್ಮಿಕರು ಕೆಲಸ ಕಾರ್ಯನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಭಾಗದಿಂದ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಜೀವಭಯದಿಂದ ತೆರಳುವಂತಾಗಿದೆ. ಕೂಡಲೇ ಅರಣ್ಯ ಇಲಾಖೆ ಕಾಡಾನೆಗಳನ್ನು ನಾಡಿನಿಂದ ಕಾಡಿಗೆ ಅಟ್ಟುವಂತೆ ಈ ಭಾಗದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.